ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವೇಶ್ವರ ನಿಲ್ದಾಣಕ್ಕೆ ಬಿಎಂಟಿಸಿ ಫೀಡರ್ ಬಸ್ ಸಂಖ್ಯೆ ಹೆಚ್ಚಳ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಹೆಚ್ಚುವ ಸಾಧ್ಯತೆಯಿದೆ. ಕೆಎಸ್ ಆರ್ ಟಿಸಿಗೆ ಅನುಕೂಲವಾಗುವಂತೆ ನಿಲ್ದಾಣದಿಂದ ಬಸ್ ಕಾರ್ಯಾಚರಣೆ ನಡೆಸಲು ಬಿಎಂಟಿಸಿ ನಿರ್ಧರಿಸಿದೆ.

ಪೀಣ್ಯ ಬಸವೇಶ್ವರ ನಿಲ್ದಾಣ ಪ್ರಯಾಣಿಕರಿಲ್ಲದೆ ಭಣಭಣ! ಪೀಣ್ಯ ಬಸವೇಶ್ವರ ನಿಲ್ದಾಣ ಪ್ರಯಾಣಿಕರಿಲ್ಲದೆ ಭಣಭಣ!

ಅಂದಾಜು 4 ವರ್ಷಗಳ ಬಳಿಕ ಮರು ಜೀವ ಪಡೆದ ಬಸವೇಶ್ವರ ಬಸ್ ನಿಲ್ದಾಣ, ಒಂದೇ ಒಂದು ಬಿಎಂಟಿಸಿ ಬಸ್ ಸಂಪರ್ಕವಿಲ್ಲದೆ ಮತ್ತೆ ವಿಫಲವಾಗುವ ಮುನ್ಸೂಚನೆ ನೀಡಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ರಾಜ್ಯದ ಹಲವು ಭಾಗಗಳಿಗೆ ತೆರಳುವ 980 ಬಸ್ ಗಳ ಪೈಕಿ 60 ಬಸ್ ಗಳನ್ನು ಈ ನಿಲ್ದಾಣಕ್ಕೆ ಏ,12ರಂದು ಕೆಎಸ್ ಆರ್ ಟಿಸಿ ಸ್ಥಳಾಂತರಿಸಿತ್ತು. ಆದರೆ ಈ 60 ಬಸ್ ಗಳಿಗೆ ಹತ್ತುತ್ತಿದ್ದ ಪ್ರಯಾಣಿಕರ ಸಂಖ್ಯೆ ನಿತ್ಯ 50-60 ದಾಟುತ್ತಿರಲಿಲ್ಲ. ಬಸ್ ನಿಲ್ದಾಣ ಮುಖ್ಯ ರಸ್ತೆಯಿಂದ ಅಂದಾಜು 1ಕಿ.ಮೀ ಪಳಭಾಗದಲ್ಲಿದ್ದು, ಸೂಕ್ತ ಸಂಪರ್ಕ ಕೊರತೆಯೇ ನಿಲ್ದಾಣ ವಿಫಲವಾಗಲು ಪ್ರಮುಖ ಕಾರಣವಾಗಿತ್ತು.

BMTC feeder service to Peenya bus stand

ಬಸ್ ನಿಲ್ದಾಣದ ಸುತ್ತಮುತ್ತಲಿನಿಂದ ಬರುವ ಜನರಿಗೆ ಅನುಕೂಲವಾಗುವಂತೆ ಹಾಗೂ ಸಮೀಪದ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಬರಲು 2 ಮಿನಿ ಫೀಡರ್ ಬಸ್ ಸೇವೆಯನ್ನು ಉಚಿತವಾಗಿ ಕೆಎಸ್ ಆರ್ ಟಿಸಿ ಪ್ರಾರಂಭಿಸಿದೆ. ಜನರಿಗೆ ಬೇಕಾಗುವ ಸ್ಥಳಕ್ಕೆ ಈ ಬಸ್ ಸಂಚರಿಸದಿರುವ ಕಾರಣದಿಂದ ಉಚಿತ ಸೇವೆಯೂ ಪ್ರಯಾಣಿಕರನ್ನು ಆಕರ್ಷಿಸಲು ವಿಫಲವಾಗಿದೆ.

ಈಗ ಬಿಎಂಟಿಸಿ ಅಧಿಕಾರಿಗಳು ಬಸವೇಶ್ವರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಯಾವೆಲ್ಲಾ ಪ್ರದೇಶಗಗಳಿಗೆ ಬಸ್ ಪ್ರಾರಂಭಿಸಬಹುದು ಎಂದು ಪರಿಶೀಲಿಸಿದ್ದಾರೆ.

English summary
BMTC will soon start feeder service from majestic to Basaveshwar bus stand in Peenya. It is expected that the number of passengers will be increased in Peenya bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X