ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಇಲ್ಲದಿದ್ದರೆ ಏನಂತೆ, ಕಾರ್ ಪೂಲಿಂಗ್ ಇದೆಯಲ್ಲ!

By Mahesh
|
Google Oneindia Kannada News

ಬೆಂಗಳೂರು, ಜುಲೈ 25: ಐಟಿ ಬಿಟಿ ನಗರಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಯಾರು ಬಳಸುತ್ತಾರೆ? ಅದರಲ್ಲೂ ಬೆರಳತುದಿಯಲ್ಲೇ ಕ್ಯಾಬ್ ಗಳು ಲಭ್ಯವಿರುವ ಕಾಲದಲ್ಲಿ ಎಂಬ ಮಾತಿದೆ.

ಆದರೆ, ಐಟಿ ಸಂಸ್ಥೆಗಳಿಗೆ ಬಿಎಂಟಿಸಿ ವತಿಯಿಂದ ಸಾರಿಗೆ ಸಂಪರ್ಕ ವ್ಯವಸ್ಥೆಯಂತೂ ಬೇಕೇ ಬೇಕು. ಮುಷ್ಕರ, ಬಂದ್ ಇದ್ದಾಗ ಟೆಕ್ಕಿಗಳಿಗೆ 'ವರ್ಕ್ ಫ್ರಂ ಹೋಮ್', ಕಚೇರಿಗೆ ಬರಲು ಕಾರ್ ಪೂಲಿಂಗ್ ಆಯ್ಕೆಗಳನ್ನು ನೀಡಲಾಗುತ್ತದೆ. ತೀರಾ ಕೆಲಸ ಮಾಡಲು ಆಗದವರು ರಜೆ ಪಡೆದು ಮತ್ತೊಂದು ದಿನ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

ಆದರೆ, ಬೈಕ್ ಪೂಲಿಂಗ್, ಬೈಕ್ ಟ್ಯಾಕ್ಸಿ, ಕಾರ್ ಪೂಲಿಂಗ್, ಕ್ಯಾಬ್ ಶೇರಿಂಗ್ ಏನೇ ಆಯ್ಕೆಯಿರಲಿ, ಆಟೋರಿಕ್ಷಾ ಜತೆ ಸಿಲಿಕಾನ್ ಸಿಟಿ ಜನರ ಪರದಾಟ ಪ್ರತಿ ಬಾರಿ ಮುಷ್ಕರ ನಡೆದಾಗಲೂ ಮುಂದುವರೆಯುತ್ತದೆ. ಮುಷ್ಕರದ ಲಾಭ: ಆಟೋ, ಕ್ಯಾಬ್ ಚಾಲಕರಿಗೆ ಹಬ್ಬವೋ ಹಬ್ಬ[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

ಬೆಂಗಳೂರಿನಲ್ಲಿ 400 ಪ್ರಮುಖ ಐಟಿ ಕಂಪನಿಯತ್ತ ದೈನಂದಿನ 1.7 ಲಕ್ಷ ಕ್ಯಾಬ್ ಮತ್ತು 30,000 ಖಾಸಗಿ ವಾಹನಗಳು ಪಯಣಿಸುತ್ತಿವೆ. ಇದೀಗ ಇದನ್ನು ಶೇಕಡಾ 7ರಷ್ಟು ಕಡಿತಗೊಳಿಸುವ ಉದ್ದೇಶವನ್ನು ಕಾರ್ ಪೂಲಿಂಗ್ ಮೊಬೈಲ್ ಅಪ್ಲಿಕೇಷನ್ ಗಳು ಹೊಂದಿವೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಕಾರು ಹಂಚಿಕೆ ಅಂದರೆ car-pooling ಅಥವಾ car-sharing ಎಂಬ ಸೌಹಾರ್ಧ ವ್ಯವಸ್ಥೆಗೆ ಬೆಂಗಳೂರು ಪೊಲೀಸರು ಕೂಡಾ ಪ್ರೋತ್ಸಾಹ ನೀಡಿ ವರ್ಷಗಳು ಕಳೆದಿವೆ. ಇಷ್ಟಕ್ಕೂ ಕಾರ್ ಪೂಲಿಂಗ್ ಬೇಕಾ? ಏನು ಇದರ ಲಾಭ ಮುಂದೆ ಓದಿ...

ಏನಿದು ಕಾರ್ ಪೂಲಿಂಗ್

ಏನಿದು ಕಾರ್ ಪೂಲಿಂಗ್

ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಒಂದೇ ಮಾರ್ಗವಾಗಿ ಪ್ರಯಾಣಿಸುವ ನಾಲ್ವರು ಉದ್ಯೋಗಿಗಳು, ಪ್ರತ್ಯೇಕವಾಗಿ ನಾಲ್ಕು ಕಾರುಗಳಲ್ಲಿ ಹೋಗುವ ಬದಲು ಒಂದೇ ವಾಹನದಲ್ಲಿ ಸಂಚರಿಸಬೇಕು. ಇದು ಬೈಕುಗಳಿಗೂ ಅನ್ವಯಿಸುತ್ತದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ. ಜತೆಗೆ, ಹಣ ಮತ್ತು ಇಂಧನ ಉಳಿತಾಯವೂ ಆಗುತ್ತದೆ

ಊಬರ್ ನಿಂದ ಟ್ಯಾಕ್ಸಿ ಪೂಲಿಂಗ್ ಲಭ್ಯ

ಊಬರ್ ನಿಂದ ಟ್ಯಾಕ್ಸಿ ಪೂಲಿಂಗ್ ಲಭ್ಯ

ಬೆಂಗಳೂರು ನಗರದಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಊಬರ್ ಈಗ ಕಾರ್ ಪೂಲಿಂಗ್ ಸೇವೆಗೆ ಚಾಲನೆ ನೀಡಿದೆ. ಕಾರ್ ಪೂಲಿಂಗ್ ಬಳಸುವುದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಊಬರ್ ಹೇಳಿದೆ. ಓಲಾ ಕೂಡಾ ತನ್ನ ಗ್ರಾಹಕರಿಗೆ ಶೇರಿಂಗ್ ಮಾಡುವ ಅವಕಾಶ ನೀಡುತ್ತಾ ಬಂದಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಅಪ್ಲಿಕೇಶನ್‌ಗಳ ಮೂಲಕ ಅಥವ ಸ್ಥಳದಲ್ಲಿಯೇ ಬಿಲ್ ಪಾವತಿ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿ ಶೇರ್ ಆಟೋದಂತೆ ಕಾರು ಶೇರಿಂಗ್

ಬೆಂಗಳೂರಿನಲ್ಲಿ ಶೇರ್ ಆಟೋದಂತೆ ಕಾರು ಶೇರಿಂಗ್

ಊಬರ್ ಈಗಾಗಲೇ ಕಾರ್ ಪೂಲಿಂಗ್ ಸೇವೆಯನ್ನು ಸ್ಯಾನ್‌ ಫ್ರಾನ್ಸಿಸ್ಕೊ, ನ್ಯೂಯಾರ್ಕ್‌, ಬಾಸ್ಟನ್‌, ಆಸ್ಟಿನ್‌ ಮತ್ತು ಪ್ಯಾರಿಸ್‌ ಮುಂತಾದ ನಗರದಲ್ಲಿ ಆರಂಭಿಸಿದೆ. ಸದ್ಯ, ಬೆಂಗಳೂರಿನಲ್ಲಿ ಈ ಸೇವೆ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಶೇರ್ ಆಟೋದಂತೆ ಕಾರು ಶೇರಿಂಗ್ ಕೂಡಾ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಆದರೆ, ಐಟಿ ಬಿಟಿ ಕ್ಷೇತ್ರಕ್ಕೆ ಸೀಮಿತವಾಗಿದೆ.

ಆರೋಗ್ಯಕ್ಕೂ ಪೂರಕ ಈ ಕಾರ್ ಪೂಲಿಂಗ್

ಆರೋಗ್ಯಕ್ಕೂ ಪೂರಕ ಈ ಕಾರ್ ಪೂಲಿಂಗ್

ದಿನ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಗಳಲ್ಲಿ ತೆವಳಿಕೊಳ್ಳುತ್ತಾ ಹೋದರೆ ಸ್ಮರಣೆ ಶಕ್ತಿ ಕುಂದುತ್ತದೆ. ದೈಹಿಕ ಬಳಲಿಕೆ. ಆಯಾಸ, ರಕ್ತದೊತ್ತಡ, ಮಾಂಸಖಂಡಗಳ ಮೇಲೆ ಒತ್ತಡ, ಹೃದಯ ಬಡಿತ ಏರಿಕೆ, ಇದರಿಂದ ಕೆಲಸಕ್ಕೆ ಚಕ್ಕರ್ ಹೊಡೆಯುವ ಪರಿಪಾಠ ಹೆಚ್ಚಾಗುತ್ತಿದೆ. ಅಲ್ಲದೆ, ಟ್ರಾಫಿಕ್ ಜಾಮ್ ಸಮಸ್ಯೆ ನೀಗಿಸಲು ಪೊಲೀಸರು ಕೂಡಾ ಕಾರ್ ಪೂಲಿಂಗ್ ಸೂಚಿಸಿದ್ದಾರೆ.

ಕಾರ್ ಪೂಲಿಂಗ್ ಗೆ ಜಾಹೀರಾತು ನೀಡಿ

ಕಾರ್ ಪೂಲಿಂಗ್ ಗೆ ಜಾಹೀರಾತು ನೀಡಿ

ನಿಮಗೆ ಹೆಬ್ಬಾಳದಿಂದ ಬಸವನಗುಡಿಗೆ, ಕಲ್ಯಾಣ ನಗರದಿಂದ ವಿಜಯನಗರ, ಜಯನಗರದಿಂಡ ಬೊಮ್ಮನಹಳ್ಳಿಗೆ, ಮಾರತ್ ಹಳ್ಳಿಯಿಂದ ರಾಜಾಜಿನಗರಕ್ಕೆ ಹೀಗೆ ಹಲವೆಡೆಗೆ ಕಾರುಗಳು ಲಭ್ಯವಿರುತ್ತದೆ. ಕ್ಲಿಕ್ ಇನ್ ತಾಣದಲ್ಲಿ ಜಾಹೀರಾತು ನೀಡುವವರು ಕಾರಿನ ಹೆಸರು, ನಿಮ್ಮ ವಯಸ್ಸು, ಎಲ್ಲಂದ ಎಲ್ಲಿಗೆ, ಎಷ್ಟು ಗಂಟೆಗೆ ಇತ್ಯಾದಿ ಮಾಹಿತಿಗಳನ್ನು ಬರೆದರೆ ಸಾಕು.

English summary
Several IT firms which have been using BMTC’s chartered buses on contract and are expected to be affected by the transport strike are looking at carpooling and hiring maxicab services to fill the gap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X