ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕ್ ಬಸ್ ಗಳು!

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 24 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಾಯೋಗಿಕವಾಗಿ ಆರಂಭಿಸಿದ್ದ ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ ಸಂಚಾರವನ್ನು ಕಾಯಂ ಆಗಿ ಸಂಚರಿಸಲು ಬಿಎಂಟಿಸಿ ಮುಂದಾಗಿದೆ.

ವಿದ್ಯುತ್ ಚಾಲಿತ ಸುಮಾರು 150 ಬಸ್ಸುಗಳನ್ನು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. 2014ರ ಫೆಬ್ರವರಿಯಲ್ಲಿ ಬಿಎಂಟಿಸಿ ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಿತ್ತು. ನಂತರ, ದುಬಾರಿ ವೆಚ್ಚವೆಂಬ ಕಾರಣಕ್ಕೆ ಬಸ್ ಖರೀದಿ ಮಾಡಿರಲಿಲ್ಲ. ಸದ್ಯ, ಸರ್ಕಾರ ಬಸ್ ಖರೀದಿಗೆ ಒಪ್ಪಿಗೆ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 150 ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ.

Bus

ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾದರೆ ದೇಶದಲ್ಲೇ ನಗರ ಸಾರಿಗೆಗೆ ಎಲೆಕ್ಟ್ರಿಕ್ ಬಸ್ ಬಳಸುವ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಎಲೆಕ್ಟ್ರಿಕ್ ಬಸ್ ಖರೀದಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಹಾಯಸ್ತ ಕೋರಿದೆ.

ಈಗ ವಿದ್ಯುತ್ ಚಾಲಿತ ಬಸ್ ದೇಶದಲ್ಲೇ ತಯಾರಾಗುತ್ತಿದೆ. ಆದ್ದರಿಂದ ಖರೀದಿ ವೆಚ್ಚ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 2014ರಲ್ಲಿ ಎಲೆಕ್ಟ್ರಿಕ್ ಬಸ್ ಬೆಲೆ 2.9 ಕೋಟಿ ರೂ. ಇತ್ತು. ಡೀಸೆಲ್ ಬಸ್ಸುಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ವೆಚ್ಚ ಕಡಿಮೆಯಾಗಲಿದೆ.

ಎಲೆಕ್ಟ್ರಿಕ್ ಬಸ್ ಪ್ರತಿ ಕಿ.ಮೀ.ಕಾರ್ಯಾಚರಣೆಗೆ 7 ರೂ. ವೆಚ್ಚವಾದರೆ, ಡೀಸೆಲ್ ಬಸ್ ಪ್ರತಿ ಕಿ.ಮೀ.ಗೆ 18 ರೂ. ಆಗಲಿದೆ. ಇದರಿಂದ ವಿದ್ಯುತ್ ಚಾಲಿತ ಬಸ್ ಗಳಿಗೆ ಸರ್ಕಾರ ಮೊರೆ ಹೋಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bangalore Metropolitan Transport Corporation’s (BMTC’s) board, after much dilly-dallying over the proposal to procure electric buses citing high costs, has finally given its in-principle clearance to induct 150 electric buses.
Please Wait while comments are loading...