ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಕುಮಾರಸ್ವಾಮಿ ಹಾಗೂ ನಿಗಮ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಯಾವುದೇ ದೋಷವಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದೆ.

ಇದಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಒಂದೊಮ್ಮೆ ದೋಷಗಳಿದ್ದಲ್ಲಿ ಆ ಭಾಗದ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ರೈಲು ಏಕಮುಖ ಸಂಚಾರ ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ರೈಲು ಏಕಮುಖ ಸಂಚಾರ

ಟ್ರಿನಿಟಿ ಸರ್ಕಲ್ ಬಳಿ ಹನಿಕೂಮ್ ಪತ್ತೆಯಾದ ಕಾರಣ ಕೆಲಕಾಲ ಮೆಟ್ರೋವನ್ನು ಸ್ಥಗಿತಗೊಳಿಸಲಾಗಿತ್ತು. ಹಾಗೆಯೇ ಏಕಮುಖವಾಗಿ ಮೆಟ್ರೋ ಸಂಚರಿಸುವಂತೆ ತಿಳಿಸಲಾಗಿತ್ತು.

BMRCL and HDK clarified their stands on Metro pillar break

ಬಳಿಕ ಎಂಜಿನಿಯರ್‌ಗಳೊಂದಿಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅದು ರೈಲ್ವೆ ಟ್ರ್ಯಾಕ್‌ ಮೇಲೆ ಮಳೆ ನೀರು ಸರಾಗವಾಗಿ ಹರಿಯಲು ಬಿಟ್ಟಿರುವ ವ್ಯವಸ್ಥೆಯಷ್ಟೇ ಮೆಟ್ರೋ ಪಿಲ್ಲರ್ ಹಾಗೂ ಹನಿಕೂಮ್ ವ್ಯವಸ್ಥಿತವಾಗಿ ಲಾಕ್ ಆಗಿರದ ಕಾರಣ ಆತಂಕ ಸೃಷ್ಟಿಯಾಗಿತ್ತು. ಅದನ್ನು ಲಾಕ್ ಮಾಡಲು ಎಲ್ಲಾ ಕ್ರಮ ಕೈಗೊಳ್ಳಳಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಮಾರ್ಗದಲ್ಲಿ ಕೇವಲ 20 ಕಿ.ಮೀ ವೇಗದಲ್ಲಿ ಮಾತ್ರ ಮೆಟ್ರೋ ಸಂಚರಿಸುತ್ತಿದೆ.ಹಾಗೆಯೇ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ.

English summary
Chief minister HD Kumaraswamy caution the bmrcl take appropriate step for safety of the passangers and bmrcl clarified that there is know any break in the lane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X