ಮೆಟ್ರೋ ಭದ್ರತಾ ಮುಖ್ಯಸ್ಥರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 3: ನಗರದಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದ್ದು, ಇನ್ನು ಮುಂದೆ ಜನರ ದಟ್ಟಣೆಯ ಸಮಸ್ಯೆ ಎದುರಾಗಲಿರುವುದರಿಂದ ತನ್ನಲ್ಲಿರುವ ಭದ್ರತಾ ವಿಭಾಗದ ಮೇಲೆ ಹದ್ದಿನ ಕಣ್ಣಿಡಲು ಐಪಿಎಸ್ ಶ್ರೇಣಿಯ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳಲು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ನಿರ್ಧರಿಸಿದೆ.

ಈಗಾಗಲೇ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದ್ದು, ಐಪಿಎಸ್ ಅಧಿಕಾರಿಯೊಬ್ಬರನ್ನು ಮೆಟ್ರೋಗೆ ನಿಯೋಜನೆಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರತಾಪ್ ಸಿಂಗ್ ಖರೋಲಾ ತಿಳಿಸಿದ್ದಾರೆ.

BMRCL looking for an IPS officer to lookafter its security

ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ಯೋಜನೆಯ 42 ಕಿ.ಮೀ. ದೂರದ ಫೇಸ್ 1 ಭಾಗವನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸದ್ಯಕ್ಕಿರುವ ದಿನಂಪ್ರತಿ 1.7 ಲಕ್ಷ ಪ್ರಯಾಣಿಕರ ಸಂಖ್ಯೆ 5 ಲಕ್ಷಕ್ಕೆ ಆನಂತರ 7 ಲಕ್ಷಕ್ಕೇರುವ ಸಾಧ್ಯತೆಯಿದೆ. ಹಾಗಾಗಿ, ಭದ್ರತಾ ಸಮಸ್ಯೆ ತಲೆದೋರಬಹುದು ಎಂಬುದು ಬಿಎಂಆರ್ ಸಿಎಲ್ ನ ಆಲೋಚನೆಯಾಗಿದೆ.

ಉಗ್ರವಾದಿಗಳ ಭೀತಿ: ಬೆಂಗಳೂರು ನಗರವು ಕೆಲವಾರು ವರ್ಷಗಳಿಂದ ಉಗ್ರರ ಹಿಟ್ ಲಿಸ್ಟ್ ನಲ್ಲಿರುವ ಪ್ರಮುಖ ನಗರವಾಗಿದೆ. ಈ ಹಿನ್ನೆಲೆಯಲ್ಲಿ ಆಲೋಚಿಸಿದಾಗ, ಮೆಟ್ರೋ ಪ್ರಯಾಣಿಕರ ಸಂಖ್ಯೆಯು ಗಣನೀಯವಾಗಿ ಏರಿತೆಂದರೆ ಭದ್ರತೆಗೂ ಸವಾಲುಗಳು ಬಂದೊದಗಲಿವೆ. ಹಾಗಾಗಿಯೇ, ಐಪಿಎಸ್ ಮಟ್ಟದ ಅಧಿಕಾರಿಯೊಬ್ಬರನ್ನು ನಿಯೋಜಿಸಿಕೊಳ್ಳಲು ಚಿಂತನೆ ನಡೆಸಲಾಗಿತ್ತು ಎಂದು ಖರೋಲಾ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bangalore Metro Rail Corporation Limited (BMRCL) is now feeling the need for an IPS officer to head its security division.
Please Wait while comments are loading...