ಬಿಎಂಟಿಸಿಯ ವೊಲ್ವೋ ಬಸ್ ಪ್ರಯಾಣ ದರ ಹೆಚ್ಚಳ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 25 : ಬಿಎಂಟಿಸಿಯ ಹವಾನಿಯಂತ್ರಿತ ಬಸ್ಸುಗಳಲ್ಲಿ ಸಂಚಾರ ನಡೆಸುವ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ. ಬಿಎಂಟಿಸಿಯ ವೊಲ್ವೋ ಬಸ್ಸುಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರ 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹವಾನಿಯಂತ್ರಿತ ಬಸ್ಸುಗಳ ಸೇವೆಗೆ ಶೇ 15ರಷ್ಟು ಸೇವಾ ತೆರಿಗೆಯನ್ನು ವಿಧಿಸಬೇಕಾಗಿದೆ. ಈ ನಷ್ಟವನ್ನು ತುಂಬಿಕೊಳ್ಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

bus

ಬಿಎಂಟಿಸಿ ಅಧಿಕಾರಿಗಳು ಹೇಳುವಂತೆ ದರ ಹೆಚ್ಚಳ ಮಾಡಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ನೂತನ ದರ ಜಾರಿಗೆ ಬರಲಿದೆ. ಯಾವಾಗ ದರ ಹೆಚ್ಚಳ ವಾಗುತ್ತದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. [ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ದರ ಎಷ್ಟಿದೆ? : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 700 ಹವಾ ನಿಯಂತ್ರಿತ ಬಸ್ಸುಗಳು ಸಂಚಾರ ನಡೆಸುತ್ತಿವೆ. ಅವುಗಳಲ್ಲಿ 15 ರೂ.ಗಳಿಂದ 65 ರೂ.ವರೆಗೆ ಟಿಕೆಟ್ ದರವಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ವಾಯುವಜ್ರ ಬಸ್ಸುಗಳ ಟಿಕೆಟ್ ದರ 170 ರೂ.ನಿಂದ 300 ರೂ. ಇದೆ. [ವಂಡರ್ ಲಾಗೆ ಬಿಎಂಟಿಸಿಯಿಂದ ವಿಶೇಷ ಬಸ್]

ವೋಲ್ವೋ ಬಸ್ಸುಗಳ ದಿನದ ಪಾಸಿನ ದರ 140 ರೂ., ಮಾಸಿಕ ಪಾಸಿನ ದರ 2,300 ರೂ. ಹಾಗೂ ವಾಯುವಜ್ರ ಮಾಸಿಕ ಪಾಸ್ ದರ 3,350 ರೂ.ಗಳು. ಈ ದರದೊಂದಿಗೆ ಸೇವಾ ಶುಲ್ಕ ಸೇರಿಸಿ ಇನ್ನು ಮುಂದೆ ಪ್ರಯಾಣ ದರವನ್ನು ಪಾವತಿ ಮಾಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Metropolitan Transport Corporation (BMTC) all set to hike Volvo bus fare after union budget 2016-17 service tax of air-conditioned buses hiked to 15 percent.
Please Wait while comments are loading...