ಬೆಂಗಳೂರಿನ ಬಿಎಂಟಿಸಿ ಬಸ್ ಗಳಲ್ಲಿ ಏಕೆ ಹೀಗೆ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 19: ಬಸ್ ನಲ್ಲಿ ನಾವು ಹತ್ತಬೇಕಾದರೆ ಇಳಿಯಬೇಕಾದರೆ ಎಚ್ಚರಿಕೆ ವಹಿಸಬೇಕು ಎಂದು ಹೇಳುತ್ತಾರೆ. ಹತ್ತುವ ಇಳಿಯುವ ಜಾಗದಲ್ಲಿ ಒಂದು ಮೊಳೆಯನ್ನೋ, ವೆಲ್ಡಿಂಗ್ ಮಾಡಿದ ಕಬ್ಬಿಣವನ್ನೋ ಹಾಗೆ ಬಿಟ್ಟು ಎಚ್ಚರಿಕೆ ವಹಿಸಿ ಎಂದರೆ ಹೇಗೆ ಸಾಧ್ಯ. ಫೂಟ್ ಬೋರ್ಡ್ ನಲ್ಲಿ ಕಬ್ಬಿಣದ ಮೊಳೆಯೊಂದನ್ನು ಬಿಟ್ಟು ಹಾಗೆ ಒಡಾಡಲು ಬಿಟ್ಟಿರುವ ಒಂದು ಉದಾಹರಣೆ ಇಲ್ಲಿದೆ.

ಶನಿವಾರ ಬೆಳಗ್ಗೆ ಬಸ್ ಹತ್ತಿದಾಗ ಸ್ನೇಹಿತರು ನನ್ನೊಂದಿಗೆ ಹತ್ತಿದರು ಆದರೆ ಅವರ ಕೈಯಿಂದ ರಕ್ತ ಬರುತ್ತಿತ್ತು. ಪ್ರಥಮ ಚಿಕಿತ್ಸೆ ಮಾಡೋಣವೆಂದರೆ ಆ ಬಸ್ಸಿನಲ್ಲಿ ಪರಿಕರಗಳೇ ಇಲ್ಲ. ಇನ್ನು ನಿರ್ವಾಹಕ ಕೇಳಿದರೆ ಕಂಪ್ಲೇoಟ್ ಮಾಡಿ ಹೋಗಿ ಅಂದು ಬಿಡಬೇಕೆ?

hill

ಬಿಎಂಟಿಸಿ ಬಸ್ಸಿನ ಫೂಟ್ ಬೋರ್ಡ್ ನ ಹತ್ತಿರ ಇರುವ ಕಂಬಿಯಲ್ಲಿ ಕಬ್ಬಿಣದ ಚೂಪಾದ ಚೂರೊಂದು ಹೊರ ಬಂದಿತ್ತು. ಸಾಮಾನ್ಯವಾಗಿ ಎಲ್ಲರು ಹತ್ತುವ ರೀತಿಯಲ್ಲೇ ಅವರು ಹತ್ತಿದರು ಚೂಪಾದ ಕಬ್ಬಿಣದ ಮೊಳೆ ತಗುಲಿ ಕೈಯಿಂದ ರಕ್ತ ಬಂದಿತು. ಕಂಡೆಕ್ಟರ್ ಯಿಂದ ಸ್ಪಂದನೆಯಿರಲಿ ಗಮನವೂ ಇಲ್ಲ. ಏನು ಮಾಡುವುದು ಅವರು ಹಾಗೆಯೇ ಕೈಗೆ ಕರವಸ್ತ್ರವನ್ನು ಇಟ್ಟುಕೊಂಡು ತಮ್ಮ ಆಫೀಸಿಗೆ ಹೋದರು.

hand

ಬಸ್ ಡಿಪೋ 14, R.T.NAGAR. ಬಸ್ ಸಂಖ್ಯೆ KA01 F3486 ಬಿಎಂಟಿಸಿ ಬಸ್, ಪ್ರಾಥಮಿಕ ಚಿಕಿತ್ಸೆ ಕಿಟ್ ಇಲ್ಲದೆ ವೆಲ್ಡಿಂಗ್ ಮಾಡದ ಕಬ್ಬಿಣದ ಮೊಳೆಗಳನ್ನು ಬಿಟ್ಟಿರುವ ಈ ಬಸ್ಸಿನಲ್ಲಿ ಚಲಿಸುವುದಾದರೂ ಹೇಗೆ ಹೇಳಿ?

ಮಕ್ಕಳು, ಹೆಂಗಸರು ಚಲಿಸುವ ವಾಹನದಲ್ಲಿ ಕೈಗೆ ತಗುಲಿದ ಮೊಳೆ ಸೂಕ್ಷ್ಮಭಾಗಕ್ಕೆ ತಗುಲಿದರೆ ಗತಿಯೇನು? ಬಸ್ಸನ್ನು ಹತ್ತುವ ಧಾವಂತದ ಜನರಿಗೆ ಕಣ್ಣು, ತಲೆ ಬೇರೆ ಅಂಗಗಳು ಊನವಾದರೆ ಪರಿಣಾಮ ಯಾರು ಎದುರಿಸಬೇಕು ನೀವೇ ಹೇಳಿ?

first aid

ಅಂದ ಚೆಂದದ ಧರಿಸನ್ನು ತೊಟ್ಟು ಬರುವ ಮಂದಿಯ ಬಟ್ಟೆ ಹರಿದರೆ ಕೆಲಸಕ್ಕೆ ಹೋಗುವುದು ಹೇಗೆ? ಹೀಗೆ ಅನೇಕ ಪ್ರಶ್ನೆಗಳು ಕಾಡದೇ ಬಿಡದು.

ಇದು ಇದೊಂದೆ ಬಸ್ಸಿನ ಪರಿಸ್ಥಿತಿಯಲ್ಲ ನಗರದ ಶೇ 40 ರಷ್ಟು ಬಸ್ ಗಳಲ್ಲಿ ಬಾಗಿಲಿನಿಂದ ಹಿಡಿದು ಕೂರುವ ಚೇರ್ ವರೆಗೆ ಎಲ್ಲವೂ ಸರಿಯಿಲ್ಲ ಅದನ್ನು ಸರಿ ಮಾಡುವ ಹೊಣೆ ಯಾರದು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMTC buses should be default transportation for every commuter in Bengaluru. But, what is happening? Forget about change problem, fights with conductors, pick pockets, women tormentors. If anyone gets injured, they have no first aid kit. A commuter explains first hand experience.
Please Wait while comments are loading...