ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್‌ಫೀಲ್ಡ್‌ನಲ್ಲಿ ಚಕ್ರ ಸಾರಿಗೆ ಸೇವೆ ಆರಂಭಿಸಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಜ.13 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಕ್ರ ಸಾರಿಗೆ ಸೇವೆಯನ್ನು ವೈಟ್‌ಫೀಲ್ಡ್‌ನಲ್ಲಿ ಆರಂಭಿಸಿದೆ. ವೈಟ್‌ಫೀಲ್ಡ್‌ಗೆ ಸಾಕಷ್ಟು ಬಸ್ಸುಗಳು ಸಂಚರಿಸುತ್ತಿದ್ದವು. ಆದರೆ, ಈ ಪ್ರದೇಶದ ಒಳಭಾಗಕ್ಕೆ ಬಸ್ ಸೌಕರ್ಯವಿರಲಿಲ್ಲ ಆದ್ದರಿಂದ ಚಕ್ರ ಸಾರಿಗೆ ಸೇವೆಯನ್ನು ಆರಂಭಿಸಲಾಗಿದೆ.

ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಕ್ರ ಸಾರಿಗೆ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಿವಾಜಿನಗರದಿಂದ ವೈಟ್‌ಫೀಲ್ಡ್‌ಗೆ ಹಲವಾರು ಬಸ್ಸುಗಳು ಸಂಚರಿಸುತ್ತವೆ. ಆದರೆ, ಒಳಭಾಗಕ್ಕೆ ಬಸ್ ಸೌಕರ್ಯವಿರಲಿಲ್ಲ ಆದ್ದರಿಂದ ಉದ್ಯೋಗಿಗಳಿಗೆ ತೊಂದರೆಯಾಗಬಾರದು ಎಂದು ಚಕ್ರ ಸಾರಿಗೆ ಸೇವೆ ಆರಂಭಿಸಲಾಗಿದೆ ಎಂದರು. [ಬಿಎಂಟಿಸಿ ದರ ಕೊಂಚ ಇಳಿಕೆ: ಜನ ಏನಂತಾರೆ?]

Chakra bus

ಬಸ್ಸುಗಳ ಮಾರ್ಗ : ಪ್ರತಿ 30 ನಿಮಿಷಗಳ ಅಂತರದಲ್ಲಿ ನೂತನ ಚಕ್ರ ಸಾರಿಗೆ ಬಸ್ಸುಗಳು ಸಂಚರಿಸಲಿವೆ.[ಮಾರ್ಕೊಪೋಲೊ ಬಸ್ ಖರೀದಿ ಬಗ್ಗೆ ತನಿಖೆ]

* ಚಕ್ರ-8, ಚಕ್ರ-8ಎ, ಚಕ್ರ-9 ಮತ್ತು ಚಕ್ರ-9ಎ ಮಾರ್ಗಸಂಖ್ಯೆಯ ನಾಲ್ಕು ಬಸ್‌ಗಳು ವೈಟ್‌ಫೀಲ್ಡ್ ಟಿಟಿಎಂಸಿಯಿಂದ ಬಿಗ್ ಬಜಾರ್, ಐಟಿಪಿಎಲ್, ಹೋಪ್ ಫಾರಂ, ಅಂಚೆ ಕಚೇರಿ, ವರ್ತೂರು ಕೋಡಿ, ಸಿದ್ದಾಪುರ, ಕುಂದಲಹಳ್ಳಿ ಗೇಟ್, ಗ್ರಾಪೈಟ್ ಇಂಡಿಯಾ, ನಲ್ಲೂರಹಳ್ಳಿ ಪ್ರದೇಶಗಳಲ್ಲಿ ಸುತ್ತುವಳಿಯಂತೆ ಸಂಚರಿಸಲಿವೆ.

ಎಸಿ ಬಸ್ಸುಗಳ ಸೇವೆ ವಿಸ್ತರಣೆ : 335-ಇಸಿ ಮಾರ್ಗಸಂಖ್ಯೆಯ ಎಸಿ ಬಸ್ಸುಗಳ ಸೇವೆಯನ್ನು 8ರಿಂದ 11ಕ್ಕೆ ಹೆಚ್ಚಿಸಲಾಗಿದ್ದು, ಮೆಜೆಸ್ಟಿಕ್‌ನಿಂದ ಪುನಃ ಮೆಜೆಸ್ಟಿಕ್‌ಗೆ ಸಂಚರಿಸಲಿವೆ. ಕಾಡುಗೋಡಿಯಿಂದ ಶಿವಾಜಿನಗರಕ್ಕೆ ಸಂಚರಿಸುತ್ತಿದ್ದ 331-ಎ ಮಾರ್ಗಸಂಖ್ಯೆಯ 6 ಟ್ರಿಪ್‌ಗಳನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದವರೆಗೆ ವಿಸ್ತರಣೆ ಮಾಡಲಾಗಿದೆ.

English summary
The Bangalore Metropolitan Transport Corporation (BMTC) introduced new Chakra bus services in Whitefield, Bengaluru. Bus numbers 8, 8A, 9, and 9A which will operate from Whitefield TTMC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X