ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 8: ಬೆಂಗಳೂರು ಮಹಾನಗರ ಪಾಲಿಕೆಯ ಸಾವಿರಕ್ಕೂ ಹೆಚ್ಚು ಬಸ್‌ಗಳು ಈ ವರ್ಷ ಗುಜರಿಗೆ ಬೀಳಲಿದೆ. ಬ್ರೇಕ್‌ ಫೇಲ್‌ ಆಗುವುದು, ರಸ್ತೆ ಮಧ್ಯೆ ಕೆಟ್ಟು ನಿಲ್ಲುವುದು, ಬಸ್‌ ಬಾಗಿಲು ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದು ಇನ್ನಿತರೆ ಸಮಸ್ಯೆಗಳು ಎದುರಾಗಿತ್ತು.

ಹಾಗಾಗಿ 1298 ಬಿಎಂಟಿಸಿ ಬಸ್‌ಗಳಿಗೆ ಗುಜರಿ ಭಾಗ್ಯ ಕರುಣಿಸಲು ಮುಂದಾಗಿದೆ. ಸಂಚಾರ ಆರಂಭಿಸಿ 11 ವರ್ಷವಾಗಿರುವ ಬಸ್‌ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ 8.5 ಲಕ್ಷ ಕಿ.ಮೀ ಸಂಚರಿಸಿರುವ ಬಸ್‌ಗಳು ಗುಜರಿಗೆ ಬೀಳಲಿವೆ. 2017-18ನೇ ಸಾಲಿನಲ್ಲಿ 1,398 ಬಸ್‌ಗಳನ್ನು ಗುಜರಿಗೆ ಹಾಕಲಾಗಿತ್ತು.

ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌

ನಿಗಮದ ಪ್ರಕಾರ ಪ್ರತಿ ವರ್ಷ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತದೆ. ಕೆಲ ಬಸ್‌ಗಳು 8.50 ಲಕ್ಷ ಕಿ.ಮೀ ಹಾಗೂ 11 ವರ್ಷ ಪೂರೈಸಿದರೂ ಸುಸ್ಥಿತಿಯಲ್ಲಿರುತ್ತದೆ. ಆದರೂ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ಬಸ್‌ನ ಯಾವ ಭಾಗಗಳು ಸುಸ್ಥಿತಿಯಲ್ಲಿದೆ ಎಂಬುದನ್ನು ಗುರುತಿಸಿ ಅದನ್ನು ಕಳಚಿಕೊಂಡು ಬಳಿಕ ಹರಾಜಿಗೆ ಇರಿಸಲಾಗುತ್ತದೆ.

Bmtc has decided to scrap more than 1298 buses this year

ಕಳಚಿದ ಬಿಡಿ ಭಾಗಗಳಿಗೆ ಗರಿಷ್ಠ 2 ಲಕ್ಷ ರೂ ದೊರೆಯಬಹುದು. ಪ್ರತಿ ಷರ್ವ ಹೊಸ ಬಸ್‌ಗಳನ್ನು ಖರೀದಿಸುವುದುರಿಂದ ಕಾರ್ಯಾಚರಣೆಗೆ ಸಮಸ್ಯೆಯಾಗುವುದಿಲ್ಲ. ಕಳೆದ ವರ್ಷ 1406 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ.

English summary
Bmtc has decided to scrap more than 1298 buses this year. Officials have claimed that these buses have ran 8.5 lakhs of kilometres or 11 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X