ಬಿಎಂಟಿಸಿ ಸಂಚಾರ ಸ್ಥಗಿತ, ಪ್ರಯಾಣಿಕರಿಗೆ ತಟ್ಟಿದ ಮುಷ್ಕರದ ಬಿಸಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಗಳೂರಿನ ಸಾರಿಗೆ ನೌಕರರು ಕೈಜೋಡಿಸಿದ್ದು, ಭಾನುವಾರ ಬೆಂಗಳೂರಿನ ಪೂರ್ವ ವಿಭಾಗದ ಡಿಪೋ ಬಸ್ ಗಳು ರಸ್ತೆಗಳಿದಿಲ್ಲ. ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಒದಗಿಸುವ ಸರ್ಕಾರದ ಭರವಸೆ ಟುಸ್ ಆಗಿದೆ.

* 2ನೇ ಪಾಳಿಯಲ್ಲಿ ಹೊರಡಬೇಕಿದ್ದ ಸುಮಾರು 80ಕ್ಕೂ ಅಧಿಕ ವೋಲ್ವೊ ಬಸ್ ಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೇ ನಿಂತಿವೆ. ಭಾನುವಾರ ಮಧ್ಯಾಹ್ನದಿಂದಲೇ ಬಿಎಂಟಿಸಿ ಮುಷ್ಕರ ಜೋರಾಗಿದೆ.

* ಬಿಎಂಟಿಸಿ ಮುಷ್ಕರದ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲುಗಳನ್ನು ಪ್ರತಿ 6 ನಿಮಿಷಗಳಂತೆ ಓಡಿಸಲು ನಿರ್ಧಾರ. ರಾತ್ರಿ 12ಗಂಟೆ ತನಕ ಮೇಟ್ರೋ ಸಂಚಾರ ಸಾಧ್ಯತೆ.


* ಜಯನಗರದ ಡಿಪೋದಲ್ಲಿ 400 ಬಸ್ ಗಳು ನಿಂತಿದ್ದು, ಪೂರ್ವ ವಿಭಾಗದ ನಂತರ ದಕ್ಷಿಣ ಹಾಗೂ ಉತ್ತರ ವಿಭಾಗದ ಡಿಪೋಗಳಲ್ಲೂ ಮುಷ್ಕರ ಆರಂಭ.

* ಬೆಂಗಳೂರಿನ ಪೂರ್ವ ವಿಭಾಗದ ಬಸ್ ಗಳು ಡಿಪೋಗಳಲ್ಲೇ ನಿಂತಿವೆ. ಹೊಸಕೋಟೆ, ಎಚ್ ಆರ್ ಎಸ್ ಲೇಔಟ್, ಕೆಂಗೇರಿ,ಕೆಆರ್ ಪುರಂ ಹುಸ್ಕೂರು ಡಿಪೋ ಬಸ್ ಗಳು ರಸ್ತೆಗಿಳಿದಿಲ್ಲ.

* ಬೆಂಗಳೂರು ಪೂರ್ವ್ ಹಾಗೂ ದಕ್ಷಿಣ ವಿಭಾಗದ ಡಿಪೋಗಳ ಬಸ್ ಗಳ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಂಡಿ ಏಕರೂಪ್ ಕೌರ್ ಅವರು ಸ್ಪಷ್ಟಪಡಿಸಿದ್ದಾರೆ.[ಭಾನುವಾರದಂದೇ ಮಂಡ್ಯದಲ್ಲಿ KSRTC ಮುಷ್ಕರ ಆರಂಭ]

BMTC IVDTU strike updates 24 July

55,000ಕ್ಕೂ ಅಧಿಕ ಕೆಎಸ್ಸಾರ್ಟಿಸಿ ಹಾಗೂ 35,554 ಕ್ಕೂ ಅಧಿಕ ಬಿಎಂಟಿಸಿ ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜುಲೈ 25ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ.

ಆದರೆ, ಮಂಡ್ಯ, ಮಳವಳ್ಳಿ, ಕೆಆರ್ ಪೇಟೆಗಳಲ್ಲಿ ಭಾನುವಾರದಂದೇ ನೌಕರರು ಮುಷ್ಕರ ಹೂಡಿರುವುದರಿಂದ, ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. [ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಏಕೆ, ಏನು?]

ಬಿಎಂಟಿಸಿ, ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ಸೇರಿ ಎಲ್ಲಾ ನಿಗಮಗಳಿಂದ ಒಟ್ಟು 23 ಸಾವಿರ ಬಸ್ಸುಗಳಿದ್ದು, 1.25 ಲಕ್ಷ ಸಿಬ್ಬಂದಿಗಳಿದ್ದಾರೆ.

ಮುಷ್ಕರಿಂದಾಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸಾರಿಗೆ ಸಂಸ್ಥೆ ನೌಕರರು ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ, 6 ಯೂನಿಯನ್ ಗಳ ಪೈಕಿ ನಾಲ್ಕು ಯೂನಿಯನ್ ಮಾತ್ರ ಮುಷ್ಕರ ಹೂಡುತ್ತಿದ್ದು ಯಾವುದೇ ಸಮಸ್ಯೆಯಿಂದ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
KSRTC, BMTC workers unions (IVDTU) have called for an indefinite strike from July 25 to press for their demands. But. BMTC buses from Bengaluru East depot started strike on July 24 itself.
Please Wait while comments are loading...