150 ಎಸಿ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 150 ಹವಾನಿಯಂತ್ರಿತ ಬಸ್ಸುಗಳ ಖರೀದಿಗೆ ಮುಂದಾಗಿದೆ. ವಿಮಾನ ನಿಲ್ದಾಣ ಮತ್ತು ಐಟಿ ಕಂಪನಿಗಳಿರುವ ಮಾರ್ಗದಲ್ಲಿ ಸಂಚಾರ ನಡೆಸುತ್ತಿರುವ ಹಳೆಯ ಬಸ್ಸುಗಳನ್ನು ಬದಲಾವಣೆ ಮಾಡಲಾಗುತ್ತದೆ.

ಬಿಎಂಟಿಸಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಎರಡು ವರ್ಷಗಳಿಂದ ಯಾವುದೇ ಎಸಿ ಬಸ್ಸುಗಳನ್ನು ಖರೀದಿ ಮಾಡಿಲ್ಲ. ಈಗ ಜವಾಹರ್‌ಲಾಲ್ ನೆಹರೂ ರಾಷ್ಟ್ರೀಯ ನಗರ ಪುನರುತ್ಥಾನ ಯೋಜನೆಯಡಿ ಹೊಸ ಬಸ್ಸುಗಳ ಖರೀದಿಗೆ ನಿರ್ಧರಿಸಲಾಗಿದೆ.[60 ಕೋಟಿ ವೆಚ್ಚದಲ್ಲಿ ಕಲಾಸಿಪಾಳ್ಯದಲ್ಲಿ ಬಸ್ ನಿಲ್ದಾಣ ನಿರ್ಮಾಣ]

BMTC to purchase 150 air-conditioned buses

ಪ್ರಸ್ತುತ ಬಿಎಂಟಿಸಿ ಬಳಿ 700 ಎಸಿ ಬಸ್ಸುಗಳಿವೆ. ಇವುಗಳಲ್ಲಿ 675 ವೊಲ್ವೋ ಮತ್ತು 25 ಕರೋನಾ ಬಸ್ಸುಗಳು. ಈ ಬಸ್ಸುಗಳ ಪೈಕಿ ಹಲವು ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸುಸ್ಥಿತಿಯಲ್ಲಿಲ್ಲ. ಈ ಬಸ್ಸುಗಳನ್ನು ಬದಲಾವಣೆ ಮಾಡಲು ನೂತನ ಬಸ್ ಖರೀದಿ ಮಾಡಲಾಗುತ್ತಿದೆ.[ಹೊಸ 241 ಟಾಟಾ ಬಸ್ ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ]

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಐಟಿ ಕಂಪನಿಗಳಿರುವ ಮಾರ್ಗದಲ್ಲಿ ಈ ಎಸಿ ಬಸ್ಸುಗಳು ಸಂಚಾರ ನಡೆಸುತ್ತಿವೆ. ಆದರೆ, ಇವುಗಳ ಬಗ್ಗೆ ಹಲವಾರು ದೂರುಗಳಿವೆ. ಎಸಿ ಕೂಡಾ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.[ಬೆಂಗಳೂರು-ಕುಕ್ಕೆ ಸುಬ್ರಮಣ್ಯಕ್ಕೆ ಸ್ಲೀಪರ್ ಬಸ್ ಸೇವೆ]

ಆದ್ದರಿಂದ ಬಿಎಂಟಿಸಿ 150 ಹೊಸ ಬಸ್ಸುಗಳ ಖರೀದಿಗೆ ಮುಂದಾಗಿದೆ. ವೊಲ್ವೋ, ಟಾಟಾ, ಅಶೋಕ್ ಲೈಲೆಂಡ್‌ ಕಂಪನಿಗಳು ಹೊಸ ಬಸ್ ನೀಡಲು ಸಿದ್ಧವಾಗಿದೆ. ಕಳೆದ ವಾರ ಕಂಪನಿಗಳ ಜೊತೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bangalore Metropolitan Transport Corporation (BMTC) to purchase 150 air-conditioned buses under the JnNURM project. At present the BMTC has 700 AC buses.
Please Wait while comments are loading...