ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು!

By Nayana
|
Google Oneindia Kannada News

ಬೆಂಗಳೂರು, ಮೇ 17: ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಚುರುಕುಗೊಂಡಿದೆ. ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಿದ್ಧತೆ ಆರಂಭವಾಗಿದೆ.

ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್ ಪಡೆಯಲು ಕೇಂದ್ರ ಸರ್ಕಾರ ಬಿಎಂಟಿಸಿಗೆ ಅನುಮತಿ ನೀಡಿದೆ. ಮೌಖಿಕವಾಗಿ ಈ ಕುರಿತು ಕೇಂದ್ರದಿಂದ ಪ್ರತಿಕ್ರಿಯೆ ಬಂದಿದ್ದು, ಆದೇಶಕ್ಕಾಗಿ ಬಿಎಂಟಿಸಿ ಕಾಯುತ್ತಿದೆ. ನೀತಿ ಸಂಹಿತೆ ಮೇ 18ರವರೆಗೂ ಜಾರಿಯಲ್ಲಿದ್ದು ಆದೇಶ ಪ್ರತಿ ಮೇ 21-22ರಂದು ನಿಗಮದ ಕೈ ಸೇರುವ ಸಾಧ್ಯತೆ ಇದೆ.

ಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳು ಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳು

ಫಾಸ್ಟರ್ ಅಡಾಪ್ಷನ್‌ ಅಂಡ್ ಮಾನ್ಯುಫಾಕ್ಚರಿಂಗ್ ಆಫ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಅನುದಾನದಡಿ ಪ್ರತಿ ಎಲೆಕ್ಟ್ರಿಕ್ ಬಸ್‌ಗೆ 1 ಕೋಟಿ ರೂ. ವರೆಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿತ್ತು. ಆದರೆ, ಹೊಸ ಬಸ್‌ ಖರೀದಿಗೆ 2-3 ಕೋಟಿ ರೂ. ವೆಚ್ಚವಾಗುವ ಕಾರಣದಿಂದ ಗುತ್ತಿಗೆ ಆಧಾರದಲ್ಲಿ 150 ಎಲೆಕ್ಟ್ರಿಕ್‌ ಬಸ್ ಪಡೆಯಲು ಬಿಎಂಟಿಸಿ ನಿರ್ಧರಿಸಿತ್ತು. ಅದರಂತೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಕಂಪನಿ ಕನಿಷ್ಠ ಬಿಡ್ ಸಲ್ಲಿಸಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣವಾದ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಬಸ್ ಪಡೆದರೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ತಿಳಿಸಿತ್ತು.

BMTC to get nod for hire electric bus soon

ಗುತ್ತಿಗೆ ಪಡೆದ ಗೋಲ್ಡ್‌ಸ್ಟೋನ್‌ ಕಂಪನಿ ಫೈನಾನ್ಸಿಯಲ್‌ ಬಿಡ್‌ನಲ್ಲಿ 12 ಮೀ.ಉದ್ದದ ಬಸ್‌ಗೆ ಪ್ರತಿ ಕಿ.ಮೀಗೆ 37.5 ರೂ. ಬಿಡ್ ಮಾಡಿತ್ತು. ಬಸ್ ನೋಂದಣಿ, ವಿಮೆ, ಮೋಟಾರು ವಾಹನ ತೆರಿಗೆ , ಸೇವಾ ತೆರಿಗೆ ಎಲ್ಲವೂ ಇದರಲ್ಲಿ ಸೇರಿದೆ. ಪ್ರಯಾಣಿಕರ ತೆರಿಗೆ ಮತ್ತು ಸ್ಟೇಜ್‌ ಕ್ಯಾರಿಯೇಜ್ ರಹದಾರಿ, ವಿದ್ಯುತ್, ನಿರ್ವಾಹಕನ ನೇಮಕವಷ್ಟೇ ಬಿಎಂಟಿಸಿ ವಹಿಸಲಿದೆ. ಎಲೆಕ್ಟ್ರಿಕ್‌ ಬಸ್ ಕಾರ್ಯಾಚರಣೆಯಿಂದ ನಿಗಮಕ್ಕೆ 10-15 ರೂ. ಉಳಿತಾಯವಾಗಲಿದೆ.

English summary
BMTC is expecting clearance from union urban development ministry to hire electric bus within a day or two. Since model code of conduct was imposed the process was delayed, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X