ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವೋಲ್ವೋ ಪ್ರಯಾಣ ದರ ಹೆಚ್ಚಳ

|
Google Oneindia Kannada News

ಬೆಂಗಳೂರು, ಅ.3 : ಬಿಎಂಟಿಸಿ ವೋಲ್ವೋ ಪ್ರಯಾಣ ಮತ್ತಷ್ಟು ದುಬಾರಿ ಆಗಲಿದೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ ವಜ್ರ ಹಾಗೂ ಎ.ಸಿ.ಸುವರ್ಣ ಬಸ್ ಸೇವೆಗಳ ಪ್ರಯಾಣದರವನ್ನು ಹೆಚ್ಚಳ ಮಾಡಲಾಗಿದೆ. ನೂತನ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಬಿಎಂಟಿಸಿ ವಜ್ರ ಮತ್ತು ಸುವರ್ಣ ಎ.ಸಿ. ಬಸ್ ಸೇವೆಯ ದರ ಹೆಚ್ಚಳದ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ನಾನಾ ಹಂತಗಳಲ್ಲಿ ಪ್ರಯಾಣ ದರವನ್ನು 5 ರೂ.ನಿಂದ 10 ರೂ.ವರೆಗೆ ಏರಿಕೆ ಮಾಡಲಾಗಿದೆ.

bmtc

ವಜ್ರ ಬಸ್ ಸೇವೆಯ ಮೂರು ಹಂತಗಳಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಆದರೆ 15 ಹಂತಗಳ ಪ್ರಯಾಣ ದರದಲ್ಲಿ 5 ರೂ. ಏರಿಕೆ ಮಾಡಲಾಗಿದೆ. ಉಳಿದ ಏಳು ಹಂತಗಳಲ್ಲಿ 10 ರೂ. ಏರಿಸಲಾಗಿದೆ.

ಎ.ಸಿ. ಸುವರ್ಣ ಬಸ್ ಪ್ರಯಾಣ ದರದಲ್ಲಿ ಆಯ್ದ ಆರು ಹಂತಗಳಲ್ಲಿ ಪ್ರಯಾಣ ದರ ಏರಿಕೆ ಮಾಡಿಲ್ಲ. ಉಳಿದ ಪ್ರತಿ ಹಂತಕ್ಕೆ ತಲಾ 5 ರೂ. ಹೆಚ್ಚಳ ಮಾಡಲಾಗಿದೆ. ಹವಾನಿಯಂತ್ರಿತ ಬಸ್‌ಗಳ ದಿನದ ಪಾಸ್ ದರವನ್ನು 10 ರೂ. ಹೆಚ್ಚಿಸಲಾಗಿದೆ.

ಇಂಧನಗಳ ದರ ಹೆಚ್ಚಳ, ಶೇ.5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮುಂತಾದ ಆರ್ಥಿಕ ಹೊರೆಯನ್ನು ತಪ್ಪಿಸಲು ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯ ಬಸ್ ಗಳ ಪ್ರಯಾಣ ಮತ್ತು ಪಾಸ್ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಈಗಾಗಲೇ ವಜ್ರ ಪ್ರಯಾಣ ದರ ದುಬಾರಿ ಎಂಬ ಕಾರಣಕ್ಕೆ ಜನರು ಅವುಗಳಿಂದ ದೂರವುಳಿದಿದ್ದಾರೆ. ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಬಿಎಂಟಿಸಿ ಸಾಮಾನ್ಯ ಜನರು ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸದಂತೆ ಮಾಡುತ್ತಿದೆ.

ವೋಲ್ವೋ ದರ ಹೆಚ್ಚಳದ ವಿವರ
* 1,2 ಹಾಗೂ 16ನೇ ಹಂತದಲ್ಲಿ ದರ ಹೆಚ್ಚಳವಿಲ್ಲ
* 3 ರಿಂದ 23ನೇ ಹಂತದ ವರೆಗೂ 5 ರೂ. ಹೆಚ್ಚಳ ಮಾಡಲಾಗಿದೆ.
* ಹಂತ 8,11,14,17,20,24 ಹಾಗೂ 25ರವರೆಗೆ 10 ರೂ. ಏರಿಕೆ

ಎ.ಸಿ. ಸುವರ್ಣ ಬಸ್ ಪ್ರಯಾಣ ದರ
* ಹಂತ 1,2,3,4,6 ಹಾಗೂ 9ರಲ್ಲಿ ದರ ಹೆಚ್ಚಳವಿಲ್ಲ
* ಉಳಿದ ಹಂತಗಳಲ್ಲಿ ಪ್ರತಿ ಹಂತಕ್ಕೆ 5 ರೂ. ಹೆಚ್ಚಳ

English summary
Bangalore Metropolitan Transport Corporation (BMTC) increased AC Volvo and Ac Suvarna price up to rs 5 to 10. new price will be effect form Wednesday, October 2 midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X