ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಬ್ರಿಡ್ಜ್ ಕುಸಿದಿದೆ ವದಂತಿ ಸುಳ್ಳು: ಮಹೇಂದ್ರ ಜೈನ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜನವರಿ 3 : ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದ ಬ್ರಿಡ್ಜ್ ಕುಸಿದಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಶುದ್ಧ ಸುಳ್ಳು, ಇಂತಹ ವದಂತಿಗಳನ್ನು ನಂಬಬೇಡಿ ಎಂದು ಬಿಎಂಆರ್ ಸಿಎಲ್ ಮನವಿ ಮಾಡಿದೆ.

ವಿದ್ಯುತ್ ವ್ಯತ್ಯಯ : ಅರ್ಧದಾರಿಯಲ್ಲೇ ಕೈಕೊಟ್ಟ ಮೆಟ್ರೋವಿದ್ಯುತ್ ವ್ಯತ್ಯಯ : ಅರ್ಧದಾರಿಯಲ್ಲೇ ಕೈಕೊಟ್ಟ ಮೆಟ್ರೋ

ಮೈಸೂರು ರಸ್ತೆ ಮೆಟ್ರೋ ಸ್ಟೇಶನ್ ಡಿಸೆಂಬರ್ 30ರ ರಾತ್ರಿ ಕುಸಿದಿದೆ, ಈ ಬಗ್ಗೆ ವಿಡಿಯೋ ವೈರಲ್ ಆಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ವಾಸ್ತವವಾಗಿ ಡಿ.30ರ ರಾತ್ರಿ 10.15 ಕ್ಕೆ ನಾಯಂಡಹಳ್ಳಿ ನಿರ್ಮಾಣ ಹಂತದ ನಿಲ್ದಾಣದಲ್ಲಿ ಭಾರಿ ಎತ್ತರ ಗಾತ್ರ ಟ್ರಕ್ ವೊಂದು ತಗುಲಿ ಮೇಲ್ಛಾವಣಿ ಧ್ವಂಸಗೊಂಡಿತ್ತು.

BMRCL clarifies no damage in Metro station

ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಇದೇ ವಿಡಿಯೋವನ್ನು ತಪ್ಪು ಮಾಹಿತಿ ಜತೆಗೆ ಪತ್ರಿಕೆ ಹಾಗೂ ಚಾನಲ್ ಗಳಲ್ಲಿ ಬಿತ್ತರಿಸಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸ್ಪಷ್ಟನೆ ನೀಡಿದ್ದಾರೆ.

English summary
BMRCL has clarified that there were rumors about collapse in Mysuru road metro station bridge but there was nothing like incidents on the eve of new year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X