ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು, ಮೈಸೂರಿನ ಶಾಲೆಯಲ್ಲಿ ಬೋಂಜೊರ್ ಇಂಡಿಯಾ ಫ್ರೆಂಚ್ ಹಬ್ಬ

|
Google Oneindia Kannada News

ಬೆಂಗಳೂರು, ನವೆಂಬರ್ 18: ಇದೇ ತಿಂಗಳ 17ರಿಂದ ಬೋಂಜೊರ್ ಇಂಡಿಯಾ ಅಂತರಶಾಲೆ ಫ್ರೆಂಚ್ ಹಬ್ಬ ಆರಂಭವಾಗಿದ್ದು, ನವೆಂಬರ್ 25ರ ವರೆಗೆ ಬೆಂಗಳೂರು ನಗರವೂ ಸೇರಿದಂತೆ ದೇಶದಾದ್ಯಂತ ನಡೆಯಲಿದೆ. ದೇಶದಾದ್ಯಂತ ಇರುವ ಎಂಬತ್ತು ಶಾಲೆಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಭಾರತ ಹಾಗೂ ಫ್ರಾನ್ಸ್ ಮಧ್ಯದ ಸಂಬಂಧ ವೃದ್ಧಿ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮದ ಥೀಮ್ ಭಾರತದಲ್ಲಿ ಫ್ರಾನ್ಸ್ ಹಾಗೂ ಫ್ರಾನ್ಸ್ ನಲ್ಲಿ ಭಾರತ ಎಂಬುದಾಗಿದೆ. ಈ ಫ್ರೆಂಚ್ ಹಬ್ಬದಲ್ಲಿ ಹದಿಮೂರರಿಂದ ಹದಿನೆಂಟು ವರ್ಷದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹಸಿರು ಬೆಳೆಸಲು ಪ್ರೋತ್ಸಾಹ, ಔಷಧ, ಹೆಸರಾಂತ ವ್ಯಕ್ತಿಗಳು, ಬರವಣಿಗೆ, ವಾಸ್ತುಶಿಲ್ಪ, ಮಾಧ್ಯಮ, ಸಂಗೀತ, ಕ್ರೀಡೆ, ನಾಟಕ, ಎಂಜಿನಿಯರಿಂಗ್ ಮತ್ತು ಆಹಾರ ಪದ್ಧತಿ ಸೇರಿದಂತೆ ವಿವಿಧ ವಿಷಯಗಳ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

Bonjour India Inter school French Festival November 17th to 25

"ಯಾವುದೇ ದೇಶದ ಭವಿಷ್ಯ ರೂಪಿಸುವವರು ವಿದ್ಯಾರ್ಥಿಗಳು. ಆ ಕಾರಣಕ್ಕೆ ಬೊಂಜೊರ್ ಇಂಡಿಯಾದಲ್ಲಿ ಯುವ ಮನಸ್ಸುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ" ಎಂದು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿರುವ ಡಾ.ಬರ್ಟ್ರೆಂಡ್ ಡಿ ಹಾರ್ಟಿಂಗ್ ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಹೇಳಿದ್ದಾರೆ.

Bonjour India Inter school French Festival November 17th to 25

ಬೊಂಜೊರ್ ಇಂಡಿಯಾ ಕಾರ್ಯಕ್ರಮವು ನವೆಂಬರ್ ನಿಂದ ಆರಂಭವಾಗಿದ್ದು, ಮುಂದಿನ ಫೆಬ್ರವರಿವರೆಗೆ ನಡೆಯಲಿದೆ. ಇಪ್ಪತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮೂವತ್ಮೂರು ನಗರಗಳಲ್ಲಿ ನೂರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಓಕ್ರಿಡ್ಜ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ಶರಣ್ಯಾ ನಾರಾಯಣಿ ಇಂಟರ್ ನ್ಯಾಷನಲ್ ಶಾಲೆ, ಮೈಸೂರಿನ ಫೀನಿಕ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

Bonjour India Inter school French Festival November 17th to 25
English summary
Following the launch of Bonjour India - incubating dreams, ideas and projects which aim to move the partnership between India and France into the future, 80 schools in India are participating in the Bonjour India Inter school French Festival spread across over 21 key cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X