ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ 80 ಕಿ.ಮೀ ವೇಗದಲ್ಲಿ ಸಂಚಾರ:ರೈಲ್ವೆ ಮಂಡಳಿ ಒಪ್ಪಿಗೆ ನೀಡುತ್ತಾ?

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ನಮ್ಮ ಮೆಟ್ರೋ ರೈಲುಗಳು ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಧ್ಯತೆ ಇದ್ದು, ಪ್ರಯಾಣ ಅವಧಿ ಮತ್ತಷ್ಟು ಕಡಿತಗೊಳ್ಳುವ ನಿರೀಕ್ಷೆ ಇದೆ.

ರೈಲುಗಳನ್ನು ಪ್ರತಿ ಗಂಟೆಗೆ 80ಕಿ.ಮೀ ವೇಗದಲ್ಲಿ ಸಂಚರಿಸುವಂತೆ ಅನುಮತಿ ಕೋರಿ ಬಿಎಂಆರ್ ಸಿಎಲ್ ರೈಲ್ವೆ ಮಂಡಳಿಗೆ ಮನವಿ ಮಾಡಿದೆ. ಗಂಟೆಗೆ 80ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಮಾರ್ಗವನ್ನು ನಿಗಮ ನಿರ್ಮಾಣ ಮಾಡಿದೆ. ಆದರೆ ರೈಲ್ವೆ ಮಂಡಳಿ ಸೂಚಿಸಿರುವಂತೆ ಗಂಟೆಗೆ ಸರಾಸರಿ 34 ಕಿ.ಮೀ ಹಾಗೂ ಗರಿಷ್ಠ 60ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸುತ್ತಿದೆ.

ಹಳಿಗಿಳಿದ 6 ಬೋಗಿಯ ಮೆಟ್ರೋ: ಅಧಿಕೃತ ಸಂಚಾರ ಜೂನ್‌ನಿಂದ ಆರಂಭಹಳಿಗಿಳಿದ 6 ಬೋಗಿಯ ಮೆಟ್ರೋ: ಅಧಿಕೃತ ಸಂಚಾರ ಜೂನ್‌ನಿಂದ ಆರಂಭ

ನಮ್ಮ ಮೆಟ್ರೋ ಓಡಾಟ ಪ್ರಾರಂಭವಾಗಿ 5 ವರ್ಷಗಳೇ ಕಳೆದಿರುವ ಕಾರಣ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಮಾರ್ಗದಲ್ಲಿ ಗರಿಷ್ಠ ವೇಗದ ಅನುಮತಿ ಕೋರಿ ಬಿಎಂಆರ್ ಸಿಎಲ್ ಮನವಿ ಸಲ್ಲಿಸಿದೆ. ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ನಮ್ಮ ಮೆಟ್ರೋದ 6 ಬೋಗಿ ಮೆಟ್ರೋ ರೈಲಿನ ಪರೀಕ್ಷಾರ್ಥ ಓಡಾಟ ಆರಂಭವಾಗಿದೆ.

BMRCL seeks increase metro speed limit up to 80 km per hour

ಏ.19ರ ರಾತ್ರಿ 10.30ರಿಂದ ಬೆಳಗಿನ ಜಾವ 3.10ರವರೆಗೆ ಹೊಸ ರೈಲಿನ ಪರೀಕ್ಷಾರ್ಥ ಚಾಲನೆಯನ್ನು ಆರಂಭಿಸಲಾಗಿದೆ. ಬ್ರೇಕಿಂಗ್ ವ್ಯವಸ್ಥೆ, ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ, ಹೈ ಸ್ಪೀಡ್ ಪರೀಕ್ಷೆ ಸೇರಿ ಕೆಲ ಪರೀಕ್ಷೆಗಳನ್ನು ಆಯುಕ್ತರು ವೀಕ್ಷಿಸಿದ್ದಾರೆ ಎಂದು ನಿಗಮ ತಿಳಿಸಿದೆ. ಇನ್ನೂ ಹಲವು ಪರೀಕ್ಷೆಗಳು ಬಾಕಿ ಇದ್ದು, ಮೇ ಅಂತ್ಯಕ್ಕೆ ಮತ್ತೊಮ್ಮೆ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Namma Metro is successfully competing five years of its service. The BMRCL has now sought permission from Railway Safety Commissionaire to increase metros speed limit up to 80 km per hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X