• search
For bengaluru Updates
Allow Notification  

  ಮದ್ಯದ ನಶೆಯಲ್ಲಿ ಬಸ್ಸು ಓಡಿಸಿದ ಬಿಎಂಟಿಸಿ ಚಾಲಕ, ಪ್ರಯಾಣಿಕರು ಕಂಗಾಲು

  By Manjunatha
  |

  ಬೆಂಗಳೂರು, ಮಾರ್ಚ್‌ 21: ಮಧ್ಯ ಸೇವಿಸಿ ಬಿಎಂಟಿಸಿ ವಾಹನ ಚಲಾಯಿಸುತ್ತಿದ್ದ ಚಾಲಕನಿಗೆ ಪ್ರಯಾಣಿಕರಿಗೆ ತಪರಾಕಿ ಹಾಕಿ ಪೆಟ್ಟೂ ಕೊಟ್ಟಿರುವ ಘಟನೆ ನಗರದಲ್ಲಿ ಇಂದು ನಡೆದಿದೆ.

  ಸಾರಕ್ಕಿ ಸಿಗ್ನಲ್‌ ಬಳಿ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಕೆಎ57 ಎಫ್​​​1169 ನಂಬರಿನ ಬಸ್​​ ಶಾಂತಿನಗರ ಡಿಪೋಗೆ ಸೇರಿದ ಬಸ್‌ ಚಲಾಯಿಸುತ್ತಿದ್ದ ಡ್ರೈವರ್ ಕಂಠಪುರ್ತಿ ಕುಡಿದಿದ್ದ. ಸಾರಕ್ಕಿ ಸಿಗ್ನಲ್‌ನ ಮೆಟ್ರೋ ನಿಲ್ದಾಣದ ಬಳಿ ಕುಡಿದ ಮತ್ತಿನಲ್ಲಿ ಇನ್ನೋವಾ ಕಾರಿಗೆ ಇನ್ನೇನು ಗುದ್ದಲಿದ್ದ ಅಷ್ಟರಲ್ಲಿ ಪ್ರಯಾಣಿಕರು ಹೋ... ಎಂದು ಚೀರಿದ್ದರಿಂದ ಎಚ್ಚತ್ತು ಬ್ರೇಕ್ ಹಾಕಿ ನಿಲ್ಲಿಸಿದ.

  ಆಂಬ್ಯುಲೆನ್ಸ್, ಶಾಲಾ ವಾಹನಗಳಲ್ಲಿ ಹೆಚ್ಚಾದ ಕುಡುಕ ಚಾಲಕರ ಸಂಖ್ಯೆ!

  ಬಸ್ ತುಂಬಾ ಇದ್ದ ಪ್ರಯಾಣಿಕರು ಚಾಲಕನ ಅಜಾರೂಕತೆಗೆ ಚೆನ್ನಾಗಿ ಬೈಯಲ್ಲು ಪ್ರಾರಂಭಿಸಿದರು ಆದರೆ ಆತ ಮಾತ್ರ ಏನೂ ಆಗಿಲ್ಲವೆಂಬಂತೆ ಅರಾಮವಾಗಿ ಸ್ಟೇರಿಂಗ್‌ ಮೇಲೆ ತಲೆ ಇಟ್ಟು ಮಲಗಿದ.

  ಚಾಲಕನ ವರ್ತನೆಯಿಂದ ಕೋಪಗೊಂಡ ಪ್ರಯಾಣಕರಲ್ಲಿ ಕೆಲವರು ಆತನನ್ನು ಎಬ್ಬಿಸಿ ತಲೆಗೆ ನಿರು ಹಾಕಿ ಕೊನೆಗೆ ಆತನನ್ನು ಎಬ್ಬಿಸಲು ಕಪಾಳಕ್ಕೆ ಸಹ ಹೊಡೆದರು. ಮದ್ಯದ ನಶೆಯಲ್ಲಿದ್ದ ಆ ಚಾಲಕ ಯಾವುದಕ್ಕೂ ಪ್ರತಿಕ್ರಿಯಿಸದೇ ನಶೆಯನ್ನು ಆಸ್ವಾದಿಸುವುದರಲ್ಲೇ ಕಳೆದುಹೋಗಿದ್ದ. ಅಲ್ಲೆ ಸಮಿಹದಲ್ಲೇ ಇದ್ದ ಟ್ರಾಫಿಕ್​​ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದರು.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ಅಧ್ಯಕ್ಷ ನಾಗರಾಜ್​ ಯಾದವ್​​, ಇದೊಂದು ಕ್ಷಮಿಸಲಾರದ ತಪ್ಪಾಗಿದ್ದು, ಆರೋಪಿ ಚಾಲಕನನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಸಾಮಾನ್ಯವಾಗಿ ಚಾಲಕ ಮತ್ತು ನಿರ್ವಾಹಕನನ್ನು ಪರೀಕ್ಷಿಸಿಯೇ ಬಸ್​ ನೀಡಲಾಗುತ್ತೆ. ಮಾರ್ಗ ಮಧ್ಯೆ ಎಲ್ಲೋ ಮದ್ಯಪಾನ ಮಾಡಿರಬೇಕು. ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಬೆಂಗಳೂರು ಸುದ್ದಿಗಳುView All

  English summary
  a BMTC bus driver drive bus when he in influence of alcohol. He was driving near Sarakki signal where he just miss a accident. Passengers pulls him out of the bus and hand overs to police.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more