ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಲ್ವೊ ಬಸ್ ಸಂಚಾರ ಇನ್ನು ಸುಗಮ: ಶೇ.37ರಷ್ಟು ದರ ಇಳಿಕೆ

By Nayana
|
Google Oneindia Kannada News

ಬೆಂಗಳೂರು, ಡಿಸೆಂಬರ್ 30 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ವರ್ಷದ ಅಂಗವಾಗಿ ತನ್ನ ಪ್ರಯಾಣಿಕರಿಗೆ ಕೊಡುಗೆಯಾಗಿ ವೋಲ್ವೊ ಬಸ್ ಪ್ರಯಾಣ ದರವನ್ನು ಕಡಿತಗೊಳಿಸಲು ನಿರ್ಧರಿಸಿದೆ.

ದೇಶದಲ್ಲೇ ಲಾಭದಾಯಕ ಸಾರ್ವಜನಿಕ ಸಾರಿಗೆ ಸಂಸ್ಥೆ ಎನಿಸಿರುವ ಬಿಎಂಟಿಸಿ ಈಗಾಗಲೇ ಹಲವು ಸೇವೆಗಳ ಮೂಲಕ ಮುಂಚೂಣಿಯಲ್ಲಿದೆ. ಆದರೆ ಓಲ್ವೊ ಬಸ್ ಗಳ ಪ್ರಯಾಣಕ್ಕೆ , ಪ್ರಯಾಣಿಕರು ಹೆಚ್ಚು ಆಸಕ್ತಿ ತೋರದ ಹಿನ್ನೆಲೆಯಲ್ಲಿ ವೋಲ್ವೊ ಬಸ್ ಗಳು ನಷ್ಟದಲ್ಲಿತ್ತು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ವೋಲ್ವೊ ಬಸ್ ಪ್ರಯಾಣ ದರವನ್ನು ಕಡಿತಗೊಳಸಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದರು.

BMTC cuts down 37% fare on Volvo service

ಇದೀಗ ವೋಲ್ವೊ ಬಸ್ ಪ್ರಯಾಣ ದರವನ್ನು ಕಡಿತ ಮಾಡಲು ಬಿಎಂಟಿಸಿ ನಿರ್ಧರಿಸಿದೆ. ಇಳಿಕೆಯಾಗಿರುವ ಪ್ರಯಾಣ ದರವನ್ನು ಶೀಘ್ರವೇ ಬಿಎಂಟಿಸಿ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಎಂಟಿಸಿ ಈಗಾಗಲೇ ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ವೋಲ್ವೊ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದೆ.

ಹೆಚ್ಚು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ವೋಲ್ವೊ ಬಸ್ ಗಳ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಲು ಬಿಎಂಇಟಿಸಿ ನಿರ್ಧರಿಸಿದೆ.

ಜನವರಿ ಒಂದು ತಿಂಗಳು ಪ್ರಾಯೋಗಿಕವಾಗಿ ದರವನ್ನು ಕಡಿಮೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ. ಬಿಎಂಟಿಸಿ ಶೇ.37 ರಷ್ಟು ವೋಲ್ವೊ ಬಸ್ ಗಳ ಪ್ರಯಾಣದರವನ್ನು ಇಳಿಸಿರುವ ಹಿನ್ನೆಲೆಯಲ್ಲಿ ಇನ್ನುಮುಧಾದರೂ ಬೆಂಗಳೂರಿಗರು ನಗರ ಸಂಚಾರಕ್ಕೆ ವೋಲ್ವೊ ಬಸ್ ಗಳನ್ನು ಬಳಸುತ್ತಾರಾ ಎಂದು ಕಾದು ನೋಡಬೇಕಿದೆ.

English summary
BMTC has decided to cut down Volvo bus fare by 37 percent as the service had poor response in the category. The corporation decission came out after that particular category service should bepromoted in KIAL route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X