• search

ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಮತ್ತಷ್ಟು ಪ್ರಯಾಣಿಕ ಸ್ನೇಹಿ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಜುಲೈ 12 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಮೊಬೈಲ್ ಅಪ್ಲಿಕೇಶನ್‌ ಅನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತಿದೆ. ಪ್ರಯಾಣಿಕರು ನೀಡಿದ ಸಲಹೆಯನ್ನು ಪರಿಗಣಿಸಿ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗುತ್ತಿದೆ.

    ಇ-ಆಡಳಿತ ಇಲಾಖೆಗೆ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಮೂರು ತಿಂಗಳಿನಲ್ಲಿ ಬಿಎಂಟಿಸಿಯ ಅಪ್ಲಿಕೇಶನ್ ಹೊಸ ರೂಪದಲ್ಲಿ ಪ್ರಯಾಣಿಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

    ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಪ್ರಯಾಣ ಮಾಹಿತಿ

    ಅಭಿವೃದ್ದಿಗೊಳ್ಳುತ್ತಿರುವ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ಟ್ರಿಪ್ ಪ್ಲಾನರ್, ಹತ್ತಿರದ ಬಸ್ ನಿಲ್ದಾಣಗಳ ಮಾಹಿತಿ, ಪ್ರಯಾಣದರ, ಬಸ್ ಹೊರಡುವ ಮತ್ತು ತಲುಪುವ ಮಾರ್ಗದ ನಕ್ಷೆ ಮುಂತಾದ ಹೊಸ ಅಂಶಗಳನ್ನು ಸೇರಿಸಲಾಗುತ್ತದೆ.

    BMTC to revamp mobile application

    ಸದ್ಯ ಲಭ್ಯವಿರುವ ಬಿಎಂಟಿಸಿಯ ಮೊಬೈಲ್ ಅಪ್ಲಿಕೇಶನ್‌ ನಲ್ಲಿರುವ ಎಲ್ಲಾ ಸೇವೆಗಳನ್ನು ಮುಂದುವರೆಸಲಾಗುತ್ತದೆ. ಊಬರ್ ಸೇರಿದಂತೆ ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಸಿಗುವ ಮಾದರಿಯಲ್ಲಿ ಬಿಎಂಟಿಸಿಯ ಹೊಸ ಅಪ್ಲಿಕೇಶನ್‌ ಪ್ರಯಾಣಿಕರಿಗೆ ಲಭ್ಯವಾಗಲಿದೆ.

    ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗುತ್ತೆ? ಬಳಕೆ ಹೇಗೆ?

    ಮೈ ಬಿಎಂಟಿಸಿ ವೆಬ್ ಸೈಟ್ ಅಥವ ಗೂಗಲ್ ಪ್ಲೇ ಸ್ಟೋರ್‌ನಿಂದ ಪ್ರಸ್ತುತ ಇರುವ ಮೊಬೈಲ್ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.ಇ-ಆಡಳಿತ ಇಲಾಖೆ ಅನುಮತಿ ನೀಡಿದ ಬಳಿಕ ಅಪ್ಲಿಕೇಶನ್ ಅಭಿವೃದ್ದಿಗೊಳಿಸುವ ಕೆಲಸ ಆರಂಭವಾಗಲಿದೆ.

    ಬಿಎಂಟಿಸಿಯಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿಯಾಗಬೇಕು. ಕ್ಯಾಬ್‌ಗಳ ಅಪ್ಲಿಕೇಶನ್ ಮಾದರಿಯಲ್ಲಿ ಅದು ನವೀಕರಣವಾಗಬೇಕು ಎಂದು ಹಲವು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The Bangalore Metropolitan Transport Corporation (BMTC) is revamping its mobile application. Corporation has sent its proposal to the department of e-governance a month ago.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more