ನಮ್ಮ ಮೆಟ್ರೋ ಪ್ರಯಾಣಕ್ಕೆ ಶೀಘ್ರದಲ್ಲಿ ಕಾಂಬೋ ಕಾರ್ಡ್

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಬ್ಯಾಂಕಿಂಗ್ ಹಾಗೂ ಮೆಟ್ರೋ ಪ್ರಯಾಣಕ್ಕೂ ಬಳಸಬಹುದಾದ ಕಾಂಬೋ ಕಾರ್ಡ್ ಯೋಜನೆಗೆ ಶೀಘ್ರ ಮತ್ತೊಂದು ಬ್ಯಾಂಕ್ ಸೇರ್ಪಡಯಾಗಲಿದೆ.

ಡೆಬಿಟ್ ಕಾರ್ಡ್ ಗಳನ್ನು ನಮ್ಮ ಮೆಟ್ರೋ ಪ್ರಯಾಣಕ್ಕೂ ಬಳಸುವ ಯೋಜನೆಗೆ ಬೆಂಗಳೂರು ಮೆಟ್ರೋ ನಿಗಮ ಹೆಚ್ಚು ಒತ್ತು ನೀಡುತ್ತಿದೆ. ಪ್ರಸತುತ ಫೆಡರಲ್ ಮತ್ತು ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಕಾಂಬೋಕಾರ್ಡ್ ನೀಡುತ್ತಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಈ ಯೋಜನೆಯಲ್ಲಿ ಪಾಲುದಾರಿಕೆ ಪಡೆಯಲು ಮುಂದೆಬಂದಿದೆ.

ನಮ್ಮ ಮೆಟ್ರೋ: 11 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ

ಇತ್ತೀಚೆಗಷ್ಟೇ 38 ಮೆಟ್ರೋ ನಿಲ್ದಾಣಗಳಲ್ಲಿ 66 ಎಟಿಎಂ ಸ್ಥಾಪನೆಗೆ ಬಿಎಂಆರ್ ಸಿಎಲ್ ಜತೆ ಎಸ್‌ಬಿಐ ಒಪ್ಪಂದ ಮಾಡಿಕೊಂಡಿತ್ತು. ಇದೇ ಸಂದರ್ಭದಲ್ಲಿ ಎಸ್‌ಬಿಐ-ಮೆಟ್ರೋ ಕಾಂಬೋ ಕಾರ್ಡ್ ಜಾರಿ ಕುರಿತು ನಿಗಮದ ಎಂಡಿ ಮತ್ತು ಎಸ್‌ಬಿಐ ಪ್ರಧಾನ ವ್ಯವಸ್ಥಾಪಕರು ಚರ್ಚೆ ನಡೆಸಿದ್ದಾರೆ.

BMRCL will introduce another combo card for Metro

ಪ್ರಸ್ತುತ ಪ್ರತಿ ಸ್ಮಾರ್ಟ್ ಕಾರ್ಡ್ ತಯಾರಿಗೆ ಬಿಎಂಆರ್ ಸಿಎಲ್ 60.15 ರೂ ವೆಚ್ಚ ಮಾಡುತ್ತಿತ್ತು. ಒಂದು ವೇಳೆ ಕಾಂಬೋ ತಯಾರಾದರೆ ನಿಗಮಕ್ಕೆ ಆರ್ಥಿಕ ಹೊರೆ ಬೀಳುವುದಿಲ್ಲ. ಬದಲಾಗಿ ಬ್ಯಾಂಕ್ ಗಳೇ ತನ್ ಗ್ರಾಹಕರನ್ನು ಆಕರ್ಷಿಸಿ ಕಾರ್ಡ್ ವಿತರಿಸಬೇಕು. ಹೆಚ್ಚಿನ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಮತ್ತು ಕಾಂಬೋ ಕಾರ್ಡ್ ಬಳಸಿದರೆ ಅಷ್ಟೇ ಲಾಭ ನಿಗಮಕ್ಕೆ ಆಗಮಿದೆ.

ಮೆಟ್ರೋ: 6 ಬೋಗಿಗಳ ಅಳವಡಿಕೆಗೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ ಇಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMRCL will introduce new combo card for metro passengers. This card will be work as smart card and debit card too.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ