ಬೇಡಿಕೆ ಇರುವೆಡೆ ರಾತ್ರಿ 1ರವರೆಗೆ ಬಿಎಂಟಿಸಿ ಬಸ್ ಸಂಚಾರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ಬಿಎಂಟಿಸಿಯು ಬೆಂಗಳೂರಿನಲ್ಲಿ ಮಧ್ಯರಾತ್ರಿ 1ರ ವರೆಗೆ ಬಸ್‌ ಸೇವೆ ಒದಗಿಸಲು ನಿರ್ಧಾರ ಕೈಗೊಂಡಿದೆ. ಮಧ್ಯರಾತ್ರಿ ತನಕ ಬಸ್‌ ಸೇವೆ ಒದಗಿಸಬೇಕು ಎಂಬುದು ಬಹಳ ಕಾಲದಿಂದ ಕೇಳಿಬರುತ್ತಿದ್ದ ಬೇಡಿಕೆ. ಅಂತೂ ಬಿಎಂಟಿಸಿ ಸ್ಪಂದಿಸಿದೆ. ರಾತ್ರಿ ಪಾಳಿಯಲ್ಲಿ ಬೇಡಿಕೆ ಕಂಡುಬರುವ ಮಾರ್ಗಗಳಲ್ಲಿ ಇನ್ನಷ್ಟು ಬಸ್‌ಗಳನ್ನು ಒದಗಿಸಲು ಸಂಸ್ಥೆ ನಿರ್ಧರಿಸಿದೆ.

ಬಿಎಂಟಿಸಿಯು ಮುಂದಿನ ವಾರದಿಂದ ರಾತ್ರಿ 1ರ ವರೆಗೆ ಬಸ್‌ಗಳ ಸೇವೆ ಒದಗಿಸಲಿದೆ. ನಗರದಲ್ಲಿ ರಾತ್ರಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದೆ. ರೈಲು ನಿಲ್ದಾಣ, ಮೆಜೆಸ್ಟಿಕ್‌, ಶಿವಾಜಿನಗರ ಮತ್ತಿತರ ಕಡೆ ರಾತ್ರಿ 1ರ ವರೆಗೂ ಜನ ಸಂಚಾರ ಇರುತ್ತದೆ. ಆದರೆ ಮಧ್ಯ ರಾತ್ರಿ ಬಸ್‌ಗಳ ಸಂಚಾರ ಕಡಿಮೆ.[ಅಂತೂ ಇಂತೂ ಕನ್ನಡ ಪಾಠ ಕಲಿತ ಬಿಎಂಟಿಸಿ]

BMTC

ದೂರದ ಊರುಗಳಿಂದ ಬಸ್‌ಗಳಲ್ಲಿ ಬರುವವರು, ಉದ್ಯೋಗ ಮುಗಿಸಿ ಮನೆಗೆ ತೆರಳುವವರು ಬಸ್‌ ಸಿಗದೆ ಸಂಕಟ ಪಡುತ್ತಾರೆ. ದುಬಾರಿ ಎನಿಸಿದರೂ ಆಟೊ ಹಾಗೂ ಕ್ಯಾಬ್‌ಗಳನ್ನೇ ಅವಲಂಬಿಸುತ್ತಾರೆ. ಕೆಲ ತಿಂಗಳ ಹಿಂದೆ 'ನೈಟ್‌ಲೈಫ್‌' ಅವಧಿ ವಿಸ್ತರಣೆ ಮಾಡಿದ ಬಳಿಕ ರಾತ್ರಿ ಪಾಳಿ ಬಸ್‌ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ರಾತ್ರಿ ಹೊತ್ತು ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ ಇದೆ.

ಮೆಜೆಸ್ಟಿಕ್‌ ಬಸ್ ನಿಲ್ದಾಣದಿಂದ ಕಾಡುಗೋಡಿ, ಆನೇಕಲ್‌, ಅತ್ತಿಬೆಲೆ, ಜೆ.ಪಿ.ನಗರ, ಬಿಟಿಎಂ ಬಡಾವಣೆ, ಕೆ.ಆರ್‌.ಪುರ, ಮಾರತಹಳ್ಳಿ, ಯಲಹಂಕ ಉಪನಗರ, ಪೀಣ್ಯ, ಯಶವಂತಪುರ, ಕೆಂಗೇರಿ, ಜಿಗಣಿ, ಹೊಸಕೋಟೆ ಸೇರಿದಂತೆ ವಿವಿಧೆಡೆಗಳಿಗೆ 62 ಬಸ್‌ಗಳು ಕಳೆದ ಕೆಲ ವರ್ಷಗಳಿಂದ ಸಂಚರಿಸುತ್ತಿದ್ದವು. ಒಟ್ಟು 548 ಟ್ರಿಪ್‌ಗಳನ್ನು ಮಾಡುತ್ತಿದ್ದವು.[ಬೆಂಗಳೂರಿಗರ ದಿನಚರಿ ಬದಲಿಸಿದ ಬಿಎಂಟಿಸಿ ಮುಷ್ಕರ]

ಕಳೆದ ವಾರದಿಂದ ಬಿಎಂಟಿಸಿ ರಾತ್ರಿ ಪಾಳಿಯಲ್ಲಿ ಹೆಚ್ಚುವರಿ 10 ಬಸ್‌ ಸೇವೆ ಆರಂಭಿಸಿದೆ. ಈ ಬಸ್‌ಗಳು ರಾತ್ರಿ 11ರ ವರೆಗೆ ಸೇವೆ ಒದಗಿಸಲಿವೆ. ರಾತ್ರಿ 10 ಗಂಟೆಯ ನಂತರ ಸಂಚರಿಸುವ ಬಸ್‌ಗಳಿಗೆ ಒಂದೂವರೆ ಪಟ್ಟು ಅಧಿಕ ದರವನ್ನು ಪ್ರಯಾಣಿಕರು ಪಾವತಿಸಬೇಕಿದೆ.

ರಾತ್ರಿ ವೇಳೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಶಶಾಂಕ್‌ ಕುಮಾರ್‌ ಎಂಬವರು ವೆಬ್‌ ತಾಣವೊಂದರಲ್ಲಿ ಅಭಿಯಾನವನ್ನು ಆರಂಭಿಸಿದ್ದರು. ಈ ಬೇಡಿಕೆಗೆ 15 ಸಾವಿರಕ್ಕೂ ಹೆಚ್ಚು ಜನ ಬೆಂಬಲ ಸೂಚಿಸಿದ್ದರು. ಈ ಪೈಕಿ ಶೇ 98 ಮಂದಿ ರಾತ್ರಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಒತ್ತಾಯ ಮಾಡಿದ್ದರು.[ಬಿಎಂಟಿಸಿ ಕುಟುಂಬಕ್ಕೆ 323 ಹೊಸ ಸದಸ್ಯರು]

'ಹೆಚ್ಚಿನ ಬೇಡಿಕೆ ಇರುವ ಮಾರ್ಗಗಳಲ್ಲಿ ಮಾತ್ರ ರಾತ್ರಿ 1ರ ವರೆಗೂ ಬಸ್‌ಗಳು ಸಂಚರಿಸಲಿವೆ' ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BMTC has decided to extend it's service till 1 am. According to demand BMTC will decide routes. After night life extention in Bangaluru passanger numbers increased. So, this decision has been taken.
Please Wait while comments are loading...