ಬಸ್ ಟಿಕೆಟ್ ತಪಾಸಣಾ ಅಧಿಕಾರಿಗಳಿಗೆ ಕ್ಯಾಮರಾ: ಟೆಂಡರ್ ಆಹ್ವಾನ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 12: ನಿರ್ವಾಹಕ ಮತ್ತು ಮಾರ್ಗ ತನಿಖಾಧಿಕಾರಿಗಳ ನಡುವೆ ಅನಗತ್ಯ ವಾಗ್ವಾದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಬಿಎಂಟಿಸಿಯು ತನ್ನ ಅಧಿಕಾರಿಗಳಿಗೆ ಬಾಡ್ ವೋರ್ನ್ ಕ್ಯಾಮೆರಾ ನೀಡಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ 50 ಕ್ಯಾಮರಾ ಖರೀದಿಗೆ ಟೆಂಡರ್ ಅಹ್ವಾನಿಸಿದೆ.

ಮಾರ್ಗ ತಪಾಸಣೆ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಿದೆ. ತನಿಖಾಧಿಕಾರಿಗಳು ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸುತ್ತಾರೆ. ಪ್ರಕರಣದ ಆಪಾದನಾ ಪತ್ರದಲ್ಲಿ ಸತ್ಯಾಂಶ ದಾಖಲಿಸದೆ ಸುಳ್ಳು ಬರೆಯುತ್ತಾರೆ. ಇದರಿಂದಾಗಿ ನೌಕರರ ಭತ್ಯೆ, ವೇತನ ತಡೆ ಹಿಡಿಯಲಾಗುತ್ತಿದೆ ಎಂಬ ಆರೋಪ ನೌಕರ ವಲಯದಿಂದ ಕೇಳಿಬರುತ್ತಿದೆ.

ಬಿಎಂಟಿಸಿ ಬಸ್ ಟಿಕೆಟ್ ತಪಾಸಣಾ ಅಧಿಕಾರಿಗೂ ಕ್ಯಾಮೆರಾ!

ಸತ್ಯಾಂಶ ಚಿತ್ರೀಕರಣವಾಗಲಿ ಎಂಬ ದೃಷ್ಟಿಯಿಂದ ಕ್ಯಾಮರಾ ನೀಡಲು ನಿಗಮ ನಿರ್ಧರಿಸಿದೆ. ನಿಗಮದಲ್ಲಿ 90ಕ್ಕೂ ಅಧಿಕ ಮಾರ್ಗ ತಪಾಸಣಾ ಅಧಿಕಾರಿಗಳಿದ್ದು , 3ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಅಧಿಕಾರಿಯೂ ಬಾಡಿ ವೋರ್ನ್ ಕ್ಯಾಮರಾ ಧರಿಸಿಕೊಂಡೇ ತಪಾಸಣೆ ನಡೆಸಲಿದ್ದಾರೆ.

BMTC calls tender for Body worn camera

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಚಿತ್ರೀಕರಣ ಲೈವ್: ಟೆಂಡರ್ ಆಹ್ವಾನದ ವೇಳೆ ಕ್ಯಾಮರಾ ಸಾಮರ್ಥ್ಯದ ಬಗ್ಗೆ ಹಲವು ಷರತ್ತುಗಳನ್ನು ನಿಗಮ ವಿಧಿಸಿದೆ. ಹೈ ರೆಸಲ್ಯೂಷನ್ ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಕ್ಯಾಮರಾ ಹೊಂದಿರಬೇಕು. ತಪಾಸಣೆ ಲೈವ್ ಕಚೇರಿಯಲ್ಲಿ ಲಭ್ಯವಾಗುವಂತೆ ವೈಫೈ ವ್ಯವಸ್ಥೆ ಇರಬೇಕು ಎಂದು ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To curb leakage of income in the corporation, BMTC has called tender for 50 body worn cameras which will be installed in buses.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ