ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್‌ 4ರಿಂದ ಮೆಟ್ರೋ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

By Nayana
|
Google Oneindia Kannada News

ಬೆಂಗಳೂರು, ಮೇ 19: ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹಾಗೂ ನೌಕರರ ನಡುವಿನ ಕಲಹ ಬಗೆಹರಿಯುವಂತೆ ಕಾಣುತ್ತಿಲ್ಲ. ಇದೀಗ ಮೂರನೇ ಬಾರಿಕೆ ಮೆಟ್ರೋ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಜೂ.4ರಂದು ಬಿಎಂಆರ್‌ಸಿಎಲ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಬಿಎಂಆರ್‌ಸಿಎಲ್ ಮತ್ತು ನೌಕರರ ಸಂಘದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಮೇ 28ರವರೆಗೆ ಸಭೆಗಳನ್ನು ಮಾಡಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು.

ಹೈಕೋರ್ಟ್ ವಿಚಾರಣೆ ಮುನ್ನ ನೌಕರರೊಂದಿಗೆ ಸಭೆ ಇಲ್ಲ: ಮೆಟ್ರೋ ನಿಗಮಹೈಕೋರ್ಟ್ ವಿಚಾರಣೆ ಮುನ್ನ ನೌಕರರೊಂದಿಗೆ ಸಭೆ ಇಲ್ಲ: ಮೆಟ್ರೋ ನಿಗಮ

ಮೇ 3ರಂದು ಸಭೆ ನಡೆಸಿದ ಬಿಎಂಆರ್‌ಸಿಎಲ್, ಕೆಲ ಸ್ಪಷ್ಟನೆಗಳನ್ನು ನೀಡಿತ್ತು. ಆದರೆ ಅದರಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಭರವಸೆ ದೊರೆತಿರಲಿಲ್ಲ. ಮೇ 13ರಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಸಭೆಯ ನಡೆದಿದ್ದು, ಆ ಸಭೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.

BMRCL employees indefinite strike from June 4

ಈ ಹಿಂದೆ ಏ.28ರಂದು ಮುಷ್ಕರ ನಡೆಸಲಾಗುವುದು ಎಂದು ಸಂಘ ತಿಳಿಸಿತ್ತು. ಆದರೆ ಸಭೆ ಮಾಡಲು ಹೈಕೋರ್ಟ್ ಸೂಚಿಸಿದ್ದರಿಂದ ಮುಷ್ಕರದ ನಿರ್ಧಾರ ಕೈಬಿಡಲಾಗಿತ್ತು. ಈಗ ಮತ್ತೆ ಸಭೆ ಮಾಡಿ ಜೂ.4ರಂದು ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.

ಮೆಟ್ರೋದಲ್ಲಿ ಮುಂಜಾನೆ 5.45ರಿಂದ ಮಧ್ಯಾಹ್ನ 2ರವರೆಗೆ ಮೊದಲ ಪಾಳಿ, ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ಎರಡನೇ ಪಾಳಿ ಹಾಗೂ ರಾತ್ರಿ 10ರಿಂದ ಮುಂಜಾನೆ 6ರವರೆಗೆ ಮೂರನೇ ಪಾಳಿ ವ್ಯವಸ್ಥೆ ಮಾಡಲಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ನೌಕರರು ಪರಸ್ಪರ ಹೊಂದಾಣೀಕೆ ಮಾಡಿಕೊಂಡು ಪಾಳಿ ಅದಲು ಬದಲು ಮಾಡಿಕೊಳ್ಳುವ ಅವಕಾಶವಿತ್ತು. ಇತ್ತೀಚೆಗೆ ಈ ಹೊಂದಾಣಿಕೆ ಕ್ರಮವನ್ನು ಮುಂದುವರೆಸಬಾರದೆಂದು ಸೂಚಿಸಲಾಗಿದೆ. ಇದೂ ಕೂಡ ನೌಕರರಿಗೆ ಬೇಸರ ತಂದಿದೆ.

ನವದೆಹಲಿ ಮೆಟ್ರೋಗೆ ಹೋಲಿಸಿದರೆ ಬೆಂಗಳೂರು ಮೆಟ್ರೋದಲ್ಲಿ ನೌಕರರಿಗೆ ಕಡಿಮೆ ವೇತನವಿದೆ. ಮೂರು ವರ್ಷಗಳ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ವೇತನ 80 ಸಾವಿರದಿಂದ 3 ಲಕ್ಷ ರೂ.ವರೆಗೆ ಹೆಚ್ಚಾಗಿದೆ. ನಮ್ಮ ವೇತನ ಇದ್ದಂತೆಯೇ ಇದೆ ಎಂದು ನೌಕರರು ದೂರಿದ್ದಾರೆ.

English summary
Alleging that the BMRCL was unpromising on fulfill their demand hundreds of employees on Namma Metro have decided to go on indefinite strike from June 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X