ಹಸಿರು ಲೇನ್ ನಂತರ ಸಂಪಿಗೆ ಸ್ಟೇಷನ್ ಟ್ರಾಫಿಕ್ ಶೇ 116ರಷ್ಟು ಏರಿಕೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 11 : ನಮ್ಮ ಮೆಟ್ರೊದ ಬಹು ನಿರೀಕ್ಷಿತ ಹಸಿರು ಲೇನ್ ಜೂನ್ 17ರಂದು ಕಾರ್ಯಾರಂಭ ಮಾಡಿದೆ. ಇದರಿಂದಾಗಿ, ನಗರದ ಪ್ರಮುಖ ತಾಣ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ವಾರಾಂತ್ಯದಲ್ಲಿ ಸಂಚಾರ ದಟ್ಟಣೆ ಏರುಮುಖವಾಗಿದೆ.

ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‍ಸಿಎಲ್) ಮತ್ತು ಮಂತ್ರಿ ಡೆವಲಪರ್ಸ್ ಜಂಟಿ ಸಹಭಾಗಿತ್ವದ ಮಂತ್ರಿ ಸ್ಕ್ವೈರ್ ಸಂಪಿಗೆ ಸ್ಟೇಷನ್ ಮೆಟ್ರೊ ಟ್ರಾಫಿಕ್‍ ನಲ್ಲಿ ಶೇ 116ರಷ್ಟು ಏರಿಕೆ ಕಂಡಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ(ಪಿಪಿಪಿ) ಮಾದರಿಯಾಗಿರುವ ಈ ನಿಲ್ದಾಣ ನೇರವಾಗಿ ನಗರದ ಪ್ರಮುಖ ಶಾಪಿಂಗ್ ಮಾಲ್‍ಗೆ ಸಂಪರ್ಕ ಒದಗಿಸಲಿದೆ.

Namma Metro

ಮಂತ್ರಿ ಸ್ಕ್ವೈರ್ ಸಂಪಿಗೆ ಸ್ಟೇಷನ್ ಮಾಲ್‍ ಗೆ ನೇರ ಸಂಪರ್ಕ ಕಲ್ಪಿಸುವ ಭಾರತದ ಮೊದಲ ಮತ್ತು ಏಕಮಾತ್ರ ನಿಲ್ದಾಣವಾಗಿದೆ. ನಗರದ ಜನಪ್ರಿಯ ಮಾಲ್ ಆಗಿರುವ ಇಲ್ಲಿಗೆ ವಾರಾಂತ್ಯದಲ್ಲಿ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಸ್ಟೇಷನ್‍ನಿಂದ ಮಾಲ್‍ಗೆ ನೇರ ಸಂಪರ್ಕವಿದ್ದು, ಇದು ಗ್ರಾಹಕರು ತಮ್ಮ ವಾಹನಗಳಿಗೆ ನಿಲುಗಡೆ ತಾಣ ಹುಡುಕಾಡುವ ಗೋಜಲನ್ನು ತಪ್ಪಿಸಲಿದೆ.

ಮಂತ್ರಿ ಸ್ಕೈರ್ ಕುರಿತು: ಮೆಟ್ರೊ ಸಂಪರ್ಕ ಹೊಂದಿರುವ ಮೊದಲ ಮಾಲ್. ಅಧಿಕೃತವಾಗಿ ಮಂತ್ರಿ ಸ್ಕೈರ್ ಸಂಪಿಗೆ ರೋಡ್ ಮೆಟ್ರೊ ಸ್ಟೇಷನ್. ಬೆಂಗಳೂರಿನಲ್ಲಿಯೇ ಅತಿದೊಡ್ಡ ಕಾರು ಪಾರ್ಕಿಂಗ್ ಸೇವೆ. 1,500 ಕಾರು, 1000 ದ್ವಿಚಕ್ರ ವಾಹನಗಳ ಪಾರ್qಂಗ್‍ಗಳಿಗೆ ಅವಕಾಶವಿದೆ.

ಮಂತ್ರಿ ಸ್ಕೈರ್ ಬೆಂಗಳೂರಿನ ಮನರಂಜನಾ ಮತ್ತು ಶಾಪಿಂಗ್ ತಾಣವಾಗಿದೆ. ನಂ. 1, ಸಂಪಿಗೆ ರಸ್ತೆ, ಮಲ್ಲೇಶ್ವರ ವಿಳಾಸದಲ್ಲಿ ಇರುವ ಈ ಕೇಂದ್ರವು 250 ಬಿಡಿ ಮಳಿಗೆಗಳನ್ನು ಹೊಂದಿದ್ದು, 10,000 ಬ್ರಾಂಡ್‍ಗಳು, 38 ವಿವಿಧ ವರ್ಗಗಳಲ್ಲಿ ಹೊಂದಿದೆ.

BMRCL and Mantri Developers PPP success Sampige Station witness 116% increase in the metro traffic

ಮಂತ್ರಿ ಸ್ಕೈರ್‍ಗೆ ಪ್ರತಿ ತಿಂಗಳು ಸುಮಾರು 14 ಲಕ್ಷ ಶಾಪರ್ಸ್‍ಗಳು ಭೇಟಿ ನೀಡಲಿದ್ದು, ಏಳು ತಿಂಗಳ ಅವಧಿಯಲ್ಲಿ 10 ಮಿಲಿಯನ್ ಶಾಪರ್ಸ್‍ಗಳು ಭೇಟಿ ನಿಡಿದ ದಾಖಲೆ ಸೆಪ್ಟೆಂಬರ್ 2010ರಲ್ಲಿ ಆಗಿದೆ. 2016ರಲ್ಲಿ 100 ಮಿಲಿಯನ್‍ಶಾಪರ್ಸ್‍ಗಳು ಭೇಟಿ ನೀಡಿದ್ದಾರೆ. ಇದು, ಭಾರತೀಯ ಶಾಪಿಂಗ್ ಸೆಂಟರ್‍ಗಳಲ್ಲಿಯೇ ಒಂದು ದಾಖಲೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
a joint venture between Bangalore Metro Rail Corporation Ltd (BMRCL) and Mantri Developers, the Mantri Square Sampige Station has witnessed a 116% increase in the metro traffic. An exemplary model of Private and Public Partnership, this station, directly connecting citizens to the most popular shopping mall of the city
Please Wait while comments are loading...