ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಪಿ ನಗರದ ಶಾಲೆಯಲ್ಲಿ ಬಾಂಬ್ ನಂಥ ವಸ್ತು ಪತ್ತೆ!

By Mahesh
|
Google Oneindia Kannada News

ಬೆಂಗಳೂರು, ಸೆ. 20: ಜಯಪ್ರಕಾಶ್ ನಗರದಲ್ಲಿ ಬೆಳ್ಳಂಬೆಳಗ್ಗೆ ಬಾಂಬ್ ಭೀತಿ ಹುಟ್ಟಿಕೊಂಡಿತ್ತು. ಕಿಡಿಗೇಡಿಗಳು ಪ್ಲೇ ಹೋಮ್ ವೊಂದರಲ್ಲಿ ಬಾಂಬ್ ನಂಥ ವಸ್ತು ಇಟ್ಟು ಆತಂಕ ಸೃಷ್ಟಿಸಲು ಸಂಚು ರೂಪಿಸಿರಬಹುದು ಎಂದು ಪುಟ್ಟೇನಹಳ್ಳಿ ಪೊಲೀಸರು ಶಂಕಿಸಿದ್ದಾರೆ.

ಜೆಪಿ ನಗರ ಆರನೇ ಹಂತದಲ್ಲಿರುವ ಬ್ರೂಕ್ ಲ್ಯಾಂಡ್ಸ್ ಪ್ರೀ ಸ್ಕೂಲ್ ಆವರಣದಲ್ಲಿ ಬೆಳಗ್ಗೆ ಶಾಲಾ ಬ್ಯಾಗ್ ಹಾಗೂ ಅದರ ಮೇಲೆ ಸ್ಫೋಟಕಗಳನ್ನಿಟ್ಟಿರುವುದು ಹಾಗೂ ವೈರ್ ಗಳನ್ನು ಬೆಸೆರಿರುವುದು ಕಂಡು ಬಂದಿದೆ. ಮುಂಜಾನೆ ವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಆತಂಕಕ್ಕೊಂಡು ಶಾಲಾ ಮಂಡಳಿಗೆ ವಿಷಯ ತಿಳಿಸಿದ್ದಾರೆ. ನಂತರ ವಿಷಯ ಪೊಲೀಸರಿಗೆ ಮುಟ್ಟಿ, ತಕ್ಷಣವೇ ಪರಿಶೀಲನೆ ನಡೆಸಿದ್ದಾರೆ.

Bomb scare at JP Nagar 6th phase school, Bengaluru

ಪ್ರೀ ಸ್ಕೂಲ್ ಹಾಗೂ ಸುತ್ತಮುತ್ತ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿ, ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯ ಇಲ್ಲವೆಂದು ಪೊಲೀಸರು ಭರವಸೆ ನೀಡಿದ ಬಳಿಕ ಅಕ್ಕಪಕ್ಕದ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮೊಬೈಲ್ ಪವರ್ ಬ್ಯಾಂಕ್‌ನಲ್ಲಿ ಕೆಲವು ವೈರ್‌ಗಳನ್ನು ಜೋಡಿಸಿ ಬ್ಯಾಗಿನೊಳಗೆ ಇಡಲಾಗಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಜತೆಗೆ ಜಿಲೇಟಿನ್ ಕಡ್ಡಿಯ ಮಾದರಿ ವಸ್ತು ಸಿಕ್ಕಿದ್ದರಿಂದ ಸಹಜವಾಗಿ ಆತಂಕ ಹೆಚ್ಚಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಶಾಲೆಯ ಸುತ್ತಮುತ್ತವಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಮುಂಜಾನೆ ವಾಕಿಂಗ್ ಗೆ ಬಂದಿದ್ದ ವ್ಯಕ್ತಿಯೊಬ್ಬನನ್ನು ವಿಚಾರಣೆಗೊಳಪಡಿಸಲಾಗಿದೆ. ಶಾಲೆಯಲ್ಲಿ ಸಿಕ್ಕಿರುವ ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

English summary
A Bomb scare has been alerted in JP Nagar 6th phase, Bengaluru. Bomb disposal squad rushed to the spot along with sniffer dogs. Suspicious objects were found in front of a playhome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X