ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಇಲಾಖೆಗಳು ಪ್ರಸ್ತಾವನೆ ಸಲ್ಲಿಸಿದರಷ್ಟೇ ನೌಕರರಿಗೆ ರಿಯಾಯಿತಿ ಪಾಸ್‌

By Nayana
|
Google Oneindia Kannada News

ಬೆಂಗಳೂರು, ಜು.11: ಸರ್ಕಾರಿ ವಿವಿಧ ಇಲಾಖೆಗಳ ನೌಕರರಿಗೆ ರಿಯಾಯಿತಿ ದರ ಪಾಸ್‌ ಬೇಕಾದಲ್ಲಿ ಆಯಾ ಇಲಾಖೆಗಳು ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಬೇಕು ಎಂದು ಬಿಎಂಟಿಸಿ ತಿಳಿಸಿದೆ.

ಸರ್ಕಾರಿ ಇಲಾಖೆಗಳು ತಮ್ಮ ನೌಕರರಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ಒದಗಿಸಲು ಕೋರಿ ಪ್ರಸ್ತಾವನೆ ಸಲ್ಲಿಸಿದರಷ್ಟೇ ಪಾಸ್‌ಗಳನ್ನು ವಿತರಿಸಲು ಬಿಎಂಟಿಸಿ ತೀರ್ಮಾನಿಸಿದೆ. ರಿಯಾಯಿತಿ ದರದಲ್ಲಿ ಪಡೆಯುವ ಪಾಸ್‌ಗಳಿಗೆ ಕಡ್ಡಾಯವಾಗಿ ಸಹಾಯಧನವನ್ನು ಪಾವತಿಸುವಂತೆ ಸೂಚಿಸಲಾಗಿದೆ.

ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?

ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 116 ನೌಕರರಿಗೆ 7ರಿಂದ 8 ಬಗೆಯ ರಿಯಾಯಿತಿ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಇವುಗಳ ನಿರ್ವಹಣೆ ಕಷ್ಟವಾಗಿದೆ.ಹಾಗಾಗಿ ಪಾಸ್‌ಗಳ ವಿತರಣೆಯನ್ನು ಸರಳೀಕರಿಸುವ ಉದ್ದೇಶದಿಂದ ಅನೇಕ ಬಗೆಯ ಪಾಸ್‌ಗಳನ್ನು ಕಡಿಮೆಗೊಳಿಸಲಾಗಿದೆ.

BMTC asks pay subsidy for govt employees bus pass

ಸಂಸ್ಥೆಯು ಸರ್ಕಾರಿ ನೌಕರರಿಗೆ ಕಲ್ಪಿಸಿರುವ ರಿಯಾಯಿತಿ ಪಾಸ್‌ ಸೌಲಭ್ಯವನ್ನು ಹಿಂಪಡೆದಿಲ್ಲ. ಆದರೆ ಕೋರಿಕೆ ಸಲ್ಲಿಸುವ ಇಲಾಖೆಗಳ ನೌಕರರಿಗೆ ಮಾತ್ರ ಪಾಸ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅನೇಕ ಇಲಾಖೆಗಳ 116 ಮಂದಿ ನೌಕರರು ರಿಯಾಯಿತಿ ದರದ ಪಾಸ್‌ಗಳನ್ನು ಪಡೆದುಕೊಂಡಿದ್ದಾರೆ, ಕೆಲವು ಇಲಾಖೆಯ ರಿಯಾಯಿತಿ ಪಾಸ್‌ಗಳ ಸಹಾಯಧನವನ್ನು ಪಾವತಿ ಮಾಡುತ್ತಿಲ್ಲ. ಆದ ಕಾರಣ, ರಿಯಾಯಿತಿ ಪಾಸ್‌ಗಳಿಗೆ ಕೋರಿಕೆ ಸಲ್ಲಿಸಿದರಷ್ಟೇ ವಿತರಣೆ ಮಾಡುವುದಾಗಿ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.

English summary
To come from debt and losses incurred, BMTC is taking many initiatives to recover from it. Now BMTC had asked other departments in the government to pay subsidy amount for their concerned employees bus pass compulsory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X