ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ?

Posted By:
Subscribe to Oneindia Kannada

ಬೆಂಗಳೂರು, ಮೇ 06 : ಪ್ರಯಾಣಿಕರಿಂದ ಬೇಡಿಕೆ ಬಂದರೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ಮೆಟ್ರೋ ಸಂಚಾರದ ಸಮಯವನ್ನು ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಸದ್ಯ, ಈ ಮಾರ್ಗದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10ರ ತನಕ ರೈಲು ಸಂಚಾರ ನಡೆಸುತ್ತಿದೆ.

ಪೂರ್ವ-ಪಶ್ಚಿಮ ಕಾರಿಡಾರ್‌ನ ಬೈಯಪ್ಪನಹಳ್ಳಿ-ನಾಯಂಡಹಳ್ಳಿ (ಮೈಸೂರು ರಸ್ತೆ ) ಮಾರ್ಗ ಏಪ್ರಿಲ್ 30ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಈ ರೈಲು ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. [ಸುರಂಗ ಮಾರ್ಗದ ನಮ್ಮ ಮೆಟ್ರೋ ಸಂಚಾರ ಹೇಗಿರುತ್ತದೆ?]

namma metro

ಬೈಯಪ್ಪನಹಳ್ಳಿ ಬಳಿಯ ವೈಟ್‌ಫೀಲ್ಡ್‌ ನಲ್ಲಿ ಹಲವು ಸಾಫ್ಟ್‌ವೇರ್‌ ಕಂಪೆನಿಗಳಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮೆಟ್ರೋದಲ್ಲಿ ಹೆಚ್ಚಾಗಿ ಸಂಚಾರ ನಡೆಸುತ್ತಿದ್ದಾರೆ. ಈ ಕಂಪೆನಿಗಳಿಂದ ಅಥವಾ ಅಲ್ಲಿನ ಸಿಬ್ಬಂದಿಯಿಂದ ಅಧಿಕೃತವಾಗಿ ಅವಧಿ ವಿಸ್ತರಣೆಗೆ ಮನವಿ ಬಂದರೆ ಪರಿಗಣಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. [ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]

ಪ್ರಸ್ತುತ ಈ ಮಾರ್ಗದಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಹೆಚ್ಚಿನ ಜನರಿಂದ ಬೇಡಿಕೆ ಬಂದರೆ ರಾತ್ರಿ 11 ಗಂಟೆಯವರೆಗೆ ಅವಧಿ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ. ಸಂಚಾರದ ಅವಧಿ ವಿಸ್ತರಣೆಯಾಗಲು ಮೆಟ್ರೋದ ಪ್ರತಿ ಬೋಗಿಯಲ್ಲಿ ಕನಿಷ್ಠ 150 ರಿಂದ 175 ಮಂದಿ ಪ್ರಯಾಣಿಸಬೇಕು ಎಂಬ ಷರತ್ತು ಇದೆ. [ಚಿತ್ರಗಳು : ಸುರಂಗ ಮಾರ್ಗ ಉದ್ಘಾಟನೆ]

ಸಂಚಾರ ವಿಸ್ತರಣೆ ಮಾಡಲಾಗಿದೆ : ಬಿಎಂಆರ್‌ಸಿಎಲ್ ಈಗಾಗಲೇ ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿದೆ. ಪೀಣ್ಯ ಕೈಗಾರಿಕಾ ಪ್ರದೇಶದ ಒಕ್ಕೂಟದಿಂದ ಬಂದ ಮನವಿ ಪರಿಗಣಿಸಿ ಸಂಪಿಗೆ ರಸ್ತೆ-ನಾಗಸಂದ್ರ ನಡುವಿನ ಸಂಚಾರದ ಸಮಯ ವಿಸ್ತರಣೆ ಮಾಡಲಾಗಿದ್ದು, ಪ್ರತಿದಿನ ರಾತ್ರಿ 11ರ ವರೆಗೆ ರೈಲು ಸಂಚರಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bangalore Metropolitan Rail Corporation Limited (BMRCL) is ready to extend the timings of the trains running on the east-west corridor Purple line of Namma Metro between Baiyappanahalli to Mysuru road till 11 pm. Now rail operating morning 6 am to 10 pm.
Please Wait while comments are loading...