ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಗಿಳಿದ ಯುಡಿ ವೋಲ್ವೊ ಬಸ್ ವಿಶೇಷತೆ ಏನು?

|
Google Oneindia Kannada News

ಬೆಂಗಳೂರು, ಜೂ.23 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯುಡಿ ವೋಲ್ವೊ ಬಸ್‌ ಸಂಚಾರವನ್ನು ಪ್ರಾಯೋಗಿಕವಾಗಿ ನಗರದಲ್ಲಿ ಆರಂಭಿಸಿದೆ. ಯುಡಿ ಬಸ್ ಸಂಚಾರ ಆರಂಭಿಸಿರುವ ಮೊದಲ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.

ಯುಡಿ (ಅಲ್ಟಿಮೇಟ್‌ ಡಿಪೆಂಡೆಬಿಲಿಟಿ) ವೋಲ್ವೊ ಬಸ್‌ಗಳ ಪ್ರಾಯೋಗಿಕ ಸಂಚಾರ ಭಾನುವಾರದಿಂದ ಬೆಂಗಳೂರು ನಗರದಲ್ಲಿ ಆರಂಭವಾಗಿದೆ. ಬಿಎಂಟಿಸಿ ಪ್ರಾಯೋಗಿಕವಾಗಿ ಈ ಬಸ್ ಸಂಚಾರವನ್ನು ಮೆಜೆಸ್ಟಿಕ್‌-ಸರ್ಜಾಪುರ ಮಾರ್ಗದಲ್ಲಿ (ಮಾರ್ಗ ಸಂಖ್ಯೆ 342 ಎಫ್) ಆರಂಭಿಸಿದರು. [ಅವೆನ್ಯೂ ರಸ್ತೆಗಿಳಿದ ಬಿಎಂಟಿಸಿ ಬಸ್ಸುಗಳು!]

bus

2014ರಲ್ಲಿ ವೋಲ್ವೋ ಯುಡಿ ಬಸ್ಸನ್ನು ಮಾರುಕಟ್ಟೆಗೆ ಪರಿಚಯಿಸಿತು. 700ಕ್ಕೂ ಅಧಿಕ ವೋಲ್ವೊ ಬಸ್‌ಗಳನ್ನು ಹೊಂದಿರುವ ಬಿಎಂಟಿಸಿ ಪ್ರಾಯೋಗಿಕ ಸಂಚಾರಕ್ಕಾಗಿ ಇದನ್ನು ನಗರಕ್ಕೆ ತೆಗೆದುಕೊಂಡು ಬಂದಿದೆ. ಎರಡು ತಿಂಗಳು ಈ ಬಸ್ ಸಂಚಾರ ನಡೆಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. [ಮೂರು ನೂತನ ಮಾರ್ಗಗಳನ್ನು ಪರಿಚಯಿಸಿದ ಬಿಎಂಟಿಸಿ]

Volvo

ಯುಡಿ ವೋಲ್ವೊ ಬಸ್ ವಿಶೇಷತೆ : ಯುಡಿ ವೋಲ್ವೊ ಬಸ್‌ 12 ಮೀಟರ್ ಉದ್ದವಿದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣದ ಅನುಭವವನ್ನು ಇದು ನೀಡುತ್ತದೆ. [ಅಂದ ಹಾಗೆ ಈ ಕಂಡಕ್ಟರ್ ಹೆಸರು ತಾಂಡಚಂದ್!]

ಬಸ್ಸಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಸ್ಸಿನ ಮುಂದಿನ ಚಕ್ರ ಡಿಸ್ಕ್‌ ಬ್ರೇಕ್‌, ಹಿಂದಿನ ಚಕ್ರಗಳು ಡ್ರಮ್‌ ಬ್ರೇಕ್‌ ವ್ಯವಸ್ಥೆಯನ್ನು ಹೊಂದಿವೆ. ಮುಂಭಾಗ ಹಾಗೂ ಮಧ್ಯಭಾಗದಲ್ಲಿ ಒಂದೇ ಮೆಟ್ಟಿಲಿನ ಪ್ರವೇಶದ್ವಾರವಿದ್ದು, ಅಂಗವಿಕಲರಿಗೂ ಬಸ್ ಹತ್ತಲು ಇದು ಸಹಾಯಕವಾಗಿದೆ.

volvo bus
English summary
Bangalore Metropolitan Transport Corporation (BMTC) launched Ultimate Dependability (UD) Volvo bus service in Bengaluru city. The new service will be operated on a trial basis on route number 342F from Kempegowda bus station to Sarjapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X