ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳ ಹಳೆ ಬಸ್‌ಪಾಸ್‌ ಅವಧಿ ಸೆ.30ರವರೆಗೆ ವಿಸ್ತರಿಸಿದ ಬಿಎಂಟಿಸಿ

By Nayana
|
Google Oneindia Kannada News

Recommended Video

ವಿದ್ಯಾರ್ಥಿಗಳ ಹಳೆ ಬಸ್ ಪಾಸ್ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದ ಬಿಎಂಟಿಸಿ | Oneindia kannada

ಬೆಂಗಳೂರು, ಸೆಪ್ಟೆಂಬರ್ 1: ಬಿಎಂಟಿಸಿಯು ಹಳೆ ವಿದ್ಯಾರ್ಥಿಪಾಸ್ ಅವಧಿಯನ್ನು ವಿಸ್ತರಿಸಿದೆ. ಪಿಯು, ಪದವಿ, ಮೆಡಿಕಲ್, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಸೇರಿ ಇತರೆ ವಿದ್ಯಾರ್ಥಿಗಳು ಸೆಪ್ಟೆಂಬರ್ 30ರವರೆಗೂ ಕಾಲೇಜಿನ ಗುರುತಿನ ಚೀಟಿ ಮತ್ತು ಶುಲ್ಕ ಪಾವತಿಸಿ ರಸೀದಿ ಜತೆಗೆ ಹಿಂದಿನ ವರ್ಷದ ಬಸ್‌ಪಾಸ್ ತೋರಿಸಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.

ಕಾಗದ ಮಾದರಿ ಬದಲಾಗಿ ಸ್ಮಾರ್ಟ್ ಕಾರ್ಡ್ ರೂಪದ ಪಾಸ್ ನೀಡಲು ನಿಗಮ ನಿರ್ಧರಿಸಿತ್ತು ವಿದ್ಯಾರ್ಥಿ ಬಸ್‌ ಪಾಸ್ ಗೆ ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನಾಂಕವಾಗಿತ್ತು.

ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ

ಅರ್ಜಿ ಸಲ್ಲಿಸಿರುವವರು ಸ್ವೀಕೃತಿ ಪತ್ರ ಮತ್ತು ಕಾಲೇಜಿನ ಗುರುತಿನಚೀಟಿಯೊಂದಿಗೆ ಸೆಪ್ಟೆಂಬರ್ ಒಂದರಿಂದ ಪಾಸ್ ತಲುಪುವವರೆಗೂ ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ನಷ್ಟದಿಂದ ಪಾರಾಗಲು ಮಾರ್ಗಕ್ಕೆ ಕತ್ತರಿ ಹಾಕಲಿದೆ ಬಿಎಂಟಿಸಿ!ನಷ್ಟದಿಂದ ಪಾರಾಗಲು ಮಾರ್ಗಕ್ಕೆ ಕತ್ತರಿ ಹಾಕಲಿದೆ ಬಿಎಂಟಿಸಿ!

BMTC extends old bus pass validity till month end

ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಪಾಸ್ ಗಳನ್ನು ತಲುಪಿಸುವುದಾಗಿ ನಿಗಮ ತಿಳಿಸಿತ್ತು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಈ ಅವಕಾಶ ಮುಂದುವರೆಸುವಂತೆ ಕೋರಿದ್ದಾರೆ.

ಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ದರ ಇಳಿಕೆಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ದರ ಇಳಿಕೆ

ಈ ಹಿನ್ನೆಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳು ಸೆಪ್ಟೆಂಬರ್ 1ರಿಂದ ಪಾಸ್‌ ಗಾಗಿ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರ ಮತ್ತು ಶಾಲಾ ಕಾಲೇಜು ಶುಲ್ಕ ಪಾವತಿಸಿದ ರಸೀದಿ ಮತ್ತು ಗುರುತಿನ ಚೀಟಿಯೊಂದಿಗೆ ಪಾಸ್ ತಲುಪುವವರೆಗೂ ವಾಸಸ್ಥಳದಿಂದ ಶಾಲೆ, ಕಾಲೇಜುಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

English summary
BMTC has issued a circular regarding students bus pass to extend old bus pass validity up to September 30. PU College, degree, diploma, engineering, medical courses students can travel with last year's bus pass now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X