ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಗಿಂತ ಆ್ಯಪ್ ಸೇವೆ ನಿಧಾನಗತಿ: ಪ್ರಯಾಣಿಕರಿಗೆ ತೊಂದರೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಪ್ರಯಾಣಿಕರಿಗೆ ಬಸ್‌ಗಳ ಸಂಚಾರದ ನಿಖರ ಮಾಹಿತಿ ನೀಡುವ ಸಲುವಾಗಿ ಬಿಎಂಟಿಸಿ ಎರಡು ವರ್ಷಗಳ ಹಿಂದೆ ಬಳಕೆಗೆ ನೀಡಿದ್ದ ಆ್ಯಪ್ ತಾಂತ್ರಿಕ ಕಾರಣಗಳಿಂದ ಸದ್ಬಳಕೆ ಆಗುತ್ತಿಲ್ಲವಾದ್ದರಿಂದ ಬಿಎಂಟಿಸಿ ಯೋಜನೆ ವಿಲವಾಗಿದೆ.

ಬಿಎಂಟಿಸಿ ಬಳಕೆಗೆ ನೀಡಿರುವ ಆ್ಯಪ್ ತುಂಬಾ ನಿಧಾನಗತಿಯಲ್ಲಿ ಮಾಹಿತಿ ನೀಡುತ್ತದೆ. ಬಿಎಂಟಿಸಿ ಬಸ್ ಸಂಚಾರದ ಕುರಿತಂತೆ ಮಾರ್ಗ ಅಥವಾ ಸಮಯವನ್ನು ಸರಿಯಾಗಿ ನೀಡುತ್ತಿಲ್ಲ. ಎಷ್ಟೋ ಸಲ ಬಸ್ ಬಂದು ಹೋದ ಬಳಿಕ ಬಸ್ ಬರಲಿದೆ ಎಂಬ ಮಾಹಿತಿ ಆ್ಯಪ್‌ನಲ್ಲಿ ತೋರಿಸುತ್ತದೆ ಎಂದು ಬಿಟಿಎಂಸಿ ಬಸ್‌ನ ನಿತ್ಯ ಪ್ರಯಾಣಿಕ ಅನಿಲ್ ಕುಮಾರ್ ಎಂಬುವವರು ದೂರಿದ್ದಾರೆ.

ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!

ಇದು ಕೇವಲ ಅನಿಲ್‌ಕುಮಾರ್ ಅವರ ದೂರಲ್ಲ. ಬದಲಾಗಿ ನೂರಾರು ಬಿಎಂಟಿಸಿ ನಿತ್ಯ ಪ್ರಯಾಣಿಕರು ಇದೇ ರೀತಿ ಭಾವನೆ ಹೊಂಗಿದ್ದು, ಅದಕ್ಕೆ ಪುಷ್ಠಿ ನೀಡುವಂತೆ 2014ರಿಂದ 2017ರವರೆಗೆ 50 ಲಕ್ಷ ಪ್ರಯಾಣಿಕರ ಸಂಖ್ಯೆ ತಟಸ್ಥವಾಗಿದ್ದರೂ ಬಿಎಂಟಿಸಿ ಆದಾಯ ಮಾತ್ರ 2014-15ರಲ್ಲಿ 1,9994 ಕೋಟಿ ರು.ಗಳಿಂದ 2016-17ಕ್ಕೆ 1,770 ಕೋಟಿ ರು.ಗಳಿಗೆ ಕುಸಿದಿದೆ.

BMTC real time app fails to provide service

ಇಷ್ಟೆಲ್ಲದರ ನಡುವೆಯೂ ಬಿಎಂಟಿಸಿ 6,440 ಬಸ್‌ಗಳಿಗೆ ಜಿಪಿಎಸ್ ಉಪಕರಣ ಅಳವಡಿಸಿ, ಪ್ರಯಾಣಿಕರಿಗೆ ಓಪನ್ ಟ್ರಾನ್ಸಿಟ್ ಡೇಟಾ ಮೂಲಕ ರಿಯಲ್ ಟೈಮ್ ಮಾಹಿತಿ ನೀಡುವುದಾಗಿ ಹೇಳುತ್ತಿದೆ.

ಓಪನ್ ಟ್ರಾನ್ಸಿಟ್ ಡೇಟಾ ಪದ್ಧತಿ ಲಂಡನ್‌ನಂತಹ ವಿದೇಶದ ನಗರಗಳಲ್ಲಿ ಬಳಕೆಯಲ್ಲಿದ್ದು, ಬಿಎಂಟಿಸಿ ಕೂಡ ಇದೇ ಮಾದರಿಯ ಸೇವೆಯ ಉದ್ದೇಶದಿಂದ ಓಪನ್ ಟ್ರಾನ್ಸಿಟ್ ಡೇಟಾ ಒದಗಿಸುವ ಆ್ಯಪ್ ಬಿಡುಗಡೆ ಮಾಡಿತ್ತು. ಟ್ರಾಫಿ, ಯೊರೈಡ್ ಹಾಗೂ ಐ-ಕಮ್ಯೂಟ್‌ನಂತಹ ಸ್ಟಾರ್ಟಪ್ ಕಂಪನಿಗಳು ರಿಯಲ್ ಟೈಮ್ ಜರ್ನಿ ಬಗೆಗೆ ಮಾಹಿತಿ ವಿನಿಯಮ ಮಾಡಿಕೊಳ್ಳುವ ಸ್‌ಟಾವೇರ್ ಅಭಿವೃದ್ಧಿಪಡಿಸುತ್ತಿದ್ದು, ಬಿಎಂಟಿಸಿ ಓಪನ್ ಟ್ರಾನ್ಸಿಟ್ ಡೇಟಾ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿವೆ.

ಸಾರಿಗೆ ತಜ್ಞೆ ರಾಜಶ್ರೀ ರಾಕೇಶ್ ಸಹಾಯ್ ಅವರು ಹೇಳುವಂತೆ ಓಪನ್ ಟ್ರಾನ್ಸಿಟ್ ಡೇಟಾ ಶೇರ್ ಮಾಡುವುದರಿಂದ ಬಿಎಂಟಿಸಿ ತನ್ನ ಆದಾಯ ಕುಂಠಿತವಾಗುತ್ತದೆ ಎಂದು ಭಾವಿಸಿದೆ. ಆದರೆ ಜನರಿಗೆ ತೊಂದರೆ ರಹಿತ ಪ್ರಯಾಣ ಒದಗಿಸಿದರೆ ಆದಾಯ ಹೆಚ್ಚುತ್ತದೆ.

English summary
Two years ago, the Bangalore Metropolitan Transport Corporation (BMTC) launched a mobile app that could track buses in real time. The idea was to provide passengers with a hassle-free commute, but the app wasn’t much of a success, plagued as it was with technical glitches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X