ಬಿಎಂಟಿಸಿ ವೋಲ್ವೋ ಬಸ್ ಮಾಸಿಕ ಪಾಸು ದರ ಇಳಿಕೆ

Posted By: Gururaj
Subscribe to Oneindia Kannada

ಬೆಂಗಳೂರು, ಆ.09 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವೋಲ್ವೋ ಬಸ್ ಮಾಸಿಕ ಪಾಸುಗಳ ದರವನ್ನು ಇಳಿಕೆ ಮಾಡಿದೆ. ಪರಿಷ್ಕೃತ ದರ ಜಾರಿಗೆ ಬರುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

'ನಮ್ಮ ಮೆಟ್ರೋ'ದಿಂದಾಗಿ ಬಿಎಂಟಿಸಿ ಆದಾಯ ಇಳಿಕೆ!

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಸ್ ಪಾಸುಗಳ ದರ ಇಳಿಕೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಶೇ 10ರಷ್ಟು ದರವನ್ನು ಕಡಿಮೆ ಮಾಡಲಾಗಿದೆ.

BMTC revises Volvo bus pass fare

ದರ ಕಡಿಮೆ ಆಗುವುದರಿಂದ3,910 ರೂ. ಇರುವ ಪಾಸು ದರ3,570 ರೂ., 4,197 ರೂ. ಇದ್ದ ದರ 3,832 ರೂ., 4,600 ರೂ. ಇದ್ದ ದರ 3,990 ರೂ. ಆಗಲಿದೆ. ಪರಿಷ್ಕೃತ ದರ ಎಂದಿನಿಂದ ಜಾರಿಗೆ ಬರಲಿದೆ ಎಂಬುದನ್ನು ಇನ್ನು ಪ್ರಕಟಿಸಿಲ್ಲ.

ದರ ಇಳಿಕೆಗೆ ಕಾರಣವೇನು? : ನಮ್ಮ ಮೆಟ್ರೊ ಮೊದಲ ಹಂತದ ಯೋಜನೆ ಪೂರ್ಣಗೊಂಡ ಬಳಿಕ, ವೋಲ್ವೋ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಇದರಿಂದ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ.

ವೋಲ್ವೋ ಬಸ್ ಪಾಸ್ ದರ ಇಳಿಕೆ ಮಾಡುವ ಕುರಿತು ಜುಲೈನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಳೆದ ವರ್ಷದಿಂದ ಶೇ 15ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಶೇ 5ಕ್ಕೆ ಇಳಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು.

BMTC Will Procure 150 Electric Buses By September | Oneindia Kannada

ಬಿಎಂಟಿಸಿ ವೋಲ್ವೋ ಬಸ್ಸುಗಳ ದಟ್ಟಣೆ ಅವಧಿಗೊಂದು ಹಾಗೂ ಉಳಿದ ಅವಧಿಗೊಂದು ಪ್ರಯಾಣ ದರ ನಿಗದಿಪಡಿಸಲು ಮುಂದಾಗಿದೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ವೋಲ್ವೋ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಇರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Metropolitan Transport Corporation (BMTC) revises Volvo bus pass fare up to 10 percent. New fare will come to effcet soon.
Please Wait while comments are loading...