ಮೆಟ್ರೋದಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರ ಸಂಚಾರ ಸಾಧ್ಯ!

Posted By:
Subscribe to Oneindia Kannada

ಬೆಂಗಳೂರು, ಸೆ. 14: ನಮ್ಮ ಮೆಟ್ರೋದ ಎರಡನೇ ಹಂತದ ಕಾಮಗಾರಿ ಕಾರ್ಯಾರಂಭಗೊಂಡಿದೆ. ಒಮ್ಮೆ ಈ ಯೋಜನೆ ಪೂರ್ಣಗೊಂಡರೆ ಪ್ರತಿದಿನ 15 ಲಕ್ಷ ಪ್ರಯಾಣಿಕರ ಸಂಚಾರ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದರು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ದ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆಯ ನಂತರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. [ನಮ್ಮ ಮೆಟ್ರೋ ಮೊದಲನೇ ಹಂತ ಮಾರ್ಚ್ 2017ಕ್ಕೆ ಪೂರ್ಣ]

ಎರಡನೇ ಹಂತದ ಯೋಜನೆಗೆ 26,400 ಕೋಟಿ ರೂ ವೆಚ್ಚವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಲಾ ಶೇಕಡಾ 20 ರಷ್ಟು ವೆಚ್ಚವನ್ನು ಭರಿಸಲಿವೆ. ಉಳಿದ ಶೇಕಡಾ 60 ರಷ್ಟು ಮೊತ್ತವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಸಂಪನ್ಮೂಲ ಕ್ರೋಢೀಕರಿಸಲಿದೆ.

CM Siddaramaiah BMRCL review Meeting Highlights

ಇದರ ಜೊತೆಗೆ, ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೃಷ್ಣರಾಜಪುರಂವರೆಗೆ 18 ಕಿ ಮೀ ನಮ್ಮ ಮೆಟ್ರೋ ಎರಡನೇ ಹಂತದ ಎ ಭಾಗ ಎಂದು ಆಧ್ಯತೆಯ ಮೇರೆಗೆ ರೂಪಿಸಿ, 3500 ಕೋಟಿ ರೂ ಹೆಚ್ಚುವರಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 20 ರೊಳಗಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ. ಅಲ್ಲದೆ, ಯೋಜನಾ ಅನುಷ್ಠಾನಕ್ಕೆ ಅಗತ್ಯವಿರುವ ವೆಚ್ಚವನ್ನು ಮೆಟ್ರೋ ಸ್ವಾಮ್ಯದಲ್ಲಿರುವ ಭೂಮಿ ಹರಾಜು, ವಿನೂತನ ಆರ್ಥಿಕ ತಂತ್ರಗಳು ಹಾಗೂ ಸಾಲ ಪಡೆಯುವ ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲು ಉದ್ದೇಶಿಸಲಾಗಿದೆ.

ನಮ್ಮ ಮೆಟ್ರೋ ಎರಡನೇ ಹಂತವು 2020 ಇಸವಿಯ ವೇಳೆಗೆ ಪೂರ್ಣಗೊಳ್ಳಲಿವೆ. ಆದರೆ, ಎರಡನೇ ಹಂತದ ಎ ಭಾಗದ ಈ ಯೋಜನೆಯನ್ನು ಮೊದಲನೇ ಹಂತದ ಅನುಭವದ ಆಧಾರದ ಮೇರೆಗೆ ಎರಡು ವರ್ಷಗಳ ಮುನ್ನವೇ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಮೆಟ್ರೋ ಎರಡನೇ ಹಂತವು ಅನುಷ್ಠಾನಗೊಂಡಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರು ಸಂಚರಿಸಲು ಅನುಕೂಲವಾಗಲಿದೆ. ಇದರಿಂದ ರಾಜ್ಯದ ರಾಜಧಾನಿಯ ಸಂಚಾರದ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CM Siddaramaiah BMRCL review Meeting Highlights : Second phase of Namma metro will be completed by 2020. With priority given to Silk board to KR Puram route total number of commuter will be increased to 15 lakhs per day.
Please Wait while comments are loading...