ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರು ಬೋಗಿಯ ಮೆಟ್ರೋದಲ್ಲಿ ಖಾಸಗಿ ಜಾಹೀರಾತಿಗೆ ಅವಕಾಶ

By Nayana
|
Google Oneindia Kannada News

ಬೆಂಗಳೂರು, ಜು.30: ನಮ್ಮ ಮೆಟ್ರೋ ಕಳೆದ ವರ್ಷ 538 ಕೋಟಿಗೂ ಅಧಿಕ ನಷ್ಟ ಅನುಭವಿಸಿತ್ತು. ಈ ನಷ್ಟದಿಂದ ಹೊರ ಬರಲು ಆರು ಬೋಗಿಯ ಮೆಟ್ರೋದಲ್ಲಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದೆ.

ಪ್ರತಿ ರೈಲಿನಲ್ಲಿ ಎಲ್‌ಸಿಡಿ ಪರದೆ ಇದೆ ಅದರಲ್ಲಿ ಮೆಟ್ರೋ ನಿಯಮಗಳೇನು, ಎನ್ನುವುದರ ಕುರಿತು ಮಾಹಿತಿ ಬರುತ್ತಿರುವುದು ಸಾಮಾನ್ಯವಾಗಿ ಎಲ್ಲರೂ ನೋಡಿದ್ದೀರ ಇನ್ನುಮುಂದೆ ಟಿವಿಗಳಲ್ಲಿ ಬರುವ ಹಾಗೆ ಜಾಹೀರಾತುಗಳಂತೆಯೇ ಮೆಟ್ರೋದ ಎಲ್‌ಸಿಡಿ ಪರದೆ ಮೇಲೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ.

ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತ

ಪ್ರತಿ ನಿಲ್ದಾಣದಲ್ಲೂ 5 ಸಾವಿರ ಚದರಡಿ ಜಾಗವನ್ನು ಜಾಹೀರಾತಿಗಾಗಿ ನಿಗಮ ಮೀಸಲಿರಿಸಿದೆ. ಮೆಟ್ರೋ ಕಂಬಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಗಮ ಗುತ್ತಿಗೆ ನೀಡಿದೆ. ಮುಂದಿನ ದಿನಗಳಲ್ಲಿ ರೈಲಿನೊಳಗೆ ಜಾಗವಿರುವ ಸ್ಥಳದಲ್ಲಿಜಾಹೀರಾತು ಪ್ರದರ್ಶನ ಬೋರ್ಡ್‌ ಅಳವಡಿಸಲು ಚಿಂತನೆ ನಡೆಸಿದೆ.

BMRCL nod for advertisement inside six coach metro

ನಾಗಸಂದ್ರದಿಂದ ಯಲಚೇನ ಹಳ್ಳಿ ಹಾಗೂ ನಾಯಂಡಹಳ್ಳಿಯಿಂದ ಮೈಯಪ್ಪನಹ್ಳಿ ಮಾರ್ಗದಲ್ಲಿ ಒಟ್ಟು 49 ಮೂರು ಬೋಗಿಯ ಮೆಟ್ರೋಗಳು ಕಾರ್ಯ ನಿರ್ವಹಿಸುತ್ತಿವೆ, ಕಳೆದ ತಿಂಗಳಷ್ಟೇ ಒಂದು 3 ಬೋಗಿ ರೈಲನ್ನು 6 ಬೋಗಿಗಳ ರೈಲಾಗಿ ಪರಿವರ್ತಿಸಲಾಗಿತ್ತು.

3 ಬೋಗಿ ರೈಲುಗಳು ಪ್ರಯಾಣಿಕರಿಂದ ತುಂಬಿರುತ್ತದೆ. ಹೀಗಾಗಿ ಇಂತಹ ರೈಲಿನೊಳಗೆ ಜಾಹೀರಾತು ಹಾಕಿದರೆ ಪ್ರಯಾಣಿಕರಿಗೂ ಅನನುಕೂಲವಾಗಬಹುದು ಮತ್ತು ಜಾಹೀರಾತು ನೋಡಲು ಸಾಧ್ಯವಿಲ್ಲ ಎನ್ನುವುದು ನಿಗಮದ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಹೀಗಾಗಿ ಮೊದಲು 6 ಬೋಗಿಯ ಮೆಟ್ರೋದಲ್ಲಿ ಮಾತ್ರ ಜಾಹೀರಾತು ಅಳವಡಿಸಲು ನಿರ್ಧರಿಸಿದೆ. 6 ಬೋಗಿ ಮೆಟ್ರೋದಲ್ಲಿ ಹೆಚ್ಚಿನ ಸ್ಥಳಾವಕಾಶಗಳಿವೆ. ಪ್ರತ್ಯೇಕ ಜಾಹೀರಾತು ಪ್ಯಾನಲ್‌ ಅಳವಡಿಸಲೂ ಅವಕಾಶವಿದೆ.

English summary
BMRCL has given permission for advertising inside of six coaches metro rail as part of increasing its revenue. The advertisements will be displayed in LED screen in the coach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X