ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿ ಸೀಟು ಕಾಯ್ದಿರಿಸಿ!

|
Google Oneindia Kannada News

Recommended Video

BMTC to introduce seat reserving facility in Vayu Vajra bus very soon | Oneindia Kannada

ಬೆಂಗಳೂರು, ಸೆಪ್ಟೆಂಬರ್ 15 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಲು ಸಿದ್ಧತೆ ನಡೆಸಿದೆ. ವಾಯುವಜ್ರ ಬಸ್ಸುಗಳಲ್ಲಿ ಸೀಟು ಕಾಯ್ದಿರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸಂಸ್ಥೆ ಚಿಂತನೆ ನಡೆಸಿದೆ.

ಬಿಎಂಟಿಸಿ ವೋಲ್ವೋ ಬಸ್ ಮಾಸಿಕ ಪಾಸು ದರ ಇಳಿಕೆಬಿಎಂಟಿಸಿ ವೋಲ್ವೋ ಬಸ್ ಮಾಸಿಕ ಪಾಸು ದರ ಇಳಿಕೆ

ನಗರದ ವಿವಿಧ ಬಡಾವಣೆಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯ 90 ವಾಯು ವಜ್ರ ಬಸ್ಸುಗಳು ಸಂಚಾರ ನಡೆಸುತ್ತವೆ. ಆದರೆ, ಓಲಾ, ಊಬರ್ ಮುಂತಾದ ಟ್ಯಾಕ್ಸಿ ಸೇವೆಗಳಿಂದಾಗಿ ಸಂಸ್ಥೆಗೆ ಭಾರೀ ಪೈಫೋಟಿ ಎದುರಾಗಿದೆ.

BMTC to introduce seat reserving facility in Vayu Vajra bus soon

ಕ್ಯಾಬ್ ಗಳು ಮನೆ ಬಾಗಿಲಿಗೆ ಹೋಗಿ ಪ್ರಯಾಣಿಕರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತವೆ. ಆದ್ದರಿಂದ, ಜನರು ಕ್ಯಾಬ್ ಮೊರೆ ಹೋಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ, ವಾಯು ವಜ್ರ ಬಸ್ಸುಗಳಲ್ಲಿ ಮುಂಗಡವಾಗಿ ಸೀಟು ಕಾಯ್ದಿರಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಈ ಯೋಜನೆಯ ತಯಾರಿ ಇನ್ನೂ ಪ್ರಥಮ ಹಂತದಲ್ಲಿದೆ. 2015ರಲ್ಲಿ ಬಿಎಂಟಿಸಿ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ಇದರ ಮೂಲಕವೇ ಸೀಟು ಕಾಯ್ದಿರುವ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಟಿಸಿ ನಿರ್ಧರಿಸಿದ್ದು, ಈ ಕುರಿತ ಯೋಜನೆ ಸಿದ್ಧವಾಗುತ್ತಿದೆ.

'ನಮ್ಮ ಮೆಟ್ರೋ'ದಿಂದಾಗಿ ಬಿಎಂಟಿಸಿ ಆದಾಯ ಇಳಿಕೆ!'ನಮ್ಮ ಮೆಟ್ರೋ'ದಿಂದಾಗಿ ಬಿಎಂಟಿಸಿ ಆದಾಯ ಇಳಿಕೆ!

ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಕ್ಯಾಬ್‌ಗಳು ಗ್ರಾಹಕರಿಗೆ ವಿವಿಧ ಆಫರ್ ನೀಡುತ್ತಿವೆ. ಬಿಎಂಟಿಸಿಯೂ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ಚಿಂತನೆ ನಡೆಸಿದೆ.

English summary
Bangalore Metropolitan Transport Corporation (BMTC) will introduce seat reserving facility in Vayu Vajra bus service soon. BMTC has deployed 90 Vayu Vajra buses on the Kempegowda International Airport route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X