ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಎಲ್ಎಕ್ಸ್‌ನಲ್ಲಿ ಬಿಎಂಟಿಸಿ ಬಸ್ ಮಾರಾಟಕ್ಕಿಟ್ಟ ಕಿಡಿಗೇಡಿ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 27: ಸಿನಿಮಾಗಳಲ್ಲಿ ರಾಜಕಾರಣಿಗಳು ತಾಜ್ ಮಹಲ್ ಮಾರ್ತೀನಿ, ಸರ್ಕಾರಿ ಬಸ್ ಮಾರ್ತೀವಿ ಅಂತ ಹೇಳೋದನ್ನು ಕೇಳಿದೀವಿ. ಆದರೆ, ಇಲ್ಲಿ ಕಿಡಿಗೇಡಿಯೋರ್ವ ಅಂತಹ ಕಲ್ಪನೆಯನ್ನು ನಿಜ ಮಾಡಲು ಹೊರಟಿದ್ದಾನೆ.

ಜನಪ್ರಿಯ ಆನ್ ಲೈನ್ ಖರೀದಿ ಹಾಗೂ ಮಾರಾಟ ವೆಬ್ ಸೈಟ್ ಆಗಿರುವ ಓಎಲ್ಎಕ್ಸ್‌ನಲ್ಲಿ ಕಿಡಿಗೇಡಿಯೋರ್ವ ಬಿಎಂಟಿಸಿ ಬಸ್ ಅನ್ನೇ ಮಾರಾಟಕ್ಕಿಟ್ಟಿದ್ದಾನೆ. ಮೆಜೆಸ್ಟಿಕ್‌ನಿಂದ ಪಂತರಪಾಳ್ಯ ಮಾರ್ಗವಾಗಿ ಸಂಚರಿಸುವ KA01 F 3701 ಸಂಖ್ಯೆಯ ಬಸ್ ಮಾರಾಟಕ್ಕಿದೆ ಎಂದು ಆ ಬಸ್‌ನ ಭಾವಚಿತ್ರ ಸಮೇತ ಓಎಲ್ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದಾನೆ.

bmtc

ವಿಚಿತ್ರ ಎಂದರೆ ಇನ್ನೂ 2015ನೇ ವರ್ಷವೇ ಆರಂಭವಾಗದಿದ್ದರೂ ಈ ಬಸ್ 2015ರ ಮಾಡೆಲ್‌ನದ್ದು ಎಂದು ಬರೆದು ಡಿ. 22ರಂದೇ ಪೋಸ್ಟ್ ಮಾಡಿ ಕಿಚಾಯಿಸಿದ್ದಾನೆ. ಕಿಡಿಗೇಡಿಯ ಕೃತ್ಯ ಇಷ್ಟಕ್ಕೇ ನಿಂತಿಲ್ಲ. ಈ ಬಸ್ ಪ್ರತಿ ಗಂಟೆಗೆ 780 ಕಿ.ಮೀ. ವೇಗದಲ್ಲಿ ಸಂಚರಿಸುತ್ತದಂತೆ. ಆದರೆ, ಕೇವಲ 5 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗುತ್ತೆ ಎಂದು ಜಾಹೀರಾತು ಹಾಕಿದ್ದಾನೆ. ಆತ ತನ್ನನ್ನು ಮೊನೀಶ್ ಎಂದು ಹೇಳಿಕೊಂಡಿದ್ದು, ಬಸ್ ಖರೀದಿಸಲು ಇಚ್ಛಿಸುವವರು 9964484066 ಸಂಖ್ಯೆಗೆ ಕರೆ ಮಾಡಬೇಕೆಂದು ತಿಳಿಸಿದ್ದಾನೆ.

ಎಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ವೆಬ್ ಸೈಟ್ ನಿರ್ವಾಹಕರು ಹಾಗೂ ಬಿಎಂಟಿಸಿ ಕೂಡ ಈ ಜಾಹೀರಾತನ್ನು ಗಮನಿಸಿಲ್ಲ. ವೆಬ್ ಸೈಟ್ ಗೆ ಭೇಟಿ ನೀಡುವ ಗ್ರಾಹಕರಿಗೆ ಈ ಜಾಹೀರಾತು ಇನ್ನೂ ರಂಜನೆ ನೀಡುತ್ತಲೇ ಇದೆ.

English summary
BMTC bus is for sale! A mischief-maker had put this advertisement in olx website. This is posted on December 22 only. But still ignored by BMTC and website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X