ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ

By Nayana
|
Google Oneindia Kannada News

ಬೆಂಗಳೂರು, ಜು.12: ಇನ್ನುಮುಂದೆ ಪೋಸ್ಟ್‌ನಲ್ಲಿ ಬರಲಿದೆ ಬಿಎಂಟಿಸಿ ಬಸ್‌ ಪಾಸ್‌ ಯಾಕೆ ಅಂತೀರಾ ಮುಂದೆ ಸುದ್ದಿ ಓದಿ, ಈ ಸಾಲಿನಲ್ಲಿ ನೇರವಾಗಿ ಶಾಲೆಗೆ ವಿದ್ಯಾರ್ಥಿ ಪಾಸ್‌ ತಲುಪಿಸುವ ಯೋಜನೆಗೆ ಬಿಎಂಟಿಸಿ ಸಿದ್ಧವಾಗಿದೆ.

ಇಂದಿನಿಂದ ಮೊದಲ ಹಂತದಲ್ಲಿ ನಗರದ ಕೆಲವು ಶಾಲೆಗಳಿಗೆ ಬಸ್‌ ಪಾಸ್‌ ವಿತರಣೆಯಾಗಲಿದ್ದು ಮುಂದಿನ ದಿನದಲ್ಲಿ ಮನೆಗೇ ಪಾಸ್‌ ವ್ಯವಸ್ಥೆಯನ್ನು ನಿಗಮ ಮಾಡಲಿದೆ. ಪ್ರತಿ ವರ್ಷ 33.250 ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, 60 ಸಾವಿರ ಪ್ರೌಢಶಾಲೆ ವಿದ್ಯಾರ್ಥಿಗಳು, 1.05 ಲಕ್ಷ ಪಿಯು ವಿದ್ಯಾರ್ಥಿಗಳು, 95 ಸಾವಿರ ಕಾಲೇಜು ವಿದ್ಯಾರ್ಥಿಗಳು, 80 ಸಾವಿರ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳು ಪಡೆಯಲಿದ್ದಾರೆ.

ಬಿಎಂಟಿಸಿ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆಬಿಎಂಟಿಸಿ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ

ಈ ವರ್ಷದಲ್ಲಿ ಈವರೆಗೆ ಶಿಕ್ಷಣ ಇಲಾಖೆಯ ಎಸ್‌ಎಟಿಎಸ್‌ನಲ್ಲಿ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ ವೆಬ್‌ಫೇಸ್‌ ಮತ್ತು ಮೊಬೈಲ್‌ ಇಂಟರ್‌ಫೇಸ್‌ ಮತ್ತು ಮೊಬೈಲ್‌ ಇಂಟರ್‌ಫೇಸ್‌ ಮೂಲಕ 59 ಸಾವಿರ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿದ್ದಾರೆ.

BMTC will send bus pass to students address through post

ಮೊಬೈಲ್‌ನಲ್ಲಿ 161 ಸಂಖ್ಯೆಗೆ ಕರೆ ಮಾಡಿ, ಬಿಎಂಟಿಸಿ ಆಯ್ಕೆಗೆ 6 ಒತ್ತಬೇಕು. ನಂತರದಲ್ಲಿ ವಿದ್ಯಾರ್ಥಿ ಪಾಸ್‌ಗಾಗಿ 2 ಒತ್ತಬೇಕು. ಈ ಸಂದರ್ಭದಲ್ಲಿ ಅರ್ಜಿ ವೆಬ್‌ಲಿಂಕ್‌ ಒಂದನ್ನು ಮೊಬೈಲ್‌ಗೆ ಕಳುಹಿಸಲಾಗುತ್ತದೆ ಅಲ್ಲಿ ಅರ್ಜಿ ಭರ್ತಿ ಮಾಡಿ ಕಳುಹಿಸಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ನೇರವಾಗಿ ಬಿಎಂಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

English summary
BMTC will will resume distribution of bus pass from July 12 and in second phase the corporation is planning to send bus pass to students address through postal service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X