ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ-ಕಾಲೇಜು ಬಸ್‌ ಪಾಸ್‌ ಅವಧಿ ವಿಸ್ತರಣೆ ಮಾಡಿದ ಬಿಎಂಟಿಸಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಈಗಿನ್ನೂ ಕಾಲೇಜಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಪಾಸ್‌ಗಳಿಗೆ ಅರ್ಜಿ ಸಲ್ಲಿಸಲು ಆ.15 ಕೊನೆಯ ದಿನವಾಗಿತ್ತು. ಅಲ್ಲಿಒಯವರೆಗೆ ಕಾಲೇಜು ಗುರುತಿನ ಚೀಟಿ ಅಥವಾ ಶಾಲೆ, ಕಾಲೇಜುಗಳಲ್ಲಿ ಶುಲ್ಕ ಪಾವತಿಸಿದ ರಶೀತಿ ತೋರಿಸಿ ಪ್ಯಾಣಿಸಬಹುದಿತ್ತು.

ಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

ಆ.16ರಿಂದ ಅರ್ಜಿ ಸ್ವೀಕೃತಿ ಪತ್ರ ಮತ್ತು ಗುರುತಿನ ಚೀಟಿ ತೋರಿಸಿ ಸ್ಮಾರ್ಟ್‌ ಕಾರ್ಡ್‌ ಸಿಗುವ ವರೆಗೆ ಪ್ರಯಾಣಿಸಬಹುದಿತ್ತು. ಆದರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೆ ಎಂಜಿನಿಯರಿಂಗ್‌ ಸೇರಿದಂತೆ ಕೆಲ ಪದವಿ ತರಗತಿಗಳು ಇನ್ನೂ ಆರಂಭವಾಗಿಲ್ಲ. ಹೀಗಾಗಿ ಅರ್ಜಿ ಅವಧಿಯನ್ನು ವಿಸ್ತರಿಸಲು ಬಿಎಂಟಿಸಿ ಮುಂದಾಗಿದೆ.

 ಪ್ರತಿ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌

ಪ್ರತಿ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌

ಬಿಎಂಟಿಸಿ ಪ್ರತಿ ವರ್ಷವು ಸಾಮಾನ್ಯವಾಗಿ 4 ಲಕ್ಷದಷ್ಟು ಬಸ್‌ಪಾಸ್‌ಗಳನ್ನು ವಿತರಣೆ ಮಾಡುತ್ತದೆ. ಆದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಇದುವರೆಗೆ 1.44 ಲಕ್ಷ ವಿದ್ಯಾರ್ಥಿಗಳಷ್ಟೇ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ವರ್ಷದಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬಂದಿರುವ ಕಾರಣ ಅರ್ಜಿ ಸಲ್ಲಿಕೆ ವಿಳಂಬವಾಗಿದೆ ಎನ್ನಲಾಗಿದೆ.

ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌

1-8 ನೇ ತರಗತಿ ಮಕ್ಕಳಿಗೆ ಶಾಲೆಗೆ ಸ್ಮಾರ್ಟ್‌ಕಾರ್ಡ್‌ ರವಾನೆ

1-8 ನೇ ತರಗತಿ ಮಕ್ಕಳಿಗೆ ಶಾಲೆಗೆ ಸ್ಮಾರ್ಟ್‌ಕಾರ್ಡ್‌ ರವಾನೆ

ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳ ಸ್ಮಾರ್ಟ್‌ಕಾರ್ಡ್‌ ಪಾಸ್‌ಗಳನ್ನು ಸಂಬಂಧಪಟ್ಟ ಶಾಲೆಗೆ ರವಾನಿಸಲಾಗುವುದು. 8ರಿಂದ 10, ಪಿಯುಸಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆ ಮೂಲಕ ಅವರವರ ವಿಳಾಸಕ್ಕೆ ಪಾಸ್‌ಗಳನ್ನು ತಲುಪಿಸಲಾಗುವುದು. ಪಾಸ್‌ ತಲುಪಿದ ನಂತರ ಶುಲ್ಕ ಪಾವತಿ ಮಾಡಬೇಕಿದೆ. ನಿತ್ಯ 5 ಸಾವಿರ ಸ್ಮಾರ್ಟ್‌ಕಾರ್ಡ್‌ಗಳನ್ನು ಮುದ್ರಿಸಿ, ಅಂಚೆ ಮೂಲಕ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿ

 ಪಾಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

ಪಾಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

ಪಿಯುಸಿ ವಿದ್ಯಾರ್ಥಿಗಳು ಮೊಬೈಲ್‌ ಅಥವಾ ಬಿಎಂಟಿಸಿ ವೆಬ್‌ಸೈಟ್‌ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. 161 ಕರೆ ಮಾಡಿ, ಕನ್ನಡ ಅಥವಾ ಇಂಗ್ಲಿಷ್‌ ಆಯ್ಕೆ ಮಾಡಿಕೊಂಡು, ಬಿಎಂಟಿಸಿ ಸೇವೆಗೆ 6 ಅನ್ನು ಒತ್ತಿ, ವಿದ್ಯಾರ್ಥಿ ಬಸ್‌ ಪಾಸ್‌ಗೆ 2 ಅನ್ನು ಆಯ್ಕೆ ಮಾಡಿಕೊಂಡರೆ, ವೆಬ್‌ಲಿಂಕ್‌ ಮೂಲಕ ಅರ್ಜಿ ಬರುತ್ತದೆ. ದಾಖಲಾತಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿದರೆ, ಪಿಯು ಬೋರ್ಡ್‌ನಲ್ಲಿನ ವಿದ್ಯಾರ್ಥಿಯ ವಿವರಗಳು ಮುದ್ರಿತವಾಗುತ್ತವೆ. ನಂತರ ಎಲ್ಲಿಂದ-ಎಲ್ಲಿಗೆ ಮತ್ತು ಮಾರ್ಗದ ಬಸ್‌ ನಿಲ್ದಾಣವನ್ನು ನಮೂದಿಸಿ, 1ಎಂಬಿ ಗಿಂತ ಹೆಚ್ಚಿಲ್ಲದ ಭಾವಚಿತ್ರ ಅಪ್‌ಲೋಡ್‌ ಮಾಡಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದರೆ ಸ್ವೀಕೃತಿ ಪತ್ರದ ಪ್ರಿಂಟ್‌ ಸಿಗುತ್ತದೆ.

 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಇಲ್ಲ

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಇಲ್ಲ

ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ನಿಗದಿ ಮಾಡಿಲ್ಲಮ ಹಾಗಾಗಿ ಎಷ್ಟು ದಿನ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂಬುದನ್ನು ಶೀಘ್ರದಲ್ಲಿ ತಿಳಿಸಲಾಗುತ್ತದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ತಿಳಿಸಿದ್ದಾರೆ.

English summary
BMTC has extended last date for submission of application for students bus pass. This time there were only 1.8 lakhs applications have been received against 4.5 lakhs last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X