ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾಬ್, ಟ್ಯಾಕ್ಸಿ, ಮಿನಿ ಬಸ್ ವಿರುದ್ಧ ಬಿಎಂಟಿಸಿ ಸಮರ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 01: ಸ್ಮಾರ್ಟ್ ಫೋನ್ ಬಳಸಿ ಆನ್ ಲೈನ್ ಮೂಲಕ ಬಸ್ ಬುಕ್ ಮಾಡಿಕೊಂಡು ಹೋಗುವ ವ್ಯವಸ್ಥೆ ಬೆಂಗಳೂರಲ್ಲಿ ಜಾರಿಗೆ ಬರುವ ಮೊದಲೇ ಪ್ರತಿಭಟನೆಯನ್ನು ಎದುರಿಸುತ್ತಿದೆ. ಈ ರೀತಿ ಅಪ್ಲಿಕೇಷನ್ ಬಳಸಿ ಬುಕ್ಕಿಂಗ್ ಮಾಡಿಕೊಳ್ಳುವ ಮಿನಿ ಕ್ಯಾಬ್ ಗಳನ್ನು ನಿಷೇಧಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮನವಿ ಮಾಡಿಕೊಂಡಿದೆ.

ಓಲಾ, ಉಬರ್ ಮುಂತಾದ ರೇಡಿಯೋ ಟ್ಯಾಕ್ಸಿಗಳು ರಸ್ತೆಗಿಳಿದಾಗ ಆಟೋರಿಕ್ಷಾದವರಲ್ಲಿ ಉಂಟಾಗಿದ್ದ ತಲಮಳ ಈಗ ಬಿಎಂಟಿಸಿ ಅಧಿಕಾರಿಗಳಿಗೆ ಆಗುತ್ತಿದೆ. ಜಿಪ್ ಗೋ, ಓಲಾ ಸೇರಿದಂತೆ ಕೆಲ ಕಂಪನಿಗಳು ಟ್ಯಾಕ್ಸಿ, ಕ್ಯಾಬ್ ಮಾದರಿಯಲ್ಲೇ ಮೊಬೈಲ್ ಅಪ್ಲಿಕೇಷನ್ ಆಧಾರಿತ ಬಸ್ ಸರ್ವೀಸ್ ಆರಂಭಿಸಲು ಮುಂದಾಗಿದ್ದಾರೆ.

ಕಾನೂನು ಉಲ್ಲಂಘನೆ: ಅದರೆ, ಈ ರೀತಿ ವ್ಯವಸ್ಥೆ ಜಾರಿಗೊಂಡು ನಗರ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿದರೆ ಕರ್ನಾಟಕ ಮೋಟಾರು ಕಾಯ್ದೆ ನಿಯಮ ಉಲ್ಲಂಘನೆಯಾಗುತ್ತದೆ. ಸರ್ಕಾರದ ಖಜಾನೆಗೆ ಪ್ರತಿದಿನ ಸರಿ ಸುಮಾರು 1 ಕೋಟಿ ರು ನಷ್ಟವಾಗಲಿದೆ. ನಿಯಮದ ಪ್ರಕಾರ ನಗರದಿಂದ 25 ಕಿ.ಮೀ ವ್ಯಾಪ್ತಿ ತನಕ ಸರ್ಕಾರದ ನಗರ ಸಾರಿಗೆ ಬಸ್ ಗಳು ಸಂಚರಿಸುತ್ತಿವೆ.

BMTC Protest against App based Mini Cab Service

ಈ ಮಾರ್ಗದಲ್ಲಿ ಖಾಸಗಿ ಬಸ್ ಗಳು ಪೈಪೋಟಿಗೆ ಬಂದರೆ ನಿಯಮ ಉಲ್ಲಂಘನೆಯಾಗುತ್ತದೆ. ಇದಕ್ಕೆ ಲೈಸನ್ಸ್ ಹಾಗೂ ಅನುಮತಿ ನೀಡಬಾರದು ಎಂದು ಸಾರಿಗೆ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಎಂಟಿಸಿ ಎಂಡಿ ಏಕರೂಪ್ ಕೌರ್ ಹೇಳಿದ್ದಾರೆ.

ಪ್ರತಿದಿನ ಬಿಎಂಟಿಸಿಯ 6,400ಕ್ಕೂ ಅಧಿಕ ಬಸ್ ಗಳು 70,000ಕ್ಕೂ ಅಧಿಕ ಟ್ರಿಪ್ ಗಳನ್ನು ಕಾಣುತ್ತಿದೆ. 50ಲಕ್ಷಕ್ಕೂ ಹೆಚ್ಚು ಜನ ಬಿಎಂಟಿಸಿಯನ್ನು ಅವಲಂಬಿಸಿದ್ದಾರೆ. ಜಿಪ್ ಗೋ, ಓಲಾಗೆ ಸೇರಿದ ಮ್ಯಾಕ್ಸಿ ಕ್ಯಾಬ್, ಸ್ಕೂಲ್ ಬಸ್ ಸೇರಿದಂತೆ 130 ವಾಹನಗಳನ್ನು ಇತ್ತೀಚೆಗೆ ಸಾರಿಗೆ ಇಲಾಖೆ ಜಪ್ತಿ ಮಾಡಿದೆ. ಆದರೆ, ಸಂಚಾರ ನಿಷೇಧ ಸಾಧ್ಯವಾಗಿಲ್ಲ.

ಬಿಎಂಟಿಸಿ ಬಸ್ ಗಳು ಸರಿಯಾಗಿ ಓಡಾಡುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಐಟಿ ಕಚೇರಿಗಳಿರುವ ಕಡೆ ಬರೀ ಎಸಿ ಬಸ್ ಹಾಕುತ್ತಾರೆ. ಎಲ್ಲರೂ ಎಸಿ ಬಸ್ ನಲ್ಲೇ ಸಂಚರಿಸುತ್ತಾರೆ ಎಂಬ ಭ್ರಮೆ ಬಿಎಂಟಿಸಿಗಿದೆ. ಕಡಿಮೆ ವೆಚ್ಚದಲ್ಲಿ ಸುರಕ್ಷಿತವಾಗಿ, ತ್ವರಿತವಾಗಿ ಖಾಸಗಿ ಬಸ್, ಕ್ಯಾಬ್ ಮೂಲಕ ಸೇರಬಹುದಾದರೆ ಬಿಎಂಟಿಸಿ ಬಸ್ ಯಾರು ಹತ್ತುತ್ತಾರೆ ಎಂದು ಆರ್ ಟಿಒ ಅಧಿಕಾರಿಗಳೇ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಬಿಎಂಟಿಸಿಗೆ ಪೈಪೋಟಿ ನೀಡಲು ಮುಂದಾಗಿರುವ ಓಲಾ, ಜಿಪ್ ಗೋ ಮುಂದೆ ಯಾವ ನಡೆ ಇಡುವುದೋ ಕಾದುನೋಡಬೇಕಿದೆ.

English summary
The Bangalore Metropolitan Transport Corporation (BMTC) protesting against smartphone application based Mini Cab Service in Bengaluru. App-based aggregators like ZipGo, Ola operating mini-cabs, buses and Tempo Travellers in competition with BMTC buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X