ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?

|
Google Oneindia Kannada News

Recommended Video

ಓಲಾ ಮಾದರಿಯಲ್ಲೇ ಸೇವೆ ನೀಡಲು ಹೊರಟಿದೆ ಬಿಎಂಟಿಸಿ | Oneindia Kannada

ಬೆಂಗಳೂರು, ಜನವರಿ 2: ಓಲಾ ಮಾದರಿ ಸೇವೆಯನ್ನು ನೀಡಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಹಾಗಾದರೆ ಸೇವೆ ಹೇಗಿರುತ್ತದೆ ಎಂಬುದನ್ನು ನೋಡೋಣ. ಓಲಾ, ಊಬರ್ ಮಾದರಿಯಲ್ಲಿ ಅಪ್ಲಿಕೇಷನ್ ಆಧಾರಿತ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ.

ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ನೀಡಲು ಸ್ವತಃ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿ, ಅಗ್ರಿಗೇಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಪ್ಲಿಕೇಷನ್ ಆಧಾರಿತ ಸೇವೆ ಕಲ್ಪಿಸಲು ಚಿಂತನೆ ನಡೆಸಿದೆ. ಮುಂಬರುವ ದಿನಗಳಲ್ಲಿ ಬಿಎಂಟಿಸಿ ಇಂದಲೂ ಕ್ಯಾಬ್ ಸೇವೆ ದೊರೆಯಲಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಈಗಿರುವ ಅಪ್ಲಿಕೇಷನ್ ಆಧಾರಿತ ಕ್ಯಾಬ್‌ಗಳು ಹಾಗೂ ಮೆಟ್ರೋದಿಂದಾಗಿ ಬಿಎಂಟಿಸಿಗೆ ಬರುವ ಆದಾಯ ಕ್ಷೀಣಿಸಿದೆ.ಹಾಗೆಯೇ ಖಾಸಗಿ ಬಸ್‌ಗಳು ಕೂಡ ನಗರದೊಳಗೆ ಪ್ರಯಾಣಿಸುತ್ತಿರುವುದು ಕೂಡ ಬಿಎಂಟಿಸಿಗೆ ತಲೆನೋವಾಗಿದೆ.

BMTC is planning to launch OLA like services

ಈಗಾಗಲೇ ದೆಹಲಿಯಲ್ಲಿ ಅಪ್ಲಿಕೇಷನ್ ಆಧಾರಿತ ಹವಾನಿಯಂತ್ರಿತ ಬಸ್‌ಗಳ ಸೇವೆ ಇದೆ. ಬೆಂಗಳೂರಲ್ಲೂ ಇದನ್ನು ಪರಿಚಯಿಸಬಹುದೇ ಎಂಬುದರ ಬಗ್ಗೆಯೂ ಆಲೋಚನೆ ಇದ್ದಂತಿದೆ.ಓಲಾ ಮತ್ತು ಊಬರ್ ಸೇವೆಗಳು ಅಲ್ಪಾವಧಿಯಲ್ಲಿ ಹೆಚ್ಚು ಜನರನ್ನು ತಲುಪಿವೆ.

ನೆತ್ತಿಗೆ ಏರಿತು ನೋಡಿ, ಅದೆಲ್ಲಿಂದ ಆಪರಿ ಸಿಟ್ಟು ಉಕ್ಕೇರಿಬಂತೋ!ನೆತ್ತಿಗೆ ಏರಿತು ನೋಡಿ, ಅದೆಲ್ಲಿಂದ ಆಪರಿ ಸಿಟ್ಟು ಉಕ್ಕೇರಿಬಂತೋ!

ಇದರ ಮುಂದುವರೆದ ಭಾಗವಾಗಿ ಬೈಕ್ ಟ್ಯಾಕ್ಸಿ ಸೇವೆಗೂ ಸರ್ಕಾರ ಅನುಮತಿ ನೀಡಲು ಮುಂದಾಗಿದೆ. ಹಾಗಾಗಿ ನಿಗಮದಿಂದಲೇ ಅಪ್ಲಿಕೇಷನ್ ಆಧಾರಿತ ಸೇವೆ ನೀಡಲು ಮುಂದಾಗಿದೆ.

English summary
BMTC is planning to launch ola like cab services in the Bengaluru for Last mile connectivity of the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X