ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1965 ಬ್ಯಾಚ್ ಬಿಎಂಎಸ್ ಹಳೇ ವಿದ್ಯಾರ್ಥಿಗಳ ಸುವರ್ಣ ಮಿಲನ

By Shami
|
Google Oneindia Kannada News

ಬೆಂಗಳೂರು, ಏ 15 : ಭಾರತದ ಅತ್ಯಂತ ಹಳೇ ಕಾಲೇಜುಗಳಲ್ಲಿ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಒಂದು. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ, ಮಾಡುತ್ತಿರುವ ಈ ಕಾಲೇಜು ಭಾರತದ, ಕರ್ನಾಟಕದ, ಬೆಂಗಳೂರು ದಕ್ಷಿಣದ, ಬಸವನಗುಡಿಯ ಹೆಮ್ಮೆ.

BMSCE ಶೈಕ್ಷಣಿಕ ಸಂಸ್ಥೆಗಳನ್ನು 1946 ಸ್ಥಾಪಿಸಿದವರು ಕೊಡುಗೈ ದಾನಿ ಬಿ ಎಂ ಶ್ರೀನಿವಾಸಯ್ಯನವರು. ಭಾರತದಲ್ಲಿ ಖಾಸಗಿ ವಲಯದಲ್ಲಿ ಸ್ಥಾಪನೆಯಾದ ಮೊದಲ ಕೆಲವು ಕಾಲೇಜುಗಳಲ್ಲಿ ಇದೂ ಒಂದು.

ಈ ಕಾಲೇಜಿನಲ್ಲಿ ಕಲಿತು ಬದುಕನ್ನು ರೂಪಿಸಿಕೊಂಡರ ಸಂಖ್ಯೆ ಅಪಾರ. ಜಗತ್ತಿನಾದ್ಯಂತ ಹರಡಿರುವ ಇಲ್ಲಿ ಕಲಿತ ವಿದ್ಯಾರ್ಥಿಗಳೇನಕರು ತಾವು ಓದಿದ ಕಾಲೇಜನ್ನು ಮರೆತಿಲ್ಲ. ಹಳೇ ವಿದ್ಯಾರ್ಥಿಗಳ ಸಂಘದ ಮೂಲಕ ಸಂಸ್ಥೆಯೊಂದಿಗೆ ಸಂಪರ್ಕ ಇಟ್ಟುಕೊಂಡು ಬಾಂಧವ್ಯ ವೃದ್ಧಿ ಮಾಡಿಕೊಳ್ಳುತ್ತ ಬಂದಿದ್ದಾರೆ. [ಅಮೆರಿಕಾದ ಕನ್ನಡಕಿಂಕರ ಕೃಷ್ಣ ಶಾಸ್ತ್ರಿ ಕಣ್ಮರೆ]

BMSCE Class of 1965 Golden Jubilee Reunion Bengaluru

ಇಡೀ ಕಾಲೇಜಿಗೆ ಅನ್ವಯಿಸುವ ಎಲ್ಲ ಹಳೆಯ ವಿದ್ಯಾರ್ಥಿಗಳ ಸಂಘ ಒಂದು ಕಡೆಯಾದರೆ, ಪ್ರತಿಯೊಂದು ಬ್ಯಾಚ್ ಗೆ ಸೇರಿದ ವಿದ್ಯಾರ್ಥಿಗಳು ತಮ್ಮತಮ್ಮ ಶೈಕ್ಷಣಿಕ ವರ್ಷದ ಸಹಪಾಠಿಗಳನ್ನು ಒಂದುಗೂಡಿಸಿ ಸಂಘ ಕಟ್ಟಿಕೊಳ್ಳುವುದುಂಟು.

ಅಂಥ ಒಂದು ಕೂಟ, The Batch of 1965. ಈ ಬ್ಯಾಚಿನ ವಿದ್ಯಾರ್ಥಿ ಸಮೂಹಕ್ಕೆ ಇದು ಸುವರ್ಣ ವರ್ಷ. ಕಾಲೇಜು ದಿನಗಳನ್ನು ನೆನಪನ್ನು ಕಾಲೇಜಿನ ಆವರಣದಲ್ಲೇ ಸವಿಯುವ ಹಳೇ ವಿದ್ಯಾರ್ಥಿ ಮಿಲನಕ್ಕೆ ಬ್ಯಾಚ್ ಈಗ ಸಜ್ಜಾಗುತ್ತಿದೆ.

ಇದೇ ಮೇ 2 ರ ಶನಿವಾರ ಬಿಎಂಎಸ್ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ. ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ - ಮೂರೂ ವಿಭಾಗಗಳಲ್ಲಿ 1965 ರಲ್ಲಿ ಜತೆಯಾಗಿ ವಿದ್ಯಾಭ್ಯಾಸ ಮಾಡಿದ ಎಲ್ಲರನ್ನೂ ಆಹ್ವಾನಿಸಲಾಗಿದೆ.

ಅಂದು ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ, ಕಾಲೇಜಿನ ವಿವಿಧ ಭಾಗಗಳಿಗೆ ಭೇಟಿ, ಪ್ರಾಂಶುಪಾಲರಿಗೆ, ಪ್ರಾಧ್ಯಾಪಕರುಗಳಿಗೆ ಸನ್ಮಾನ. ಪದವಿ ಪಡೆದ ನಂತರದ 50 ವರ್ಷಗಳಲ್ಲಿ ಹಳೇ ವಿದ್ಯಾರ್ಥಿಗಳು ಸವೆಸಿದ ದಾರಿಯ ಮೆಲಕು, ಗ್ರೂಪ್ ಫೋಟೋ, ಸಹಭೋಜನ ಇರತ್ತೆ.

ನೀವು 1965 ಬ್ಯಾಚಿಗೆ ಸೇರಿದವರಾಗಿದ್ದರೆ ವಿದ್ಯಾರ್ಥಿ ಮಿಲನಕ್ಕೆ ನೊಂದಾಯಿಸಿಕೊಳ್ಳಿ ಎಂದು ಸಂಘದ ಮುಂದಾಳುಗಳು ಮನವಿ ಮಾಡಿದ್ದಾರೆ. ಬರೆಯಿರಿ ಅಥವಾ ಕರೆ ಮಾಡಿ ಮಾತನಾಡಿ -
ರಾಮಚಂದ್ರ ಮೂರ್ತಿ ( 9845009514 [email protected]) ಅಥವಾ
ಜಸಿಂತ ( 97410 39944 [email protected])
ಅಲುಮ್ನಿ ಫೇಸ್ ಬುಕ್ ಪುಟ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕಾಲೇಜಿಗೆ ಹೋಗಲು ಗೂಗಲ್ ಮ್ಯಾಪ್

English summary
Student alumni meet : The class of 1965 from BMS College of Engineering has planned golden jubilee re-union to be celebrated on Saturday, 2 May 2015. The venue will be at the BMS College of Engineering, Basavanagudi, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X