ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?

By Nayana
|
Google Oneindia Kannada News

ಬೆಂಗಳೂರು, ಜೂನ್‌ 29: ಇನ್ನುಮುಂದೆ ಎಲ್ಲಾ ಬಿಎಂಟಿಸಿ ಬಸ್‌ಗಳು ಮುಂದಿನ ದಿನಗಳಲ್ಲಿ ನೀಲಿ ಮತ್ತು ಬಿಳಿಬಣ್ಣಗಳೊಂದಿಗೆ ಗೋಚರಿಸಲಿದೆ.

ಆದರೆ ಹವಾ ನಿಯಂತ್ರಿತ ಮತ್ತು ಮಿಡಿ ಬಸ್‌ಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಬಸ್‌ಗಳಿಗೆ ನೀಲಿ ಹಾಗೂ ಬಿಳಿ ಬಣ್ಣ ಬಳಿಯಲಾಗುತ್ತದೆ. ಈ ಕುರಿತು ಸಕಾಷ್ಟು ಸಮೀಕ್ಷೆಗಳು ನಡೆದಿವೆ. ನಂತರ ಬಿಎಂಟಿಸಿಯ 850 ಹವಾ ನಿಯಂತ್ರಿತ ಬಸ್‌ಗಳು ಸಂಪೂರ್ಣ ನೀಲಿ ಬಣ್ಣದಲ್ಲಿ ಹಾಗೂ ಮಿಡಿ ಬಸ್‌ಗಳು ಕೇಸರಿ ಬಣ್ಣದಲ್ಲಿ ಗೋಚರಿಸಲಿದೆ.

ಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆ ಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆ

1997ರಲ್ಲಿ ಬಿಎಂಟಿಸಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರತ್ಯೇಕಿಸಿದಾಗ ಎಲ್ಲಾ ಬಸ್ಸುಗಳು ನೀಲಿ ಮತ್ತು ಬಿಳಿ ಬಣ್ಣಗಳಿದ್ದವು. ಅದು ಕಾಲಾಂತರದಲ್ಲಿ ಬದಲಾಯಿತು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳುತ್ತಾರೆ.

BMTC buses will get new outline with blue and saffron

ಬೆಳಗಿನ ಜಾವ ಮತ್ತು ರಾತ್ರಿ ಹೊತ್ತು ಬಸ್ಸು ಬರುವುದು ನೀಲಿ ಮತ್ತು ಬಿಳಿ ಬಣ್ಣವಾಗಿದ್ದರೆ ಚೆನ್ನಾಗಿ ಕಾಣಿಸುತ್ತದೆ, ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ ಎಂದು ಅನೇಕ ಚಾಲಕರು ಮತ್ತು ನಿರ್ವಾಹಕರು ಹೇಳಿದರು ಎನ್ನುತ್ತಾರೆ ಬಸವರಾಜು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 5,299 ನಿಗದಿತ ಬಸ್ಸುಗಳ ಬಣ್ಣಗಳನ್ನು ಬದಲಾಯಿಸಲು ಕಳೆದ 23ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಈ ವಿಷಯವನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ ಬಸವರಾಜು ದೃಢಪಡಿಸಿದ್ದಾರೆ.

ಬಿಎಂಟಿಸಿ ಬಸ್ಸಿನ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಲ್ಲಿ ಬಸ್ಸುಗಳ ಬಣ್ಣ ಕುರಿತು ಸಾಕಷ್ಟು ಸಮೀಕ್ಷೆ ನಡೆಸಿದೆ. ಹಿಂದೆ ನಮ್ಮಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಸ್ಸುಗಳಿದ್ದವು. ಸಮೀಕ್ಷೆಯಲ್ಲಿ ಬಹುತೇಕರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರು ಎಂದರು.

English summary
BMTC has decided to change the color of its buses. AC buses will get blue while mini buses will come up with saffron color.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X