ಬಿಎಂಟಿಸಿ ಕುಟುಂಬಕ್ಕೆ 323 ಹೊಸ ಸದಸ್ಯರು

Subscribe to Oneindia Kannada

ಬೆಂಗಳೂರು, ಜುಲೈ, 22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಕುಟುಂಬಕ್ಕೆ ಹೊಸದಾಗಿ 1000 ಬಸ್ ಗಳನ್ನು ಸೇರಿಸಿಕೊಳ್ಳಲಿದ್ದು ಮೊದಲ ಹಂತವಾಗಿ 300 ಬಸ್ ಗಳನ್ನು ಖರೀದಿ ಮಾಡಲಿದೆ.

ವಯಯಸ್ಸಾಗಿ ಗುಜರಿಗೆ ಸೇರುತ್ತಿರುವ ಬಿಎಂಟಿಸಿಯ 999 ಬಸ್‌ಗಳ ಬದಲಾಗಿ 1 ಸಾವಿರ ಹೊಸ ಬಸ್ ಖರೀದಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ 1 ಸಾವಿರ ಬಸ್ ಖರೀದಿಗೆ ಬಿಎಂಟಿಸಿ ಟೆಂಡರ್ ಕರೆದಿದ್ದು, ಸೆಪ್ಟೆಂಬರ್‌ನಲ್ಲಿ 323 ಹೊಸ ಬಸ್‌ಗಳು ಸೇವೆ ಆರಂಭಿಸಲಿವೆ.[ಅಂತೂ ಇಂತೂ ಕನ್ನಡ ಪಾಠ ಕಲಿತ ಬಿಎಂಟಿಸಿ]

BMTC To get 323 New Buses by September 2016

ಹೊಸ ಹೊಸ ರೂಟ್ ಗಳಿಗೆ ಬಸ್ ಬಿಡುವಂತೆ ಬೇಡಿಕೆ ಹೆಚ್ಚುತ್ತಿದೆ. ನಗರದ ಹೊರವಲಯಕ್ಕೈ ಬಿಎಂಟಿಸಿ ಸಂಪರ್ಕ ವಿಸ್ತರಣೆ ಮಾಡಬೇಕಾಗಿದೆ. ಹೊಸ ಬಸ್ ಗಳ ಸೇರ್ಪಡೆ ನಂತರ ಸದ್ಯ ಇರುವ ಬಸ್ ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಸದ್ಯ 55 ಲಕ್ಷ ಪ್ರಯಾಣಿಕರು ಪ್ರತಿದಿನ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಸುಮಾರು 3000 ಬಸ್ ಗಳನ್ನು ನಿರಂತರವಾಗಿ ಓಡಿಸುವ ಆಲೋಚನೆ ಇದೆ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಮೆಟ್ರೋ ಮತ್ತು ಬಿಎಂಟಿಸಿ ಒಟ್ಟಾಗಿ ಹೊಂದಾಣಿಕೆಯಿಮದ ಕೆಲಸ ಮಾಡಬೇಕಿದೆ. ನಗರದ ಎಲ್ಲ ಕಡೆಗೆ ಮೆಟ್ರೋ ಸಂಪರ್ಕ ಲಭ್ಯವಿದ್ದು ಅದಕ್ಕೆ ತಕ್ಕಂತೆ ಬಿಎಂಟಿಸಿಯೂ ತನ್ನ ರೂಟ್ ಗಳನ್ನು ಬದಲಾಯಿಸಿಕೊಂಡರೆ ಟ್ರಾಫಿಕ್ ನಿಯಂತ್ರಣ ಸಾಧ್ಯವಾಗುವುದರಲ್ಲಿ ಅನುಮಾನವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the Karnataka cabinet decision the Bangaluru Metropolitan Transport Corporation (BMTC) will get its first batch of 323 buses by September. Since December 2014, the BMTC could not procure even a single new bus. BMTC officials had a tough time meeting the growing demand in the city and started augmenting the routes.
Please Wait while comments are loading...