ಏರೋ ಇಂಡಿಯಾಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಸೇವೆ

Posted By:
Subscribe to Oneindia Kannada

ಯಲಹಂಕ, ಫೆಬ್ರವರಿ 13: ಇಲ್ಲಿನ ವಾಯುನೆಲೆಯಲ್ಲಿ ಫೆಬ್ರವರಿ 14 ರಿಂದ ಆರಂಭವಾಗಲಿರುವ ಏರೋ ಇಂಡಿಯಾ 2017ಕ್ಕೆ ನಗರದ ವಿವಿಧ ಬಡಾವಣೆಗಳಿಂದ ಹೆಚ್ಚುವರಿ ಬಸ್ ಸೇವೆ ಒದಗಿಸುವುದಾಗಿ ಬಿಎಂಟಿಸಿ ಪ್ರಕಟಿಸಿದೆ. ಫೆಬ್ರವರಿ 14 ರಿಂದ 18ರತನಕ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರತನಕ ವೈಮಾನಿಕ ಪ್ರದರ್ಶನವಿರುತ್ತದೆ.

ನಗರದ 9 ಪ್ರಮುಖ ಬಡಾವಣೆಗಳಿಂದ ಯಲಹಂಕಕ್ಕೆ ಬಿಎಂಟಿಸಿ ವಿಶೇಷ ಬಸ್ ಸೇವೆ ಇರಲಿದೆ ಎಂದು ಬಿಎಂಟಿಸಿ ಹೇಳಿದೆ. ವೈಮಾನಿಕ ಪ್ರದರ್ಶನ ವೀಕ್ಷಿಸಲು ಹೋಗುವ ಸಾರ್ವಜನಿಕರಿಗೆ ಸಹಾಯವಾಗುವಂತೆ ಕೆಂಪೇಗೌಡ ಬಸ್ ನಿಲ್ದಾಣ, ಎಂ.ಜಿ. ರಸ್ತೆ ಬಳಿ ಇರುವ ಮಾಣಿಕ್ ಷಾ ಪರೇಡ್ ಮೈದಾನ, ಹೆಬ್ಬಾಳ ರಿಂಗ್ ರಸ್ತೆ, ಬನಶಂಕರಿ, ಕೆಂಗೇರಿ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್​ನಿಂದ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. [ಏರೋ ಇಂಡಿಯಾದಲ್ಲಿ ಟಾಟಾ ಸಮೂಹದ 8 ಶಕ್ತಿ ಪ್ರದರ್ಶನ]

BMTC to Operate extra buses for Aero India-2017 show

ವೈಮಾನಿಕ ಪ್ರದರ್ಶನ ಬೆಳಗ್ಗೆ 10 ಗಂಟೆಗೆ ಆರಂಭವಾಗುವುದರಿಂದ ಬೆಳಗ್ಗೆ 8 ಗಂಟೆಯಿಂದ ಹೆಚ್ಚುವರಿ ಬಸ್ ಸೇವೆ ಇರಲಿದೆ. ಯಶವಂತಪುರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ ಹಾಗೂ ಕೋರಮಂಗಲ ಮತ್ತಿತರ ಸ್ಥಳಗಳಿಂದ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ಬಸ್​ ಗಳನ್ನು ಒದಗಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.[ಏರೋ ಇಂಡಿಯಾ ದೆಸೆಯಿಂದ ಮಾಂಸಪ್ರಿಯರಿಗೆ ಉಪವಾಸ!]

ಟಿಕೆಟ್ ದರ 35 ರಿಂದ 50 ರು ತನಕ ಇರಿಸಲಾಗಿದೆ. ಹೆಬ್ಬಾಳ ರಿಂಗ್ ರೋಡ್ ಜಂಕ್ಷನ್ ನಿಂದ 35 ರು ಇದ್ದರೆ, ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ 50 ರು ಇದೆ. ಉಳಿದಂತೆ ಮಾಣಿಕ್ ಷಾ ಪರೇಡ್ ಮೈದಾನ, ಕೆಂಪೇಗೌಡ ಬಸ್ ನಿಲ್ದಾಣ. ಬನಶಂಕರಿ, ಕೆಂಗೇರಿ, ಯಶವಂತಪುರ ಬಸ್ ನಿಲ್ದಾಣದಿಂದ 40 ರು ಹಾಗೂ ಕೋರಮಂಗಲ ಬಸ್ ನಿಲ್ದಾಣದಲ್ಲಿ 45 ರು ಪ್ರಯಾಣ ದರ ನಿಗದಿ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To facilitate public visiting Aero India-2017 Show, to be held from 14.02.2017 to 18.02.2017 BMTC is operating special buses to Indian Air Force Centre located at Yelahanka, Bengaluru. As the flying display is at 10.00 am and 02.00 PM.
Please Wait while comments are loading...