ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ಧ ಸೇವೆ: ಬಿಎಂಟಿಸಿ ಬಸ್ ನಿಲ್ದಾಣಗಳಲ್ಲೂ ಬಾಡಿಗೆ ಬೈಕ್

|
Google Oneindia Kannada News

ಬೆಂಗಳೂರು, ಮಾರ್ಚ್ 15: ಬಸ್ ನಿಲ್ದಾಣಗಳಿಂದ ಮನೆಗಳಿಗೆ ತಲುಪಲು ಅಥವಾ ಮನೆಯಿಂದ ಬಸ್ ನಿಲ್ದಾಣಗಳಿಗೆ ತಲುಪಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬಿಎಂಟಿಸಿಯು 'ಸಿದ್ಧ ಸೇವೆ' ಎನ್ನುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.

ಇದಕ್ಕಾಗಿ ಮೆಟ್ರೋ ಬೈಕ್ಸ್ ಎಂಬ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದೆ. ನಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ಮೆಟ್ರೋ ಬೈಕ್ ಸೇವೆಗೆ ಸಚಿವ ಎಚ್.ಎಂ. ರೇವಣ್ಣ ಚಾಲನೆ ನೀಡಿದ್ದಾರೆ.

ವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿ

ಲಾಸ್ಟ್ ಮೈ ಕನೆಕ್ಟಿವಿಟಿ ವ್ಯವಸ್ಥೆಯಡಿ ಬಿಎಂಟಿಸಿ ಪ್ರಯಾಣಿಕರನ್ನು ನಿಲ್ದಾಣಗಳಿಂದ ನೇರವಾಗಿ ಮನೆಗೆ ತಲುಪಿಸಲು ಎರಡನೇ ಹಂತದ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರಾಯೋಗಿಕವಾಗಿ ಎರಡು ಹಂತದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ.

BMTC launches bike service for commuters

ಬಿಎಂಆರ್ ಸಿಎಲ್ ನ 36 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿರುವ ಮೆಟ್ರೋ ಬೈಕ್ಸ್ ಸಂಸ್ಥೆಯು ಬಸ್ ನಿಲ್ದಾಣದಲ್ಲೂ ಬಾಡಿಗೆ ಆಧಾರದ ಮೇಲೆ ಗೇರ್ ರಹಿತ ವಾಹನಗಳನ್ನು ಬಾಡಿಗೆಗೆ ನೀಡುತ್ತಿದೆ. ಪ್ರಯಾಣಿಕರು ಮೆಟ್ರೋ ಬೈಕ್ಸ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಈ ಸೇವೆಯನ್ನು ಪಡೆಯಬಹುದು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರಯಾಣಿಕರು ಬೈಕ್ ಗಳನ್ನು ಬಾಡಿಗೆಗೆ ಪಡೆದು ನಿಗದಿತ ಸ್ಥಳಕ್ಕೆ ಪ್ರಯಾಣಿಸಿ, ಅಲ್ಲಿಯೇ ನಿಲುಗಡೆ ಮಾಡಬಹುದು. ಅದೇ ರೀತಿ ಸೈಕಲ್ ಗಳನ್ನು ಬಾಡಿಗೆಗೆ ಪಡೆದು ಸ್ವತಃ ಚಾಲನೆ ಮಾಡಿಕೊಂಡು ಹೋಗಲು ಅವಕಾಶ ನೀಡಲಾಗಿದೆ, ಪ್ರತಿ ಕಿ.ಮೀಗೆ 5ರೂ. ಇಲ್ಲವೇ ನಿಮಿಷಕ್ಕೆ 50ಪೈಸೆ ನಿಗದಿಪಡಿಸಲಾಗಿದೆ.

English summary
BMTC has launched bike and bicycle service Siddha seve' in 38 bus stands for its commuters. Transport minister HM Revanna inaugurated the service in Shantinagar depot on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X