ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ವಿಶೇಷ ಬ್ಲಾಗ್ ಇಲ್ಲಿದೆ ಓದಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 30: ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರನ್ನು ಸ್ಮರಿಸಲು ಪ್ರತ್ಯೇಕವಾದ ಬ್ಲಾಗ್ ಹಾಗೂ ಫೇಸ್ ಬುಕ್ ಪುಟವನ್ನು ಉತ್ಸಾಹಿಗಳು ನಿರ್ಮಿಸಿದ್ದಾರೆ. ಈ ಬಗ್ಗೆ ವಿವರಣೆ ಮುಂದಿದೆ.

ಆಗಸ್ಟ್ ತಿಂಗಳೆಂದರೆ ಭಾರತೀಯರಿಗೆ ವಿಶೇಷವಾದ ತಿಂಗಳು. ಪರಕೀಯರ ಆಳ್ವಿಕೆಯಿಂದ, ದಾಸ್ಯದ ಸಂಕೋಲೆಯಿಂದ ದೇಶ ಬಿಡುಗಡೆಗೊಂಡ ತಿಂಗಳಿದು. ಆದರೆ ಆ ಸ್ವಾತಂತ್ರ್ಯ ಅಷ್ಟು ಸುಲಭಕ್ಕೆ ದಕ್ಕಿದ್ದಲ್ಲ. ಅದರ ಹಿಂದೆ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿವೆ. ಸ್ವಾತಂತ್ರ್ಯ ಬಂದ ಅರವತ್ತೇ ವರ್ಷದಲ್ಲಿ ನಾವು ಅವರೆಲ್ಲರನ್ನೂ ಮರೆತೇಬಿಟ್ಟಿದ್ದೇವೆ.[ಸ್ವತಂತ್ರ ಸಂಗ್ರಾಮದಲ್ಲಿ ಬಿಜೆಪಿ, ಆರೆಸ್ಸೆಸ್ ಭಾಗವಹಿಸಿಲ್ಲ: ರಮ್ಯಾ]

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರನ್ನು ಕನಿಷ್ಠ ಈ ತಿಂಗಳಾದರೂ ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅಲ್ವಾ?. ಹಾಗಾಗಿ ಕಳೆದ ಆಗಸ್ಟ್ 1 ರಿಂದ ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ 'ಸುಮ್ಮನೇ ಬರಲಿಲ್ಲ ಸ್ವಾತಂತ್ರ್ಯ - ದಿನಕ್ಕೊಬ್ಬರು ದೇಶಭಕ್ತರ ಸ್ಮರಣೆ' ಯ ಎಂಬ ಸರಣಿಯನ್ನು ನಡೆಸುತ್ತಿದ್ದೇನೆ. ಬಹುತೇಕರಿಗೆ ಗೊತ್ತೇ ಇಲ್ಲದ ಅಜ್ಞಾತ ಬಲಿದಾನಿಗಳನ್ನು ಸ್ಮರಿಸುವ ಪ್ರಯತ್ನವಿದು.

 A blog Facebook page dedicated to Freedom Fighters of India

ವಿದುರಾಶ್ವತ್ಥದ ಬಲಿದಾನಿಗಳು, ಕಾರ್ನಾಡ ಸದಾಶಿವರಾಯರು, ಮೈಲಾರ ಮಹಾದೇವ, ದೋಂಡಿಯಾ ವಾಘ್, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಮುಂತಾದ ಕನ್ನಡ ನೆಲದ ವೀರರೂ ಸೇರಿದಂತೆ ಇಲ್ಲಿಯವರೆಗಿನ 24 ದೇಶಭಕ್ತರ ಕುರಿತ ಬರಹಗಳು ಈಗ 'ಭಾರತಪ್ರೇಮಿ ಬ್ಲಾಗ್' ನಲ್ಲಿ ಲಭ್ಯ. ಈ ಬ್ಲಾಗ್ ನ ಬರಹಗಳನ್ನು ಓದಿ, ಓದಿಸಿ,

ಈ ಅಜ್ಞಾತ ಸ್ವಾತಂತ್ರ್ಯ ವೀರರ ಕುರಿತು ಅರಿಯೋಣ. ವಿಶೇಷವಾಗಿ ಮಕ್ಕಳಿಗೆ ಈ ದೇಶಭಕ್ತರ ಕುರಿತು ಹೇಳುವ ಪ್ರಯತ್ನ ಮಾಡೋಣ. ಫೇಸ್ ಬುಕ್ ಪುಟ 'ದೇಶಾಭಿಮಾನಿ' ಯಲ್ಲೂ ಈ ಬರಹಗಳು ಲಭ್ಯವಿವೆ. ಈ ಸರಣಿ ಆಗಸ್ಟ್ 31 ರವರೆಗೆ ಪ್ರತಿದಿನ ಮುಂದುವರೆಯಲಿದೆ. ಈ ಬರಹಗಳ ಮೂಲಕ ಸ್ವಾತಂತ್ರ್ಯದ ಶ್ರಾವಣ ಅರ್ಥಪೂರ್ಣವಾಗಲಿ.

ಈ ವಿಶೇಷ ಬ್ಲಾಗ್(ಭಾರತಪ್ರೇಮಿ) ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ

ಫೇಸ್ ಬುಕ್ ಪುಟದ ಲಿಂಕ್ ಇಲ್ಲಿದೆ ಕ್ಲಿಕ್

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To create awareness about the Nation, freedom fighters, Culture and heritage a dedicate Facebook page and a blog has been created. This blog has more than 30 articles about the unsung heroes of the India.
Please Wait while comments are loading...