ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ

By Nayana
|
Google Oneindia Kannada News

ಬೆಂಗಳೂರು, ಜು.2: ರಾಜಧಾನಿಯಲ್ಲಿ ಬಿಎಂಟಿಸಿಯ ನಿವೇಶನಗಳಿರುವ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಿಸುವ ಕುರಿತು ಚರ್ಚೆ ಆರಂಭವಾಗಿದೆ. ಬಿಎಂಟಿಸಿ ನಾರಾರು ಕೋಟಿ ನಷ್ಟದಲ್ಲಿದೆ ಅದನ್ನು ಲಾಭದೆಡೆಗೆ ಕೊಂಡೊಯ್ಯಲು ಸಾರಿಗೆ ಸಚಿವರು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಬೃಹತ್‌ ವಾಣಿಜ್ಯ ಮಳಿಗೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿ ಭೋಗ್ಯ ಅಥವಾ ಬಾಡಿಗೆ ರೂಪದಲ್ಲಿ ಐಟಿ ಕಂಪನಿಗಳಿಗೆ ನೀಡುವ ಮೂಲಕ ನಿಗಮಕ್ಕೆ ನೂರಾರು ಕೋಟಿ ರೂ ಆದಾಯ ತರುವ ಕುರಿತು ಸಾರಿಗೆ ಸಚಿವರು ಅಧಿಕಾರಿಗಳಿಗೆ ಜತೆ ಚರ್ಚಿಸಿದ್ದಾರೆ.

ಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆ ಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆ

ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳು ನಷ್ಟದಲ್ಲಿದೆ. ಕೇವಲ ಬಸ್‌ ಕಾರ್ಯಾಚರಣೆಯಿಂದ ಲಾಭ ಸಾಧ್ಯವಿಲ್ಲ. ನಿವೇಶನಗಳಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡುವುದರ ಮೂಲಕ ನಷ್ಟವನ್ನು ಸರಿದೂಗಿಸುವ ಚಿಂತನೆಯಿದ್ದು, ಸರ್ಕಾರ ಒಪ್ಪಿಗೆ ನೀಡಿದರೆ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಸಚಿವ ತಮ್ಮಣ್ಣ ತಿಳಿಸಿದ್ದಾರೆ.

BMTC plans to build IT parks to improve its revenue

2016-17ರಲ್ಲಿ 80 ಕೋಟಿ ರೂ. ಹಾಗೂ 2017-18ರಲ್ಲಿ 192 ಕೋಟಿ ರೂ. ಸಾಲವನ್ನು ನಿಗಮ ಮಾಡಿಕೊಂಡಿದೆ. ಸ್ವತಃ ಬಂಡವಾಳ ಹೂಡಿ ಇಂತಹ ಪಾರ್ಕ್ ನಿರ್ಮಿಸಲು ನಿಗಮ ಆರ್ಥಿಕವಾಗಿ ಸಶಕ್ತವಾಗಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

ಬಿಎಂಆರ್‌ಸಿಎಲ್‌ ಈಗಾಗಲೇ ಬೈಯಪ್ಪನಹಳ್ಳಿ ಬಳಿಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಸಮೀಪ ಮೆಟ್ರೋ ಭವನ ನಿರ್ಮಾಣಕ್ಕೆ ರೂಪು ರೇಷೆ ಸಿದ್ಧಪಡಿಸಿದೆ. ಬಿಎಂಟಿಸಿಗೆ ಪ್ರತಿ ತಿಂಗಳು 1.48 ಕೋಟಿ ರೂ. ಬಾಡಿಗೆ ನೀಡುತ್ತಿರುವ ಸಾರಿಗೆ ಇಲಾಖೆಯೂ ಶಾಂತಿನಗರದಲ್ಲೇ ಇರುವ ಬಿಎಂಟಿಸಿಯ 1.4 ಎಕರೆ ಜಾಗ ಖರೀದಿಸಲು ಚಿಂತನೆ ನಡೆಸಿದೆ.

English summary
BMTC is planning to build IT parks in its sites available in Bangalore with collaboration private holders for improve its revenue and come out from it debt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X