ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಒಂದು ವಾರದಲ್ಲಿ ಟೆಂಡರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 23 : 150 ಎಲೆಕ್ಟ್ರಿಕ್ ಬಸ್ ಗಳನ್ನು ಕಾರ್ಯಾಚರಣೆ ನಡೆಸಲು ತುದಿಗಾಲಲ್ಲಿ ನಿಂತಿರುವ ಬಿಎಂಟಿಸಿ ವಾರದಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಖರೀದಿಸದೆ ಗುತ್ತಿಗೆ ಆಧಾರದಲ್ಲಿ ಬಸ್ ಪಡೆಯಲು ನಿಗಮ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 10 ವರ್ಷಗಳ ಒಪ್ಪಂದ ಮಾಡಿಕೊಳ್ಳಲಿದೆ.

ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್

ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನ್ಯುಫ್ಯಾಕ್ಷರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಅನುದಾನ ಬಳಸಿಕೊಂಡು ದೇಶಾದ್ಯಂತ ಹಲವು ರಾಜ್ಯಗಳು ಎಲೆಕ್ಟ್ರಿಕ್ ಬಸ್ ಖರೀದಿಗೆ ಸಿದ್ಧತೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕಿಂಗ್ಸ್ ಬಿಎಂಟಿಸಿ ಸಹಯೋಗದಲ್ಲಿ ಸಭೆ ನಡೆಸಿದೆ.

BMTC will hire 150 electric buses soon

ಸಾರಿಗೆ ಸಚಿವ ಎಚ್ ಎಂ. ರೇವಣ್ಣ ಅವರೊಂದಿಗೆ ಎಲೆಕ್ಟ್ರಿಕ್ ಬಸ್ ತಯಾರಕರು, ಬ್ಯಾಟರಿ ತಯಾರಕರು, ಆಪರೇಟರ್ ಗಳು, ಹಿಮಾಚಲ ಪ್ರದೇಶ, ಮುಂಬೈ ಹಲವು ರಾಜ್ಯಗಳ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು.

ಬಿಎಂಟಿಸಿ ಗುತ್ತಿಗೆ ಅಧಾರದಲ್ಲಿ 10 ವರ್ಷಗಳ ಒಪ್ಪಂದ ಮಾಡಿಕೊಂಡು ಬಸ್ ಪಡೆಯಲಿದೆ. ನಂತರದಲ್ಲಿ ಪ್ರತಿ ಕಿ.ಮೀ. ಇಂತಿಷ್ಟು ಎಂದು ಟೆಂಡರ್ ಪಡೆದ ಆಪರೇಟರ್ ಗೆ ನಿಗಮ ನೀಡಲಿದೆ. ಕೇಂದ್ರ ಸರ್ಕಾರ ಪ್ರತಿ ಬಸ್ ಗೆ ೮೫ ಲಕ್ಷ ರೂ. ಸಹಾಯಧನ ನೀಡುತ್ತಿದ್ದು, ಇದನ್ನೇ ಗುತ್ತಿಗೆ ಆಧಾರದಲ್ಲಿ ಬಸ್ ಕಾರ್ಯಾಚರಣೆಗೆ ಬಳಸಿಕೊಳ್ಳಲಿದೆ.

ಮೈಸೂರು ರಸ್ತೆಗೆ ಡಬಲ್ ಡೆಕ್ಕರ್: ಬಿಎಂಟಿಸಿಗೆ 5 ಡಬಲ್ ಡೆಕ್ಕರ್ ಬಸ್ ಖರೀದಿಸಲು ಮಂಡಳಿ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಮೈಸೂರು ರಸ್ತೆ ವಿಸ್ತರಣೆ ಆಗಲಿದ್ದು. ಆ ರಸ್ತೆಯಲ್ಲೂ ಡಬಲ್ ಡೆಕ್ಕರ್ ಬಸ್ ಓಡಿಸುವ ಚಿಂತನೆ ನಡೆಸಲಾಗಿದೆ ಎಂದು ರೇವಣ್ಣ ಮಾಹಿತಿ ನೀಡಿದ್ದಾರೆ.

English summary
Department of Transport will hire around 150 electric buses from companies like Gold stone and Tata to run in Bengaluru city for the BMTC. The hiring tender will be done in coming ten days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X