ಜನವರಿಯಿಂದ ಬಿಎಂಟಿಸಿ ಸ್ಮಾರ್ಟ್ ಕಾರ್ಡ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 18: ಪ್ರಯಾಣಿಕರಿಗೆ ಮತ್ತು ನಿರ್ವಾಹಕರಿಗೆ ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ನೀಡಲು ನಗದು ರಹಿತ ಸೇವೆ ಒದಗಿಸುವತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಜ್ಜೆ ಇಟ್ಟಿದೆ.

ಇದಕ್ಕಾಗಿ ಸಿದ್ಧತೆ ನಡೆಸಿರುವ ಬಿಎಂಟಿಸಿ, ಸ್ಮಾರ್ಟ್ ಕಾರ್ಡ್ ಅಭಿವೃದ್ಧಿ ಪಡಿಸಿದೆ. ಜನವರಿಯಿಂದ ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.[ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಸ್ಮಾರ್ಟ್‌ ಕಾರ್ಡ್]

BMTC to roll out smart cards in January for cashless travel

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್ ರೂಪ್ ಕೌರ್ ಅವರು 'ನಗದು ರಹಿತ ಸೇವೆ ಒದಗಿಸುವುದಕ್ಕಾಗಿ ಬಿಎಂಟಿಸಿ ಸ್ಮಾರ್ಡ್ ಕಾರ್ಡ್ ಅನ್ನು ಮುಂದಿನ ಜನವರಿಯಿಂದ ಜಾರಿಗೊಳಿಸಲಾಗುವುದು" ಎಂದು ತಿಳಿಸಿದರು.

'ಈ ಕಾರ್ಡ್ ಬಿಎಂಟಿಸಿ ಪ್ರಯಾಣಕ್ಕೆ ಮಾತ್ರವಲ್ಲ. ಇದನ್ನು ಮೆಟ್ರೋ ಟ್ರೈನ್, ವಾಹನ ನಿಲುಗಡೆ ಪಾರ್ಕಿಂಗ್ ಶುಲ್ಕ, ವ್ಯಾಪಾರಿ ಮಳಿಗೆಗಳಲ್ಲೂ ಇದನ್ನು ಹಣ ಪಾವತಿಗಾಗಿ ಬಳಸಿಕೊಳ್ಳಬಹುದಾಗಿದೆ" ಎಂದು ಅವರು ಹೇಳಿದರು.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಗ್ರಾಹಕರ ಅನುಕೂಲಕ್ಕಾಗಿ ಓಪನ್ ಲೂಪ್ ಸ್ಮಾರ್ಟ್ ಕಾರ್ಡ್ ಅಭಿವೃದ್ಧಿಪಡಿಸಲಾಗಿದೆ. ನಿಗದಿತ ಹಣವನ್ನು ರೀಚಾರ್ಜ್ ಮಾಡಿ ಅದನ್ನು ಇತರ ಪಾವತಿಗಳಿಗೂ ಬಳಸಹಬುದು ಎಂದು ಅವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
From next year, hopping from one bus to another, or from a bus to a metro, might not be an ordeal of change and cards. The BMTC hopes to launch its smart cards to allow for cashless, seamless travel for bus passengers from January.
Please Wait while comments are loading...