ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ದಿನ ಬಿಎಂಟಿಸಿ ಬಸ್‌ ಸೇವೆಯಲ್ಲಿ ವ್ಯತ್ಯಯ

By Nayana
|
Google Oneindia Kannada News

Recommended Video

Karnataka Elections 2018 : ಬಿಎಂಟಿಸಿ ಬಸ್‌ ಸೇವೆಯಲ್ಲಿ 2 ದಿನ ವ್ಯತ್ಯಯ | Oneindia Kannada

ಬೆಂಗಳೂರು, ಮೇ 11: ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಬಿಎಂಟಿಸಿಯಿಂದ 1,493 ಬಸ್‌ಗಳನ್ನು ಬಾಡಿಗೆ ಪಡೆದಿರುವ ಕಾರಣ ಮೇ 11 ಮತ್ತು 12ರಂದು ನಗರದಲ್ಲಿ ಸಾರ್ವಜನಿಕ ಸಂಚಾರ ಸೇವೆ ವ್ಯತ್ಯಯವಾಗಲಿದೆ.

ಕಡಿಮೆ ಆದಾಯವಿರುವ ಮತ್ತು ಪ್ರಯಾಣಿಕರ ದಟ್ಟಣೆ ಇಲ್ಲದಿರುವ ಮಾರ್ಗದ ಟ್ರಿಪ್‌ಗಳನ್ನು ಎರಡು ದಿನ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕೆಲ ಮಾರ್ಗಗಳಲ್ಲಿ ಬಸ್‌ಗಾಗಿ ಕಾಯುವ ಸ್ಥಿತಿ ಬರಲಿದೆ.

 ಹೂಡಿ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸಂಪರ್ಕ ಕೊರತೆ ಹೂಡಿ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸಂಪರ್ಕ ಕೊರತೆ

ಪ್ರಸ್ತುತ ನಮ್ಮ ಮೆಟ್ರೋ ಮೊದಲನೇ ಹಂತದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನೂರಕ್ಕೂ ಅಧಿಕ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಶಸ್ತ್ರ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. ಈ ಸಿಬ್ಬಂದಿಯನ್ನೂ ಚುನಾವಣಾ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

BMTC bus service may hit for two days

ಹೀಗಾಗಿ ಮೇ 12ರಂದು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆಯೂ ಕಡಿಮೆ ಇರಲಿದೆ. ಖಾಸಗಿ ಭದ್ರತಾ ಸಿಬ್ಬಂದಿಯಷ್ಟೇ ಕಾರ್ಯನಿರ್ವಹಿಸುವುದರಿಂದ ನಿಲ್ದಾಣಗಳಲ್ಲಿ ಒಂದೆರೆಡು ಪ್ರವೇಶದ್ವಾರ ಮಾತ್ರ ತೆರೆದಿರುತ್ತದೆ. ಸೀಮಿತ ದ್ವಾರಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 12ರಂದು ಶನಿವಾರ ನಡೆಯಲಿದ್ದು, ಮೇ 15ರಂದು ಮಂಗಳವಾರ ಫಲಿತಾಂಶ ಹೊರಬೀಳಲಿದೆ.

English summary
Around 1,500 buses from BMTC have been deployed to election duty for two days. Following this the bus service will be reduced in Bengaluru at various routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X