ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ರೂ ನಾಣ್ಯವನ್ನು ನಿರಾಕರಿಸುವಂತಿಲ್ಲ: ಬಿಎಂಆರ್‌ಸಿಎಲ್‌ ಸೂಚನೆ

By Nayana
|
Google Oneindia Kannada News

Recommended Video

10 ರೂ ನಾಣ್ಯವನ್ನ ನಿರಾಕರಿಸುವಿನಂತಿಲ್ಲ ಎಂದು ಸೂಚಿಸಿದ ಬಿ ಎಂ ಆರ್ ಸಿ ಎಲ್

ಬೆಂಗಳೂರು, ಆಗಸ್ಟ್ 9: ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಎಲ್ಲರೂ ಹಿಂದುಮುಂದು ನೋಡುತ್ತಾರೆ, ಆರ್‌ಬಿಐ ಈ ಕುರಿತು ಸ್ಪಷ್ಟನೆ ನೀಡಿದ್ದರೂ ಕೂಡ ಹತ್ತು ರೂಪಾಯಿ ನಾಣ್ಯವನ್ನು ಎಲ್ಲಿಯೂ ಸ್ವೀಕರಿಸುವುದಿಲ್ಲ.

ನಮ್ಮ ಮೆಟ್ರೋದ ಹೊಸ ಪಾರ್ಕಿಂಗ್‌ನಲ್ಲಿ ಶುಲ್ಕ ಪಾವತಿಸುವಾಗ 10 ರೂ. ನಾಣ್ಯ ನಿರಾಕರಿಸಿದ ಗುತ್ತಿಗೆ ಕಂಪನಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಮೆಟ್ರೋ ನಿಗಮ ನೀಡಿದೆ.

ಸಿಲ್ಕ್‌ ಬೋರ್ಡ್‌ ಸಿಗ್ನಲ್‌ ರಹಿತ ಕಾರಿಡಾರ್ ನಿರ್ಮಾಣಕ್ಕೆ ಮತ್ತೊಂದು ಟೆಂಡರ್‌ಸಿಲ್ಕ್‌ ಬೋರ್ಡ್‌ ಸಿಗ್ನಲ್‌ ರಹಿತ ಕಾರಿಡಾರ್ ನಿರ್ಮಾಣಕ್ಕೆ ಮತ್ತೊಂದು ಟೆಂಡರ್‌

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ವಿಕೆಡ್‌ ರೈಡ್‌ ಕಂಪನಿಗೆ ಹೊಸದಾಗಿ ಗುತ್ತಿಗೆ ನೀಡಲಾಗಿದೆ. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಗೆ ಪ್ರತಿ ನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ.

BMRCL directs contractor to accept Rs 10 coin

ಜನದಟ್ಟಣೆ ವಿಪರೀತವಾಗಿದೆ. ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ ಮಾಡಿ ವೈಟ್‌ಫೀಲ್ಡ್‌ ಕಡೆ ಹೋಗುವ ಉದ್ಯೋಗಿಗಳು ಹೆಚ್ಚಿದ್ದಾರೆ. ಹೊಸದಾಗಿ ಪಾರ್ಕಿಂಗ್‌ ಮಾಡಿ ವೈಟ್‌ಫೀಲ್ಡ್‌ ಕಡೆ ಹೋಗುವ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹೊಸದಾಗಿ ಪಾರ್ಕಿಂಗ್‌ ವ್ಯವಸ್ಥೆಯಾದ ಬಳಿಕ 10 ರೂ. ನಾಣ್ಯ ಸ್ವೀಕರಿಸದ ಸಮಸ್ಯೆ ಬೆಳಕಿಗೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಸೂಚನೆ ಪ್ರಕಾರ 10 ರೂ. ನಾಣ್ಯವನ್ನು ವಿನಿಮಯ ಮಾಡಿಕೊಳ್ಳದಿರುವುದು ತಪ್ಪಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಪ್ರಯಾಣಿಕರೊಬ್ಬರು ಬೈಕ್ ಪಾರ್ಕಿಂಗ್‌ ಶುಲ್ಕವಾಗಿ 10 ರೂ. ನಾಣ್ಯವನ್ನು ನೀಡಿದ್ದರು. ಇದನ್ನು ಸಿಬ್ಬಂದಿ ತೆಗೆದುಕೊಂಡಿರಲಿಲ್ಲ. ನಂತರ ಯಾರೂ ಕೂಡ ತೆಗೆದುಕೊಳ್ಳುತ್ತಿಲ್ಲ ಹಾಗಾಗಿ ನಾವು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು.

ನಂತರ ಪ್ರಯಾಣಿಕರು ಬಿಎಂಆರ್‌ಸಿಎಲ್‌ಗೆ ಟ್ವಿಟ್ಟರ್‌ ಮೂಲಕ ದೂರು ಸಲ್ಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿರುವ ನಿಗಮ 10 ರೂ. ನಾಣ್ಯವನ್ನು ಕಡ್ಡಾಯವಾಗಿ ಸ್ವೀಕರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

English summary
Following complaints and objections by the commuters, BMRCL has given direction to parking lot maintenance contractor to accept Rs.10 coin compulsory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X